ಕುಂದಾಪುರ (ಆ, 16) : ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಮ್ಮ ಮಾತ್ರಭೂಮಿಯ ರಕ್ಷಣೆಗಾಗಿ ಹೋರಾಡಿದ ಯೋಧರನ್ನು ಗೌರವಿಸುವ ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ ಮಹಿಳಾ ಮೋರ್ಚಾದ ನೇತ್ರತ್ವದಲ್ಲಿ ಆಗಸ್ಟ್ 15 ರಂದು ಯೋಧರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಿವೃತ್ತ ಯೋಧರಾದ ಶ್ರೀವಿಶ್ವನಾಥ ಹಂದೆ ಕುಂಭಾಶಿ ಹಾಗೂ ಕೋಟ ಪಡುಕರೆಯ ಯೋಧ ಶ್ರೀ ಲೋಹಿತ್ ಪೂಜಾರಿ ಯವರನ್ನು ಅತ್ಯಂತ ಗೌರವ ಪೂರ್ವಕವಾಗಿ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಹಿಳಾ ಮೋರ್ಚದ
ಮಂಡಲದ ಸದಸ್ಯರು ಹಾಗೂ ಮಂಡಲದ ಸದಸ್ಯರು ಉಪಸ್ಥಿತರಿದ್ದರು.













