ತ್ರಾಸಿ (ಸೆ.01) : ಇಲ್ಲಿನ ಡಾನ್ ಬಾಸ್ಕೋ ಸೀನಿಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಮೇಜರ್ ಧ್ಯಾನಚಂದ್ ರವರ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಗಸ್ಟ್ 29 ರಂದು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ಪ್ರಾಂಶುಪಾಲರಾದ ಫಾ. ಮ್ಯಾಕ್ಸಿಮ್ ಡಿಸೋಜಾ
ಉದ್ಘಾಟಿಸಿದರು. ಮಧ್ಯಮ ಮತ್ತು ಸೆಕೆಂಡರಿ ಸೆಕ್ಷನ್ ನ ಸಂಯೋಜಕರಾದ ಶ್ರೀಮತಿ ಸ್ಮಿತಾ ಕುಮಾರಿ ಮತ್ತು ಆರೋಗ್ಯ ಮತ್ತು ದೈಹಿಕ ಶಿಕ್ಷಣ ಸಂಯೋಜಕರಾದ ಶ್ರೀ ಶಿವಾನಂದ್ ಉಪಸ್ಥಿತರಿದ್ದರು.
XI ನೇ ತರಗತಿಯ ವಾಣಿಜ್ಯ ವಿಭಾಗದ ಮಾಸ್ಟರ್ ಅಲ್ರಿಕ್ ನಜರತ್ ರವರು ಮೇಜರ್ ಧ್ಯಾನಚಂದ್ ಅವರ ಜೀವನದ ಸಾಧನೆಯ ಕುರಿತು ತಿಳಿಸಿದರು. 7 ನೇ ತರಗತಿಯ ಮಾಸ್ಟರ್ ನೋವಾನ್ ಮೆಂಡೊನ್ಸಾ ತನ್ನ ಕರಾಟೆ ಕೌಶಲ್ಯಗಳನ್ನು ಪ್ರದರ್ಶಿಸಿದರು. 8ನೇ ತರಗತಿಯ ಕೆರೋಲ್ ರೆಬೆರೋ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಕುರಿತು ಮಾತನಾಡಿದರು.
ಅಂತರಾಷ್ಟ್ರೀಯ ಯೋಗ ಕ್ರೀಡಾಪಟು 8 ನೇ ತರಗತಿಯ ಮಿಸ್ ಧನ್ವಿ ಆನ್ಲೈನ್ನಲ್ಲಿ ಕೆಲವು ಅದ್ಭುತ ಯೋಗ ಭಂಗಿಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಮೇಜರ್ ಧ್ಯಾನಚಂದ್ ಅವರ ಜೀವನದ ಕುರಿತು ಸ್ಫೂರ್ತಿದಾಯಕ ಸಾಕ್ಷ್ಯಚಿತ್ರವನ್ನು ಆನ್ಲೈನ್ನಲ್ಲಿ ಪ್ರದರ್ಶಿಸಲಾಯಿತು.
ಶ್ರೀ ಶಿವಾನಂದ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ವನಿತಾ ಸ್ವಾಗತಿಸಿದರು ಮತ್ತು
ಜ್ಯೋತಿ ಕ್ವಾಡ್ರಸ್ ಕಾರ್ಯಕ್ರಮ ನಿರೂಪಿಸಿದರು.