ಉಪ್ಪುಂದ (ಜು,22):ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಅಧ್ಯಕ್ಷರಾದ ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರು ವರಲಕ್ಷ್ಮೀ ಕೋ -ಆಪರೇಟಿವ್ ಸೊಸೈಟಿಯ ನೌಕರರಿಗೆ, ನಿರ್ದೇಶಕರಿಗೆ ಹಾಗೂ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಿಗೆ ತನ್ನ ಸ್ವಂತ ಹಣದಲ್ಲಿ ಸುಮಾರು 1 ಲಕ್ಷ ರೂ, ಮೌಲ್ಯದ ಹೆಲ್ತ್ ಕಾರ್ಡ್ ನ್ನು ವಿತರಿಸಿದರು.
ತಮ್ಮ ಸಂಸ್ಥೆಯಲ್ಲಿ ದುಡಿಯುವ ಸಿಬ್ಬಂದಿಗಳಿಗೆ ಆರೋಗ್ಯ ತುರ್ತು ಸಂದರ್ಭದಲ್ಲಿ ಈ ಹೆಲ್ತ್ ಕಾರ್ಡ್ ಬಳಸಿ ಚಿಕಿತ್ಸೆ ಪಡೆಯಲು ಅನುಕೂಲವಾಗುವ ಹಿನ್ನೆಲೆಯಲ್ಲಿ ಈ ಕಾರ್ಡ್ ನ್ನು ವಿತರಿಸಲಾಗಿದೆ ಎಂದು ಶ್ರೀ ಗೋವಿಂದ ಬಾಬು ಪೂಜಾರಿಯವರು ತಿಳಿಸಿದ್ದಾರೆ.