ಸಂಸ್ಕೃತದಲ್ಲಿ ಗಾವೋ ವಿಶ್ವಸ್ಯ ಮಾತರಃ ಎನ್ನುವ ಮಾತಿದೆ. ಗೋವು ಸಕಲ ಚರಾಚರಗಳಿಗೆ ಹಾಲುಣಿಸುವ ಮಹಾತಾಯಿ ಎಂದು ಬಣ್ಣಿಸಲಾಗಿದೆ. ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಶತ- ಶತಮಾನಗಳಿಂದಲೂ ಗೋವನ್ನು ಪೂಜಿಸುತ್ತಾ ಬಂದಿದದ್ದು, ಗೋವಿನಲ್ಲಿರುವ ಧೈವಿಕ ಶಕ್ತಿಯನ್ನು ಕೊಂಡಾಡುತ್ತಾ ಕಲಿಯುಗದ ಕಾಮಧೇನು ಎಂದು ಕರೆಯಲಾಗಿದೆ. ಆದರೆ ವಿಪರ್ಯಾಸವೆಂದರೆ ದೇಶಿಯ ಗೋವುಗಳ ಮಹತ್ವ ಮತ್ತು ದೈವಿಕ ಶಕ್ತಿಯನ್ನು ಅರಿಯದೆ ನಾವಿಂದು ಬೆಳ್ಳನೆಗಿರೋದೆಲ್ಲಾ ಹಾಲೆಂದು ಸೇವಿಸುತ್ತದ್ದೇವೆ . ವಿದೇಶಿ ತಳಿಯ ಗೋವುಗಳ ಹಾಲಿನಲ್ಲಿ ನಮ್ಮ ಆರೋಗ್ಯಕ್ಕೆ ಮಾರಕವಾಗುವ ಅಂಶಗಳಿದೆ. ನಮ್ಮ ದೇಹದಲ್ಲಿ ಕಂಡುಬರುವ ಅದೆಷ್ಟೋ ಕಾಯಿಲೆಗಳಿಗೆ ನಾವು ಸೇವಿಸುತ್ತಿರುವ ವಿದೇಶಿ ತಳಿಯ ಹಾಲು ಮತ್ತು ಹಾಲಿನ ಉತ್ಪನ್ನಗಳೆನ್ನುವುದು ಕಹಿ ಸತ್ಯ .
ಭಾರತೀಯ ಗೋವುಗಳ ಬೆನ್ನುಹುರಿಯಲ್ಲಿ “ಸೂರ್ಯಕೇತು ನಾಡಿ” ಎನ್ನುವ ದೈವಿಕ ನಾಡಿಯಿದೆ.ಈ ಸೂರ್ಯಕೇತು ನಾಡಿ ಬ್ರಹ್ಮಾಂಡದಲ್ಲಿರುವ ಶಕ್ತಿಯುತ ತರಂಗಗಳನ್ನು ಹೀರಿಕೊಂಡು ಗೋವನ್ನು ಕಾಮಧೇನುವನ್ನಾಗಿಸುತ್ತದೆ. ಭಾರತೀಯ ಗೋವುಗಳ ಉತ್ಪನ್ನಗಳಾದ ಹಾಲು, ಮೊಸರು ಮತ್ತು ತುಪ್ಪದಲ್ಲಿ ಬಂಗಾರದ ಕಣಗಳಿದ್ದು ಹಳದಿ ಬಣ್ಣದಿಂದ ಕಂಗೊಳಿಸುತ್ತಿರುತ್ತದೆ. ಭಾರತೀಯ ಗೋವುಗಳಲ್ಲಿರುವ ಈ ವಿಶೇಷ ಶಕ್ತಿ ವಿದೇಶಿ ತಳಿಯ ಗೋವುಗಳಿಗೆ ಇರುವುದಿಲ್ಲ. ಈ ಸತ್ಯ ಸಂಗತಿಯನ್ನು ಗೋವುಗಳ ಮೇಲೆ ನಡೆಸಲಾದ ವೈಜ್ಞಾನಿಕ ಸಂಶೋಧನೆಗಳಿಂದ ಧ್ರಡಪಟ್ಟಿರುತ್ತದೆ. ಪ್ರೊಫೆಸರ್ ಖೇತ್ ವುಡ್ಫೋರ್ಡ ಎನ್ನುವ ವಿದೇಶೀ ಸಂಶೋಧಕ ವಿದೇಶಿ ಗೋ ತಳಿಗಳ ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆಯಿಂದಾಗಿ ನಮ್ಮ ಆರೋಗ್ಯದ ಮೇಲಾಗುವ ಅಡ್ಡ ಪರಿಣಾಮಗಳನ್ನು ತನ್ನ ಸಂಶೋಧನಾ ಕ್ರತಿ “ಡೆವಿಲ್ ಇನ್ ದಿ ಮಿಲ್ಕ್ ” ನಲ್ಲಿ ಸವಿಸ್ತಾರವಾಗಿ ತಿಳಿಸಿರುತ್ತಾರೆ. ವಿದೇಶಿ ಗೋ ತಳಿಗಳ ಹಾಲನ್ನು A1 ಹಾಲು ಹಾಗೂ ಭಾರತೀಯ ಗೋ ತಳಿಗಳ ಹಾಲನ್ನು A2 ಹಾಲು ಎಂದು ವಿಭಜಿಸಲಾಗಿದೆ. A1 ಹಾಲು ಮನುಷ್ಯನ ಆರೋಗ್ಯಕ್ಕೆ ಮಾರಕ ಹಾಗೂ A2 ಹಾಲು ಅಮ್ರತಕ್ಕೆ ಸಮಾನ ಎಂದು ಇಡೀ ಜಗತ್ತಿಗೆ ತಿಳಿಸಿರುತ್ತಾರೆ. ಈ ಸತ್ಯ ಸಂಗತಿಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳ ಗೋ ಸಂಶೋಧಕರು ಸಹ ಒಪ್ಪಿಕೊಂಡು ,ಭಾರತೀಯ ಗೋವುಗಳ ಧೈವಿಕ ಶಕ್ತಿಯನ್ನು ಕೊಂಡಾಡಿದ್ದಾರೆ.
ಆದರೆ ಈ ಕಹಿ ಸತ್ಯವನ್ನು ತಿಳಿಯದ ನಾವು , ದೇಶಿಯ ಗೋವುಗಳ ಮಹತ್ವ ಅರಿಯದೆ ಹೆಚ್ಚು ಹೆಚ್ಚು ಹಣದ ಲಾಭಕ್ಕೊಸ್ಕರ ವಿದೇಶಿ ತಳಿಯ ಗೋವುಗಳನ್ನು ಸಾಕುತ್ತಿದ್ದೆವೆ. ಈ ವಿದೇಶಿ ತಳಿಯ ಗೋವುಗಳ ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆಯಿಂದಾಗಿ ದೇಹದ ಆರೋಗ್ಯದ ಮೇಲಾಗುವ ಮಾರಕ ಪರಿಣಾಮದ ಕುರಿತು ವಿದೇಶಗಳಲ್ಲಿ ಜಾಗ್ರತಿ ಮೂಡಿಸಲಾಗುತ್ತಿದೆ. ಆದರೆ ನಮ್ಮ ದೇಶದಲ್ಲಿ ನಾವಿನ್ನೂ ಲಾಭ ನಷ್ಟದ ಲೆಕ್ಕಾಚಾರದಲ್ಲಿದ್ದೆವೆ.
ಇದನ್ನೆಲ್ಲಾ ಅರಿತು ಕುಂದಾಪುರ ಪರಿಸರದಲ್ಲೂ ದೇಶಿಯ ಗೋತಳಿಗಳ ಮಹತ್ವ ಹಾಗೂ ಪಂಚಗವ್ಯ ಉತ್ಪನ್ನಗಳ ಕುರಿತು ಜನತೆಗೆ ಅರಿವು ಮೂಡಿಸುವ ಚಿಂತನೆ ನಡೆಸಿ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಕೊನೆಗೆ ತನ್ನ ಸಾಫ್ಟ್ವೇರ್ ಉದ್ಯೋಗಕ್ಕೆ ಗುಡ್ ಬೈ ಹೇಳಿ ದೇಶಿಯ ಗೋವುಗಳ ರಕ್ಷಣೆ ಮತ್ತು ದೇಶಿಯ ತಳಿಯ ಗೋವುಗಳಿಂದ ತಯಾರಿಸಲಾಗುವ ಪಂಚಗವ್ಯ ಔಷಧೀಯ ಉತ್ಪನ್ನಗಳನ್ನು ನಮ್ಮ ಕರಾವಳಿ ಭಾಗದಲ್ಲಿ ಪರಿಚಯಿಸುವ ಮಹತ್ವಪೂರ್ಣ ಕಾರ್ಯದಲ್ಲಿ ತೊಡಗಿರುವವರು ಕುಂದಾಪುರ ಪರಿಸರದ ಶ್ರೀ ಕುಮಾರ್ ಎಸ್. ಕಾಂಚನ್ ಬೀಜಾಡಿ.
ಮುಂಬೈನಗರದ ಪ್ರತಿಷ್ಠಿತ ಕಂಪೆನಿಯಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿ ಕೆಲಸ ನಿರ್ವಹಿಸಿ, ಚಿಕ್ಕಮಗಳೂರಿನಲ್ಲಿ ವಿವಿಧ ಉದ್ಯಮಗಳನ್ನು ನಡೆಸಿ ಯಶಸ್ಸು ಕಂಡಿದ್ದ ಕುಮಾರ ಕಾಂಚನ್ ರವರು ತನ್ನೆಲ್ಲಾ ಉದ್ಯಮಗಳನ್ನು ತೊರೆದು ಇಂದು ತನ್ನ ಹುಟ್ಟೂರಾದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದಲ್ಲಿ ಕಪಿಲೆ ಗೋ ಸಮ್ರದ್ದಿ ಟ್ರಸ್ಟ್ ನ್ನು ಪ್ರಾರಂಭಿಸಿದ್ದಾರೆ. ದೇಶಿಯ ಗೋ ತಳಿಗಳ ರಕ್ಷಣೆಯ ಮಹತ್ವಾಕಾಂಕ್ಷೆ ಹೊಂದಿರುವ ಇವರು ಗುಜರಾತ್ ಮೂಲದ ಗೀರ್, ಸಾಹಿವಾಲ್, ರಾಟಿ ನಮ್ಮ ಕರ್ನಾಟಕ ಮೂಲದ ಮಲೆನಾಡು ಗಿಡ್ಡದಂತಹ ದೇಶಿಯ ತಳಿಯ ಗೋವುಗಳನ್ನು ಸಾಕುತ್ತಿದ್ದಾರೆ.
ಗೋ ವಿಜ್ಞಾನ ಮತ್ತು ಅನುಸಂಧಾನ ಕೇಂದ್ರ ನಾಗ್ಪುರ, ಮಹಾರಾಷ್ಟ್ರ ಮತ್ತು ದೇಶದ ಬೇರೆ ಬೇರೆ ಭಾಗಗಳಿಗೆ ಭೇಟಿ ನೀಡಿ ದೇಶಿಯ ಗೋ ತಳಿಗಳ ರಕ್ಷಣೆಯ ಜೊತೆಗೆ ಪಂಚಗವ್ಯ ಔಷಧದ ಉತ್ಪಾದನೆ ಕುರಿತು ತರಬೇತಿ ಪಡೆದುಕೊಂಡಿದ್ದಾರೆ. ಗೋವುಗಳ ಹಾಲಿನ ನೈಜತೆ ಹಾಗೂ ಗುಣಮಟ್ಟ ಕಾಯ್ದಕೊಳ್ಳಲು ಯಾವುದೇ ರೀತಿಯ ಕ್ರತಕ ಆಹಾರವನ್ನು ಗೋವುಗಳಿಗೆ ನೀಡದೆ ತಾವೇ ಸಾವಯವ ಗೊಬ್ಬರ ಬಳಸಿ ಬೆಳೆಸಿದ ಹಸಿರು ಸಸ್ಯ, ಜೋಳದ ಸಸ್ಯ ವನ್ನು ಗೋವುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ.
ಇವರು ಸರಿಸುಮಾರು 25 ಬಗೆಯ ಔಷಧೀಯ ಉತ್ಪನ್ನವನ್ನು ದೇಶಿಯ ಗೋವುಗಳ ಹಾಲು ,ಸಗಣಿ, ಮೂತ್ರ, ತುಪ್ಪ, ಮೊಸರಿನಿಂದ ತಯಾರಿಸುತ್ತಿದ್ದಾರೆ. ಗೋ ಮೂತ್ರದಿಂದ 4 ರಿಂದ 5 ಬಗೆಯ ಅರ್ಕ, ಹಾಲು ಮತ್ತು ಸಗಣಿಯನ್ನು ಬಳಸಿಕೊಂಡು ಹಲವಾರು ಬಗೆಯ ಸೋಪ್ ಗಳನ್ನು, ನೋವಿನಎಣ್ಣೆ ಯನ್ನು ತಯಾರಿಸುತ್ತಿದ್ದಾರೆ. ಚರ್ಮರೋಗ, ಅಸ್ತಮ,ನೆಗಡಿ ,ಕೆಮ್ಮು, ಮಧುಮೇಹ,ಜಾಂಡಿಸ್,ಮೂಳೆ ಸಂಭಂಧಿ ರೋಗ,ಉದರ ಸಂಭಂಧಿ ಕಾಯಿಲೆ, ತಲೆನೋವು ,ಕೂದಲು ಉದುರುವಿಕೆ ಮತ್ತು ಹೊಟ್ಟು ಜೊತೆಗೆ ಇನ್ನಿತರ ಮಾರಕ ಕಾಯಿಲೆಗಳಿಗೆ ಪಂಚಗವ್ಯ ಔಷಧಿಯನ್ನು ತಯಾರಿಸುತ್ತಿದ್ದಾರೆ.
ಗೋಮುತ್ರದಿಂದ ಗೋ ಫಿನಾಯಿಲ್, ಸಗಣಿಯಿಂದ ಪಾತ್ರೆ ತೊಳೆಯುವ ಸೋಪ್ ಹಾಗೂ ಸೊಳ್ಳೆ ನಿವಾರಕ ಬತ್ತಿಗಳನ್ನು ಸಹ ತಯಾರಿಸುತ್ತಿದ್ದಾರೆ. ಕುಂದಾಪುರದ ಪರಿಸರದಲ್ಲಿ ದೇಶಿಯ ಗೋವಿನ ಹಾಲನ್ನು ಬೇಡಿಕೆಯ ಮೇರೆಗೆ ದಿನನಿತ್ಯ ಸರಬರಾಜು ಮಾಡುತ್ತಿದ್ದಾರೆ. ತಮ್ಮ ಗೋ ಶಾಲೆಗೆ ದೇಶದ ಬೇರೆಬೇರೆ ಭಾಗದಿಂದ ಭೇಟಿ ನೀಡುವವರಿಗೆ ಮತ್ತು ಸಂಘ ಸಂಸ್ಥೆಗಳ ಸದಸ್ಯರಿಗೆ ದೇಶಿಯ ಗೋವುಗಳ ಮಹತ್ವ ಹಾಗೂ ಪಂಚಗವ್ಯ ಔಷಧದ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡುತ್ತಿದ್ದಾರೆ. ಇವರ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಲವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇವರ ಈ ಕಾರ್ಯಕ್ಕೆ ಕುಟುಂಬದ ಸದಸ್ಯರು ನೀಡುತ್ತಿರುವ ಸಹಕಾರವನ್ನು ಕುಮಾರ್ ಕಾಂಚನ್ರವರು ಸದಾ ಸ್ಮರಿಸಿಕೊಳ್ಳುತ್ತಾರೆ. ದೇಶಿಯ ಗೋವುಗಳ ರಕ್ಷಣೆ ಮತ್ತು ಮಹತ್ವದ ಬಗ್ಗೆ ತಿಳಿಯಲು ಒಮ್ಮೆ ನೀವೂ ಸಹ ಗೋಶಾಲೆಗೆ ಭೇಟಿ ನೀಡಿ.
ವಿಳಾಸ: ಕಪಿಲೆ ಗೋ ಸಮ್ರದ್ದಿ ಟ್ರಸ್ಟ್.
ಚಿಕ್ಕುಅಮ್ಮ ದೇವಸ್ಥಾನದ ಬಳಿ ಬೀಜಾಡಿ
ಕೋಟೇಶ್ವರ ಅಂಚೆ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ.
ಸಂಪರ್ಕ ಸಂಖ್ಯೆ: 9482671333
ಲೇಖನ : ಪ್ರವೀಣ್ ಗಂಗೊಳ್ಳಿ