ಹಳ್ಳಿಹೊಳೆ (ಆ, 2) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ಇದರ ಕೊಲ್ಲೂರು ವಲಯದ ಹಳ್ಳಿಹೊಳೆ ಒಕ್ಕೂಟದ ಸಂಘದ ಸದಸ್ಯರಿಗೆ ಸುಮಾರು 7.59 ಲಕ್ಷಕ್ಕೂ ಹೆಚ್ಚು ಲಾಭಾಂಶ ಮೊತ್ತವನ್ನು ಆಗಸ್ಟ್ 01ರಂದು ವಿತರಣೆ ಮಾಡಲಾಯಿತು.
ಲಾಭಾಂಶ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶಂಕರ್ ನಾಯ್ಕ ರವರು ವಹಿಸಿದ್ದರು. ವಲಯದ ಮೇಲ್ವಿಚಾರಕರಾದ ಶ್ರೀ ರಾಮ. ಎನ್ ರವರು ಸದಸ್ಯರಿಗೆ ಮಾಹಿತಿ ನೀಡಿದರು. ಸೇವಾಪ್ರತಿನಿಧಿ ಕೃಷ್ಣ ನಾಯ್ಕ್ ಹಾಗೂ ಒಕ್ಕೂಟದ ಪದಾಧಿಕಾರಿಗಳು ಜೈ ಭುವನೇಶ್ವರಿ ಸಂಘದ ಸದಸ್ಯರಿಗೆ ಸಾಂಕೇತಿಕವಾಗಿ ಲಾಭಂಶವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಐವತ್ತಕ್ಕೂ ಹೆಚ್ಚು ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಸಾವಿತ್ರಿಯವರು ಸ್ವಾಗತಿಸಿದರು. ಕೃಷ್ಣ ರವರು ವಂದಿಸಿದರು.