ಶಿರ್ವ( ಜು, 31) : ಒಂದು ಸಂಸ್ಥೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಸೇವೆಯು ಅತ್ಯಂತ ಅಮೂಲ್ಯ ಹಾಗೂ ಉಪಯುಕ್ತವಾದುದು. ವರ್ಗವಾರು ಕರ್ತವ್ಯವೆನ್ನವುದು ಜವಾಬ್ದಾರಿಯ ಹಿನ್ನೆಲೆಯಲ್ಲಿ ಇದ್ದರೂ ಕೂಡ ಪ್ರತಿಯೊಬ್ಬರ ಸೇವೆಯೂ ಪರಿಗಣಿತ ಹಾಗೂ ಶ್ರೇಷ್ಠ ವಾದುದು ಎಂದು ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಧರ್ಮಗುರುಗಳಾದ ಡೆನಿಸ್ ಡೇಸಾ ಸಂತ ಮೇರಿ ಹೇಳಿದರು.
ಅವರು ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಆಡಳಿತ ಸಿಬ್ಬಂದಿ ಶ್ರೀಮತಿ ಅಲ್ವಿರಾ ಕ್ಲೇರೆನ್ಸ್ ಫೆರ್ನಾಂಡಿಸ್ ರವರ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಪ್ರಾಂಶುಪಾಲರಾದ ಡಾ. ಹೆರಾಲ್ಡ್ ಮೋನಿಸ್ ರವರು ಅತಿಥಿಗಳನ್ನು ಸ್ವಾಗತಿಸಿದರು. ಆಡಳಿತ ಮಂಡಳಿಯ ಪರವಾಗಿ ಶ್ರೀಮತಿ ಡೊರಿನ್ ಹಾಗೂ ಅಧ್ಯಾಪಕ ವ್ರಂದ ದ ಪರವಾಗಿ ಶ್ರೀಮತಿ ರೀಮಾ ಲೋಬೊ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶ್ರೀ ಲೊರೆನ್ಸ್ ಸನ್ಮಾನ ಪತ್ರ ವಾಚಿಸಿದರು.
ಕಾಲೇಜು ಮತ್ತು ಆಡಳಿತ ಮಂಡಳಿಯ ವತಿಯಿಂದ ನಿವೃತ್ತರಾದ ಶ್ರೀಮತಿ ಅಲ್ವಿರಾ ರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕಿ ಯಶೋಧಾ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕು.ದಾಕ್ಷಾಯಿಣಿ ಉಪಸ್ಥಿತರಿದ್ದರು. ಶ್ರೀಮತಿ ತನೂಜ, ಶ್ರೀಮತಿ ದಿವ್ಯಾಶ್ರೀ, ಕು. ಪದ್ಮಾಸಿನಿ ಪ್ರಾಥಿ೯ಸಿದರು, ಶ್ರೀಮತಿ ಪ್ಲೋರಿನ್ ವಂದಿಸಿ, ಶ್ರೀಮತಿ ಶರ್ಮಿಳಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು,ಆಡಳಿತ ಮಂಡಳಿಯವರು,ಬೋಧಕ ಬೋಧಕೇತರ ಬಂಧುಗಳು ಉಪಸ್ಥಿತರಿದ್ದರು.