ತ್ರಾಸಿ (ಆ, 12) : ಶ್ರೀ ಗೋವಿಂದ ಬಾಬು ಪೂಜಾರಿಯವರು ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ) ನ ಮೂಲಕ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರ ಜೊತೆಗೆ ಬಡ ವರ್ಗದ ಜನರಿಗೆ ಕಷ್ಟ ಕಾಲದ ಆಪತ್ಬಾಂಧವನಾಗಿದ್ದಾರೆ.
ಆಶ್ರಯ ಇಲ್ಲದಿರುವ ಕಡು ಬಡವರಿಗೆ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈಗಾಗಲೇ ಮೂರು ಮನೆಗಳನ್ನು ಹಸ್ತಾಂತರಿಸಿದ್ದು , ಇದೀಗ ನಾಲ್ಕನೇ ಮನೆ ಹಸ್ತಾಂತರಕ್ಕೆ ಸಿದ್ದಗೊಳ್ಳುತ್ತಿದೆ. ತ್ರಾಸಿ ಸಮೀಪದ ಕಂಚುಗೋಡು ಭಗತ್ ನಗರದ ಶ್ರೀಮತಿ ಪುಷ್ಪಾ ಉಲ್ಲಾಸ್ ದಂಪತಿಗೆ ಅಗಸ್ಟ್ 15 ರಂದು ನೂತನ ಮನೆ ಹಸ್ತಾಂತರಿಸಲಾಗುತ್ತಿದೆ.
ಮನೆ ಕಟ್ಟಬೇಕೆಂದು ನೆಲಗಟ್ಟು ಹಾಕಿ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮನೆ ನಿರ್ಮಾಣದ ಕಾರ್ಯ ನಡೆಸಲಾಗದೆ ಅಸಹಾಯಕ ಸ್ಥಿತಿಯಲ್ಲಿರುವ ಶ್ರೀಮತಿ ಪುಷ್ಪಾ ಉಲ್ಲಾಸ್ ದಂಪತಿಯ ಮನೆಯ ಕನಸನ್ನು ಪೂರ್ಣಗೊಳಿಸಲು ಶ್ರೀ ಗೋವಿಂದ ಬಾಬು ಪೂಜಾರಿಯವರು ತಾನೆ ಸ್ವತಃ ಮುಂದೆ ನಿಂತು ಸುಸಜ್ಜಿತ ಹಾಗೂ ಪೂರ್ಣ ಪ್ರಮಾಣದಲ್ಲಿ ಮನೆ ನಿರ್ಮಿಸಿ ಅಗಸ್ಟ್ 15ರ ಸ್ವಾತಂತ್ರ್ಯೋತ್ಸವದ ದಿನದಂದು ಫಲಾನುಭವಿಗೆ
ಹಸ್ತಾಂತರಿಸಲಿದ್ದಾರೆ.