ಮೋಹವೋ, ವ್ಯಾಮೋಹವೋ … ಸೆಳತಕೆ ಒಳಗಾಗಿ ಬಂದಿಯಾಗುತಿದ್ದೇವೆ….
ಯಾರಿಗೂ ತಿಳಿಯದೆ, ತಿಳಿದು ಗೊತ್ತಾಗದೆ ಹೊಟ್ಟೆಯ ಚೀಲ ತುಂಬಿಸಲು…
ಜೀವದ ಹಂಗು ತೊರೆದು ಎರಡು ಅಲೆಗಳಿಗೆ ಎದೆ ಕೊಟ್ಟು
ಈಜಿದ್ದು ಗೊತ್ತಾಗಲೇ ಇಲ್ಲಾ ! ಬದುಕಿನ ದೋಣಿ ಮುಳುಗಿದ್ದು ಗೊತ್ತಾಗುವ ಮುನ್ನವೇ…
ಆಸೆ ಭಾಸೆಗಳ ಆಡುವು ಇಟ್ಟಿದ್ದು ನಿನ್ನ ಒಳ ಮನಸಿಗು ಗೊತ್ತಾಗಲಿ …!!! ನೀರಿನ ಸೆಳತದಲ್ಲಿ ಸಿಕ್ಕಿ ಈಗಷ್ಟೇ ದಡಕ್ಕೆ ಬರುತ್ತಿರುವ ದೋಣಿಗೆ
ಮಹತ್ವದ ಸೂಚನೆಯಂತೆ ಏಳುತಿದೆಯಂತೆ ಮೂರನೇ ಅಲೆ ಈ ಅಲೆಗಳಿಗೆ ಬೆಲೆ ಕೊಟ್ಟು ಬೆಲೆ ಬಾರದ ವಸ್ತು ಆಗಿದ್ದಾನೆ ಅವನು ..
ಮನಸು -ಕನಸು ಮಾರಿದ ಉಸಿರಾಡುವ ಈ ಜೀವ ಬದುಕಿ ಇರುವುದೇ ಒಂದು ವಿಸ್ಮಯ ಇನ್ನೊಮ್ಮೆ ನೀ ಬಂದಿಯಾದರೆ ಆ ಉಸಿರು ನಿಂತು ಹೋಗಬಹುದು……!
✍️ಈಶ್ವರ ಸಿ ನಾವುಂದ