ಗಂಗೊಳ್ಳಿ(ಆ,22): ಸರಕಾರ ಮೀನುಗಾರರಿಗೆ ಅತ್ಯಾಧುನಿಕವಾದ ಜೀವ ರಕ್ಷಕ ಸಲಕರಣೆಗಳು ಒದಗಿಸಬೇಕು ಹಾಗೂ ಅಳಿವೆ ಬಾಗಿಲಿನ ಸುತ್ತಮುತ್ತಲು ಮೀನುಗಾರರಿಗೆ ಯಾವುದೇ ರೀತಿಯ ಜೀವ ಹಾನಿಯಾಗದಂತೆ 24X7 ರಕ್ಷಣಾ ಪಡೆ ನಿರ್ಮಿಸಿ ಕಾರ್ಯನಿರತರಾಗುವಂತೆ ಸರಕಾರಕ್ಕೆ ಪ್ರಸ್ತಾವನೆಯನ್ನು ಗಂಗೊಳ್ಳಿ ವಲಯ ನಾಡದೋಣಿ ಸಂಘದ ವತಿಯಿಂದ ಯಶವಂತ ಖಾರ್ವಿಯವರ ನೇತ್ರತ್ವದಲ್ಲಿ ಮೀನುಗಾರಿಕೆ ಸಹಾಯಕ ನಿರ್ದೇಶಕಿ ಸುಮಲತಾ ರವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಗಣಪತಿ ಖಾರ್ವಿ, ನಿರ್ದೇಶಕ ರಾಜೇಶ್ ಖಾರ್ವಿ ಹಾಗೂ ಜೊತೆ ಕಾರ್ಯದರ್ಶಿ ಶಿವರಾಜ ಖಾರ್ವಿ ಉಪಸ್ಥಿತರಿದ್ದರು.










