ಬೆಂಗಳೂರು (ಆ, 27) : ಜನ್ಮಭೂಮಿ ಫೌಂಡೇಷನ್ (ರಿ)ಬೆಂಗಳೂರು ಕೊಡಮಾಡುವ “ಭಾರತ ಗೌರವ ಪ್ರಶಸ್ತಿ”ಗೆ ಉದ್ಯಮಿ, ಸಮಾಜಸೇವಕ ಶ್ರೀ ಗೋವಿಂದ ಬಾಬು ಪೂಜಾರಿ ಆಯ್ಕೆಯಾಗಿದ್ದಾರೆ. ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಕೊರೊನಾ ವಾರಿಯರ್ಸ್ಗೆ ಆಗಸ್ಟ್ , 29 ರಂದು ಬೆಂಗಳೂರಿನ ಗಾಂಧಿನಗರದ ಆನಂದರಾವ್ ಸರ್ಕಲ್ ಬಳಿಯ ಸ್ಯಾಂಕ್ಟಮ್ ಹೋಟೆಲ್ ನಲ್ಲಿ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಶ್ರೀ ಗೋವಿಂದ ಬಾಬು ಪೂಜಾರಿಯವರು “ಭಾರತ ಗೌರವ ಪ್ರಶಸ್ತಿ”ಯೊಂದಿಗೆ ಸನ್ಮಾನಗೊಳ್ಳಲಿದ್ದಾರೆ.
ಸಮಾಜ ಸೇವೆ, ವಿಶೇಷವಾಗಿ ಕೊರೋನಾ ಸಂದರ್ಭದಲ್ಲಿ 8000 ಫುಡ್ಕಿಟ್ಗಳನ್ನು ತಮ್ಮ ವರಲಕ್ಷೀ ಚಾರಿಟೇಬಲ್ (ರಿ ) ಟ್ರಸ್ಟ್ ಮೂಲಕ ಬಡ ಕುಟುಂಬಗಳಿಗೆ ವಿತರಿಸಿ ಮಾನವೀಯತೆ ಮೆರೆದ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.