ನನ್ನ ಭಾರತಕ್ಕೆ ಕೇವಲ ಒಂದೇ ಚಿನ್ನ ಗೆಲ್ಲುವ ಸಾಮರ್ಥ್ಯವೇ…?
ನನ್ನ ಭಾರತದಲ್ಲಿ ದೇಶಕ್ಕೆ ಒಬ್ಬ ಅಲ್ಲ … ಜಿಲ್ಲೆಗೆ ಒಬ್ಬ ನೀರಜ್ ಚೋಪ್ರ ಸಿಗುತ್ತಾರೆ. ಹೇಗೆ?
ಒಂದು ಚಿನ್ನ ಗೆದ್ದವರಿಗೆ ನೂರು ತಲೆಮಾರಿಗಾಗುವಷ್ಟು ಸುರಿಯುವುದಕ್ಕಿಂತ ನೂರು ಚಿನ್ನ ಗೆಲ್ಲಲು ನೂರು ಬಡ ಪ್ರತಿಭೆಗಳನ್ನು ಗುರುತಿಸಿ ಆರ್ಥಿಕ ವೆಚ್ಚ ಸಂಪೂರ್ಣ ಸರ್ಕಾರಗಳು ಬರಿಸಿದರೆ ಇದು ಸಾಧ್ಯ. ಜೊತೆಗೆ ಅತೀ ಹೆಚ್ಚು ಚಿನ್ನ ಗೆಲ್ಲುವ ದೇಶವೂ ನಮ್ಮದಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ.
ಖುಷಿಯ ಜೊತೆಗೆ ಹೆಮ್ಮೆಯೂ ಕೂಡ ಹೌದು. ಆದರೆ ನಮಗೆ ಗೊತ್ತಿಲ್ಲದಂತೆ ಅದೆಷ್ಟೋ ಸಾವಿರ ಸಾವಿರ ನೀರಜ್ ಚೋಪ್ರರಂತವರು ಹಣ ಎಂಬ ಬಲೆಯ ಮಧ್ಯೆ ಸಿಲುಕಿ ಚಿನ್ನವನ್ನು ಒಳಗೆ ಇಟ್ಟುಕೊಂಡು ಹೊರಗೆ ಹಾಕಲಾಗದೆ ಬಲೆಯನ್ನೇ ಹರಿದು ಹಿಂತಿರುಗಿದವರಿದ್ದಾರೆ.
ಹಳ್ಳಿಗಳಲ್ಲಿರುವ ಆರ್ಥಿಕವಾಗಿ ಬಡತನದಲ್ಲಿರುವ ಪ್ರತಿಭಾನ್ವಿತ ಹಾಗೂ ಚಾಣಾಕ್ಷ ಕ್ರೀಡಾಪಟುಗಳ ಸಾಧನೆಯನ್ನು ಗುರುತಿಸಿ ಅವರಿಗೆ ಉಚಿತ ಸೌಲಭ್ಯ ಮತ್ತು ಆರ್ಥಿಕ ವ್ಯವಸ್ಥೆ, ಪ್ರೋತ್ಸಾಹ ಸರ್ಕಾರದಿಂದ ದೊರೆತರೆ ದೇಶಕ್ಕೆ ಒಬ್ಬ ಅಲ್ಲ ಜಿಲ್ಲೆಗೆ ಒಬ್ಬ ನೀರಜ್ ಚೋಪ್ರ ರಂತವರು ಸಿಗುತ್ತಾರೆ. ಜೊತೆಗೆ ವರ್ಷಕ್ಕೆ 50 ಚಿನ್ನವೂ ಭಾರತ ತನ್ನದಾಗಿಸಿಕೊಳ್ಳುತ್ತದೆ. ಯಾವುದಕ್ಕೂ ಇಚ್ಚಾ ಶಕ್ತಿಯ ಕೊರತೆ ನಮ್ಮ ದೇಶದಲ್ಲಿ ಎದ್ದು ಕಾಣುತ್ತಿದೆ. ಈ ಕುರಿತು ಗಂಭೀರ ಚಿಂತನೆ ನಡೆಯಬೇಕಿದೆ.
✍️ ಪ್ರಸಾದ್ ಪಿ. ಬೈಂದೂರ್