ಮಲ್ಪೆ (ಆ, 14) : ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ್ದ ಎರಡು ಬೋಟುಗಳ ಹಗ್ಗ ತುಂಡಾಗಿ ನೀರಿನ ರಭಸಕ್ಕೆ ಸೈಂಟ್ ಮೇರಿಸ್ ಐಲ್ಯಾಂಡ್ ಕಲ್ಲಿನ ಬಳಿ ಬೋಟ್ ಗಳು ಸಮುದ್ರ ಪಾಲಾಗುವ ಸ್ಥಿತಿಯಲ್ಲಿದ್ದುದ್ದನ್ನು ಗಮನಿಸಿದ ಗಾಳ ಹಾಕುವವರು ಫೋನ್ ಕರೆಯ ಮುಖಾಂತರ ಆಪತ್ಭಾಂಧವ ಈಶ್ವರ್ ಮಲ್ಪೆರವರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಈಶ್ವರ್ ಮಲ್ಪೆ ಮತ್ತು ಜಮೀರ್ ಕಲ್ಮಾಡಿ ಸಮುದ್ರದಲ್ಲಿನ ಕಲ್ಲಿನ ಬಳಿ ತೆರಳಿ ಸಮುದ್ರ ಪಾಲಾಗುತ್ತಿದ್ದ ಎರಡು ಬೋಟುಗಳನ್ನು ಉಮೇಶ್ ಪಡುಕರೆ ತಂಡದ ಮೂಲಕ ಸುರಕ್ಷಿತವಾಗಿ ಬೋಟುಗಳನ್ನು ಮಲ್ಪೆ ಬಂದರಿಗೆ ತಂದು ಮಾಲಕರಿಗೆ ಒಪ್ಪಿಸಿದ್ದಾರೆ.
ಈ ಮುಖೇನ ಎರಡು ಕೋಟಿಗೂ ಮಿಕ್ಕಿ ನಷ್ಟ ವನ್ನು ಈಶ್ವರ್ ಮಲ್ಪೆ ಮತ್ತು ತಂಡ ತಪ್ಪಿದಿದೆ. ಈ ಘಟನೆ ಆಗಸ್ಟ್ , 14 ರ ಬೆಳಗಿನ ಜಾವ 4ಗಂಟೆಗೆ ನಡೆದಿದೆ. ಈಶ್ವರ್ ಮಲ್ಪೆ ಮತ್ತು ತಂಡದ ಈ ಕಾರ್ಯಾಚರಣೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
ವರದಿ: ಈಶ್ವರ್ ಸಿ. ನಾವುಂದ