ಕುಂದಾಪುರ (ಆ, 10) : ಈ ವರ್ಷದ 10ನೇ ತರಗತಿಯ ಪರೀಕ್ಷೆ ವಿದ್ಯಾರ್ಥಿಗಳಿಗೆ ಸಾಕಷ್ಟು ಗೊಂದಲವನ್ನು ಸೃಷ್ಟಿಸಿದರೂ, ಅಂತಿಮವಾಗಿ ಬಹು ಆಯ್ಕೆಯ ಆಧಾರದ ಮೇಲೆ ಪರೀಕ್ಷೆ ನಡೆಸಿ, ನಿನ್ನೆ ಫಲಿತಾಂಶ ಹೊರಬಂದಿದೆ.
ಫಲಿತಾಂಶ ಪಟ್ಟಿಯಲ್ಲಿ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ದಾಖಲೆ ನಿರ್ಮಿಸಿದ್ದು, ವಿದ್ಯಾರ್ಥಿಗಳಾದ ಅನುಶ್ರೀ ಶೆಟ್ಟಿ, ಪ್ರಣೀತ ಹಾಗೂ ಸೃಜನ್ ಭಟ್ 625ಕ್ಕೆ 625 ಅಂಕಗಳನ್ನು ಪಡೆದು ಹೊಸ ಭಾಷ್ಯ ಬರೆದಿದ್ದಾರೆ.
ಇವರೊಂದಿಗೆ ಸತ್ಯೇಂದ್ರ ಭಟ್, ಸಿಂಚುಶ್ರೀ, ವಾಸವಿ ಬೋಳಾರ್ 623 ಅಂಕಗಳನ್ನು ಪಡೆದಿರುವುದು ಸಂಸ್ಥೆಗೆ ಹೆಮ್ಮೆ ತಂದಿರುತ್ತದೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಸಾಧಕ ಬಾಧಕಗಳು ಬಂದೊದಗಿದರೂ ನಿರಂತರ ಪ್ರಯತ್ನ, ಶಿಕ್ಷಕರ ಅವಿರತ ಶ್ರಮ ಹಾಗೂ ಪೋಷಕರ ಪ್ರೇರಣೆಯೊಂದಿಗೆ ವಿದ್ಯಾರ್ಥಿಗಳು ದಾಖಲೆ ನಿರ್ಮಿಸಿರುವುದು ಗಮನಾರ್ಹ ಸಂಗತಿ.
ಹೆಮ್ಮೆಯ ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಚಾಲಕರಾದ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿ , ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.