ಕೊಲ್ಲೂರು (ಆ,18): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಲ್ಲೂರು ವಲಯದ ಒಕ್ಕೂಟ ಅಧ್ಯಕ್ಷರ ಹಾಗೂ ಸೇವಾಪ್ರತಿನಿಧಿ ಸಭೆ ಆಗಸ್ಟ್,18ರಂದು ಬೀಸಿನಪಾರೆ ಸಭಾ ಭವನದಲ್ಲಿ ನಡೆಯಿತು. ವಲಯಾಧ್ಯಕ್ಷರಾದ ಜಯರಾಮ್ ಪೂಜಾರಿ ಚಕ್ರಮೈದಾನ ರವರು ಅಧ್ಯಕ್ಷತೆ ವಹಿಸಿದ್ದರು.
ಬೈಂದೂರು ತಾಲೂಕು ಯೋಜನಾಧಿಕಾರಿ ಶ್ರೀಮತಿ ಶಶಿರೇಖಾರವರು ದೀಪ ಬೆಳಗಿಸುವುದ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ವಲಯ ಹಾಗೂ ಒಕ್ಕೂಟಗಳ ಪ್ರಗತಿ ಪರಿಶೀಲನೆ ಮಾಡಿದರು. ಅಲ್ಲದೆ 24/8/21 ರಂದು ನಡೆಯುವ ಪ್ರಾದೇಶಿಕ ನಿರ್ದೇಶಕರ ಜೊತೆಗೆ ಪ್ರಗತಿ ಪರಿಶೀಲನೆ ಸಭೆಯ ಕುರಿತು ಮಾತನಾಡಿ ಸಂಘಗಳ ಕಂತು ಬಾಕಿ ಕಡಿಮೆ ಮಾಡಿಸಿ, ಜೊತೆಗೆ ಈ ವರ್ಷದ ಗುರಿ ಮತ್ತು ಸಾಧನೆ ಬಗ್ಗೆ ನಿಮ್ಮ ಸಹಕಾರ ಇರಲಿ, ಒಕ್ಕೂಟ ಸಭೆ, ಸಂಘಗಳ ಗುಣಮಟ್ಟ ಕಾಪಾಡಿಕೊಳ್ಳಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಯರಾಮ್ ಪೂಜಾರಿಯವರು ಮಾತನಾಡಿ ನಾನು 16 ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡವನು ಇಂದು ಈ ಮಟ್ಟಕ್ಕೆ ನಿಂತಿದ್ದೇನೆ. ಯೋಜನೆ ನಮಗೆ ಎಲ್ಲಾ ಕೊಟ್ಟಿದೆ ನಾವು ಕೇವಲ ಪೂರ್ಣ ಸಹಕಾರ ಕೊಟ್ಟರೆ ಸಾಕು ಹೀಗೆ ವಲಯ ತಾಲೂಕಿನಲ್ಲಿ ಹೆಸರು ಮಾಡಲಿ ಎಂದರು. ಕೊಲ್ಲೂರು ವಲಯದ ಮೇಲ್ವಿಚಾರಕರಾದ ರಾಮ್ ಎನ್. ಹಾಗೂ ಸ್ಥಳೀಯ ಒಕ್ಕೂಟದ ಅಧ್ಯಕ್ಷರಾದ ಬಾಬು ಪೂಜಾರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಎಲ್ಲಾ ಒಕ್ಕೂಟ ಅಧ್ಯಕ್ಷರುಗಳು ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಇರಿಗೆ ಒಕ್ಕೂಟದ ಸೇವಾಪ್ರತಿನಿಧಿ ಕೃಷ್ಣ ಸ್ವಾಗತಿಸಿ, ಸೇವಾಪ್ರತಿನಿಧಿ ರಾಮ ಶೆಟ್ಟಿ ಅತ್ತಿಕಾರ್ ವಂದಿಸಿ, ಮೇಲ್ವಿಚಾರಕರು ಕಾರ್ಯಕ್ರಮ ನಿರೂಪಿಸಿದರು .












