ತನ್ನ ದುಡಿಮೆಯ ಒಂದು ಭಾಗವನ್ನು ಅಶಕ್ತರ ಪಾಲಿಗೆ ಮೀಸಲಿಟ್ಟು, ನಿರಂತರವಾಗಿ ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಉದ್ಯಮಿ, ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ) ನ್ನು ಹುಟ್ಟುಹಾಕಿ, ಆ ಮೂಲಕ ಕಡು ಬಡವರ ಬದುಕಿನಲ್ಲಿ ಆಶ್ರಯದಾತ, ಅನ್ನದಾತ ಮತ್ತು ಆರೋಗ್ಯದಾತರಾಗಿದ್ದಾರೆ.
ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಆಶ್ರಯ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಹಿನ್ನೆಲೆಯಲ್ಲಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಈ ಟ್ರಸ್ಟ್ ನ್ನು ಸ್ಥಾಪಿಸಿದ್ದು, ಈ ಟ್ರಸ್ಟ್ ವತಿಯಿಂದ ಈಗಾಗಲೇ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್, ಪುಸ್ತಕ, ವಿದ್ಯಾರ್ಥಿವೇತನ, ಕ್ರೀಡಾಪಟುಗಳಿಗೆ ಧನಸಹಾಯ, ಅಶಕ್ತ ಹಿರಿಯ ನಾಗರಿಕರಿಗೆ, ಅನಾಥ ಆಶ್ರಮಗಳಿಗೆ, ಅಂಗವಿಕಲರ ಆಶ್ರಮಗಳಿಗೆ, ಯಕ್ಷಗಾನ ಕಲಾವಿದರಿಗೆ ಸಹಾಯ ಹಸ್ತ ಚಾಚಿರುತ್ತಾರೆ.
ಬೇಸಿಗೆಯಲ್ಲಿ ಬೈಂದೂರು ತಾಲೂಕಿನ ಬಿಜೂರು, ಉಪ್ಪುಂದ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಿದ್ದಾರೆ. ವೈದ್ಯಕೀಯವಾಗಿ ಅನಾರೋಗ್ಯ ಮತ್ತು ಮಾರಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ವೈದ್ಯಕೀಯ ನೆರವು ನೀಡಿದ್ದಾರೆ. ಕೊರೋನ ಸಂದರ್ಭದಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ದಿನಬಳಕೆಯ ದಿನಸಿ ವಸ್ತುಗಳ ಫುಡ್ ಕಿಟ್ ಹಾಗೂ ಮೆಡಿಕಲ್ ಕಿಟ್ ಗಳನ್ನು ನೀಡಿದ್ದಾರೆ.
ಬೈಂದೂರು ಮತ್ತು ಕುಂದಾಪುರ ತಾಲೂಕಿನ ಹಲವು ಗ್ರಾಮಗಳಿಗೆ ಸ್ವತಃ ಶ್ರೀ ಗೋವಿಂದ ಬಾಬು ಪೂಜಾರಿಯವರೇ ಭೇಟಿ ನೀಡಿ ಜನತೆಯ ಕಷ್ಟ -ಸುಖ ವಿಚಾರಿಸಿ ಫುಡ್ ಕಿಟ್ ವಿತರಿಸಿದ್ದಾರೆ.
ಆಶ್ರಯದಾತರಾಗಿರುವ ಶ್ರೀ ಗೋವಿಂದ ಬಾಬು ಪೂಜಾರಿಯವು ಆಶ್ರಯ ಇಲ್ಲದಿರುವ ಕಡು ಬಡವರಿಗೆ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈಗಾಗಲೇ ಮೂರು ಮನೆಗಳನ್ನು ಹಸ್ತಾಂತರಿಸಿದ್ದು , ಇದೀಗ ನಾಲ್ಕನೇ ಮನೆ ಹಸ್ತಾಂತರಕ್ಕೆ ಸಿದ್ದಗೊಳ್ಳುತ್ತಿದೆ. ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯಂಹಿತ್ಲು ನಿವಾಸಿ ಬೇಬಿ ಸುಬ್ಬಯ್ಯ ದೇವಾಡಿಗ ಅವರ ಕುಟುಂಬಕ್ಕೆ ಶಾಶ್ವತ ಸೂರು ನಿರ್ಮಿಸಿ ಹಸ್ತಾಂತರ ಮಾಡಲಾಗಿದೆ. ಉಪ್ಪುಂದ ಗ್ರಾಮದ ಕಾಸನಡಿಯಲ್ಲಿ ನಿರ್ಮಿಸಿರುವ “ವರಲಕ್ಷ್ಮಿ ನಿವಾಸ ” ವಿಜಯ ರಮೇಶ ಪೂಜಾರಿಯವರಿಗೆ ಶ್ರೀ ಗೋವಿಂದ ಬಾಬು ಪೂಜಾರಿಯವರ ಹುಟ್ಟುಹಬ್ಬದ ಶುಭದಿನದಂದು ಹಸ್ತಾಂತರಲಾಗಿತ್ತು.
ಮೂರನೆ ಮನೆಯನ್ನು ಪುತ್ರ ಪ್ರಜ್ವಲ್ ನ ಹುಟ್ಟುಹಬ್ಬದ ಸಂದರ್ಭದಲ್ಲಿ, ಕೊಡೇರಿಯ ರವಳುಮನೆ ನಾಗಮ್ಮ ಬಡ ಕುಟುಂಬಕ್ಕೆ ಶ್ರೀ “ವರಲಕ್ಷ್ಮಿ ನಿಲಯ” ವನ್ನು ಇತ್ತೀಚೆಗೆ ಹಸ್ತಾಂತರಿಸಿದ್ದಾರೆ. ನಾಲ್ಕನೇ ಮನೆ ತ್ರಾಸಿ ಸಮೀಪದ ಕಂಚುಗೋಡು ಭಗತ್ ನಗರದ ಶ್ರೀಮತಿ ಪುಷ್ಪಾ ಉಲ್ಲಾಸ್ ದಂಪತಿಗೆ ಅಗಸ್ಟ್ 15 ರಂದು ಹಸ್ತಾಂತರಿಸಲಾಗುತ್ತಿದೆ.
ಮನೆ ಕಟ್ಟಬೇಕೆಂದು ನೆಲಗಟ್ಟು ಹಾಕಿ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮನೆ ನಿರ್ಮಾಣದ ಕಾರ್ಯ ನಡೆಸಲಾಗದೆ ಅಸಹಾಯಕ ಸ್ಥಿತಿಯಲ್ಲಿರುವ ಶ್ರೀಮತಿ ಪುಷ್ಪಾ ಉಲ್ಲಾಸ್ ದಂಪತಿಯ ಮನೆಯ ಕನಸನ್ನು ಪೂರ್ಣಗೊಳಿಸಲು ಶ್ರೀ ಗೋವಿಂದ ಬಾಬು ಪೂಜಾರಿಯವರು ತಾನೆ ಸ್ವತಃ ಮುಂದೆ ನಿಂತು ಸುಸಜ್ಜಿತ ಹಾಗೂ ಪೂರ್ಣ ಪ್ರಮಾಣದಲ್ಲಿ ಮನೆ ನಿರ್ಮಿಸಿ ಅಗಸ್ಟ್ 15ರ ಸ್ವಾತಂತ್ರ್ಯೋತ್ಸವದ ದಿನದಂದು ಫಲಾನುಭವಿಗೆ
ಹಸ್ತಾಂತರಿಸಲಿದ್ದಾರೆ.
ಇದರ ಜೊತೆಗೆ ತನ್ನ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಡು ಬಡವರಿಗೆ ಪ್ರತಿ ವರ್ಷ ಎರಡು ಮನೆ ನಿರ್ಮಾಣ ಮಾಡುವ ಧ್ರಡ ಸಂಕಲ್ಪ ಮಾಡಿದ್ದಾರೆ. ಇಂತಹ ಸಮಾಜಸೇವಕ, ಕೊಡುಗೈ ದಾನಿದಾನಿಯಾಗಿರುವ ಶ್ರೀ ಗೋವಿಂದ ಬಾಬು ಪೂಜಾರಿಯವರಿಗೆ ಶ್ರೀ ಕೊಲ್ಲೂರು ಶ್ರೀ ಮೂಕಾಂಬಿಕೆ ಆಯುಷ್ಯ, ಆರೋಗ್ಯ, ಸಂಪತ್ತನ್ನು ನೀಡಿ ಅನುಗ್ರಹಿಸಲಿ, ಇವರ ಸಮಾಜ ಸೇವೆ ಸದಾ ಮುಂದುವರಿಯಲಿ ಎನ್ನುವುದು ನಮ್ಮ ಬಯಕೆ ಮತ್ತು ಹಾರೈಕೆ.
✍️ ಈಶ್ವರ ಸಿ ನಾವುಂದ
ಚಿಂತಕ ಮತ್ತು ಬರಹಗಾರರು 9833259692