ಗಾಢ ನಿದ್ರೆಗೆ ಜಾರಿತ್ತು ನನ್ನ ವಿಶಾಲ ಜಗತ್ತು
ಕನಸಿನಲ್ಲಿ ಗೋಚರಿಸಿತು ಮುಂದೊದಗುವ ಆಪತ್ತು
ಗಾಬರಿಗೊಂಡ ಮನಸ್ಸು ಇದು ವಾಸ್ತವವೆಂದಿತ್ತು
ಆದರೆ ಅದನ್ನು ಒಪ್ಪದ ಸ್ಥಿತಿ ನನ್ನದಾಗಿತ್ತು
ಮುಂಜಾನೆ ರವಿಕಿರಣದಂತೆ ಜಗತ್ತನ್ನೇ ಕರೊನಾ ಆವರಿಸಿತ್ತು
ವಿಶ್ವವನ್ನೇ ಬಂಧಿಸಲು ಸಂಕೋಲೆ ಸಿದ್ದವಾಗಿತ್ತು
ಮನುಕುಲದ ಮೇಲೆ ಕರಿಛಾಯೆ ಮೂಡಿತ್ತು
ಪರಿಸ್ಥಿತಿ ಕೈ ಮೀರಿ ಹೋಗುತ್ತಿತ್ತು
ಧ್ರತಿಗೆಡದ ವಿಶ್ವ ಹೋರಾಡಲು ಸಿದ್ಧವಾಗುತ್ತಿತ್ತು
ಅದಕ್ಕೆ ವೈದ್ಯಲೋಕ ಜೀವ ಪಣಕ್ಕಿಟ್ಟು ಸಹಕರಿಸುತ್ತಿತ್ತು
ಇವರಿಗೆ ಆರಕ್ಷಕರು ಹಾಗೂ ಸೇನೆ ಶಕ್ತಿ ಒದಗಿಸುತ್ತಿತ್ತು
ಮೋದಿಜೀಯವರ ಮಾರ್ಗದರ್ಶನ ಕರ್ಣಪಟಲಕ್ಕೆ ಬೀಸುತ್ತಿತ್ತು
ಅದೇ ಸಮಯದಲ್ಲಿ ಜನರ ಮೂರ್ಖತನ ಪ್ರದರ್ಶನವಾಗುತ್ತಿತ್ತು
ಇದನ್ನು ನೋಡಿದ ಪೋಲಿಸರ ತಂಡ ವ್ಯಥೆಪಡುತ್ತಿತ್ತು
ಸಹನೆ ಮೀರಿದಾಗ ಕೈಲಿದ್ದ ಲಾಠಿ ಮಾತನಾಡುತ್ತಿತ್ತು
ಲಾಠಿ ಪ್ರಹಾರಕ್ಕೆ ಮೂರ್ಖತನ ಸ್ವಲ್ಪ ಹೆದರುತ್ತಿತ್ತು
ಕೊನೆಯಲ್ಲಿ ಅನ್ನಿಸಿತು ನಾವೆಲ್ಲಾ ಒಟ್ಟಾಗಿ ಹೋರಾಡಬೇಕಿತ್ತು
ಆಗ ಕರೊನಾ ಹೆದರಿ ಪಲಾಯನ ಮಾಡುತ್ತಿತ್ತು
ಜೀವರಾಶಿ ಮತ್ತೊಮ್ಮೆ ಚೈತನ್ಯದಿಂದ ಮುಂದುವರೆಯುತ್ತಿತ್ತು
ಅದರೆ ನನ್ನ ಕನಸು ನನಸಾಗುವ ಮೊದಲೇ ನನಗೆ ಎಚ್ಚರವಾಗಿತ್ತು
ಬರೆದವರು. ದಿನೇಶ್ ರಾವ್ ಉಪ್ಪುಂದ