ಬೆಳಗಾವಿ (ಆ, 2) : ಜಿಲ್ಲೆಯ ಸದಗಾಲ ಗ್ರಾಮದ ಡಾ| ಪ್ರಕಾಶ ಎಮ್. ಭೋಜೆಯವರು ಒರ್ವ
ಸೃಜನಶೀಲ ಶಿಕ್ಷಕರು, ಸಾಹಿತಿ, ಹಾಗೂ ಲೇಖಕರಾಗಿದ್ದಾರೆ. ಇವರು ತಮ್ಮ ಶಿಕ್ಷಣ ಜೊತೆಗೆ ಬಡ ಮಕ್ಕಳಿಗೆ ಉಚಿತ ಪಾಠ ಬೋಧನೆ ಮಾಡಿ ಜ್ಞಾನ ದಾಸೋಹಿಯಾಗಿ ಪ್ರೇರಣೆರಾಗಿದ್ದಾರೆ. ಇವರ ಶಿಕ್ಷಣ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಸಮಾಜ ಸೇವೆಯಲ್ಲಿನ ಗಣನೀಯ ಸೇವೆ ಹಾಗೂ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಗುರುತಿಸಿ ತುಮಕೂರಿನಲ್ಲಿ ನಡೆಯಲಿರುವ ಪ್ರಥಮ ರಾಜ್ಯ ಗುರುಕುಲ ಸಾಹಿತ್ಯ ಸಮ್ಮೇಳನದಲ್ಲಿ ಗುರುಕುಲ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಗುರುಕುಲ ಕಲಾ ಪ್ರತಿಷ್ಠಾನ (ರಿ) ರಾಜ್ಯ ಘಟಕದ ಸಂಸ್ಥೆಯ ಅಧ್ಯಕ್ಷಾರದ ಹುಲಿಯೂರುದುರ್ಗ ಲಕ್ಷ್ಮೀ ನಾರಾಯಣ್ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವರದಿ: ಬಸವರಾಜ ಎಸ್. ಬಾಗೇವಾಡಿಮಠ