ನಿಜ. ಆ ಚಿಂತನೆಗಳು ಬಹಳ ಸೂಕ್ಷ್ಮ ಮತ್ತು ಆಳವಾಗಿದ್ದವು. ಆ ಚಿಂತನೆಗಳ ಒಂದೊಂದು ಪದಗಳನ್ನು ಮಣಿಗಳಂತೆ ಪೋಣಿಸುತ್ತಾ ಹೋದಾಗ ಅದ್ಬುತ ಬರವಣಿಗೆಯಾಗಿ ಹೊರಹೊಮ್ಮತ್ತಿತ್ತು. ಸಾಧನೆ ಮಾಡ ಹೊರಟವರಿಗೆ ಶಕ್ತಿಯಾಗಿ ನಿಲ್ಲುತ್ತಿತ್ತು. ಈ ಬರವಣಿಗೆಯ ಹಿಂದಿರುವ ಕೈ ಬೇರೆ ಯಾರದ್ದು ಅಲ್ಲ. ಇದು ನಮ್ಮ ನಿಮ್ಮೆಲ್ಲರ ನೆಚ್ಚಿನ ಚಿಂತಕ,ಬರಹಗಾರ ಈಶ್ವರ್ ಸಿ ನಾವುಂದರವರದ್ದು.
ಯೋಚನೆಗಳು ನನ್ನ ಸಾಧನೆಗಳಾಗಿದ್ದವು ಹಾಗೂ ಶಕ್ತಿಶಾಲಿ ಸಾಧನೆಗಳು ಹೌದು.ಕೆಲವೊಂದು ಸೃಜನಶೀಲ ಕೆಲಸಗಳಿಗೆ ನನ್ನ ಈ ಯೋಚನೆಗಳೇ ಸಾಧನವಾಗಿದ್ದವು. ಪ್ರಕೃತಿಯ ಮಡಿಲಲ್ಲಿ ಮೊಗ್ಗಾಗಿ ಅರಳಲು ಹೊರಟ ನನ್ನನ್ನು ತನ್ನ ಸೂಕ್ಷ್ಮತೆಯಿಂದ ಗಮನಿಸಿ ಅದರ ಕಂಪನ್ನು ಅದಾಗಲೇ ತನ್ನ ಬರವಣಿಗೆಯಿಂದ ಊರಗಲ ಸೂಸಲು ಸಹಕಾರಿಯಾದ ಅದ್ಬುತ ಶಕ್ತಿ ಇವರದ್ದು.
ಇಂಥ ಒಂದು ಅದ್ಬುತ ಶಕ್ತಿ ದೊಡ್ಡ ಮಟ್ಟದ ಜೀವನ ಮಾಡುತ್ತಿರಬಹುದು ಏಣಿಸಬೇಡಿ. ವೃತ್ತಿಯಲ್ಲಿ ದೊಡ್ಡ ಹುದ್ದೆಯಲ್ಲಿರಬಹುದು ಎಂದು ಊಹಿಸಿಕೊಳ್ಳಬೇಡಿ. ವೃತ್ತಿಯಲ್ಲಿ ಕ್ಯಾಟರಿಂಗ್ ಮಾಲಿಕ, ಪ್ರವತ್ತಿಯಲ್ಲಿ ಚಿಂತಕ, ಬರಹಗಾರ, ಸಾಮಾಜಿಕ ಸಲಹೆಗಾರ ಮತ್ತು ನೊಂದವರ ಬಾಳಿನ ಮಾರ್ಗದರ್ಶಕ ಮತ್ತು ಮಾರ್ಗಸೂಚಕ.
ನಾನು ಗಮನಿಸಿದಂತೆ ನನ್ನ ಕಣ್ಣಿಗೆ ಇವರು ಒಬ್ಬ ಸಾಮಾನ್ಯ ಬರಹಗಾರರಾಗಿ ಕಾಣಲಿಲ್ಲ.ಇವರಲ್ಲಿ ಒಂದು ಅದ್ಬುತ ಶಕ್ತಿ ಅಡಗಿದೆ.ಕಲೆ ಇವರಿಗೆ ರಕ್ತಗತವಾಗಿ ಬಂದಿರುವುದನ್ನು ನಾನು ಗಮನಿಸಿದ್ದೇನೆ. ಆತನ ಚಿಂತನೆ ಇನ್ನೊಬ್ಬರನ್ನು ಮೇಲಕ್ಕೆತ್ತುವ ಅಭಿಲಾಷೆಯಲ್ಲಿ ಬೆಳೆದಿದೆ ಹೊರತು ತಾನು ಮೇಲೆ ಬರಬೇಕು ಎನ್ನುವ ಆಕಾಂಕ್ಷೆಯಲ್ಲಿ ಇಲ್ಲ.ಇನ್ನೊಬ್ಬರನ್ನು ಮೇಲಕ್ಕೆತ್ತುವ ಬರದಲ್ಲಿ ಇವರು ಇನ್ನು ಆರ್ಥಿಕವಾಗಿ ಮೇಲೇರಲಿಲ್ಲ. ಇವರ ಅದ್ಬುತ ಶಕ್ತಿ, ಚಿಂತನೆ, ಯೋಚನೆಗಳನ್ನು ಸಂಪತ್ತನ್ನಾಗಿ ಪರಿವರ್ತಿಸುವ ಕಲೆಯನ್ನು ತನ್ನ ಜೀವನಕ್ಕೆ ಉಪಯೋಗಿಸಿಕೊಂಡಲ್ಲಿ ಇವರೊಬ್ಬ ಉನ್ನತ ಮಟ್ಟಕ್ಕೆ ಬೆಳೆಯುದರಲ್ಲಿ ಸಂದೇಹವೇ ಇಲ್ಲ.ನಾನು ಗುರುತಿಸಿ ಇವರಿಗೆ ಪ್ರೋತ್ಸಾಹ ಕೊಡಲು ಬಯಸಿದ್ದೇನೆ. ಹಾಗೆ ಎಲ್ಲರೂ ಕೂಡ ಇವರನ್ನು ಪ್ರೋತ್ಸಾಹಿಸಿದರೆ ಈ ಕಲೆಗೆ ಬಹಳ ಮೊತ್ತದ ಬೆಲೆ ಸಿಗಬಹುದು.
ಈಶ್ವರ್ ರವರ ಒಂದು ದೊಡ್ಡ ಗುಣ ಇಲ್ಲಿ ನಿಮಗೆ ತಿಳಿಸಲೇ ಬೇಕು. ಇವರಿಗೆ ಸಹಾಯ ಮತ್ತು ಇವರ ಮನ ಅರಳಿಸುವ ಹಿತನುಡಿಗಳನ್ನು ಹೇಳಿದವರನ್ನು ಮಾತುಮಾತಿಗೂ ನೆನಸಿಕೊಳ್ಳುತ್ತಾರೆ ಹಾಗೂ ಅವರನ್ನು ಕೆರಳಿಸಿದವರು ಇದ್ದಾರೆ, ಅಂತವರನ್ನು ಬೇಗನೆ ಮರೆತುಬಿಡುತ್ತಾರೆ.
ಅವರ ಒಂದು ಚಿಂತನೆಯ ಬರವಣಿಗೆಯನ್ನು ಓದಿದಾಗ ನೀವು ಕೂಡ ಚಿಂತನೆಗಳಿಗೆ ಇಳಿದು ಬಿಟ್ಟರೆ ಅದು ನಿಮ್ಮ ತಪ್ಪಲ್ಲ. ಅವರ ಬರಹದ ಅದ್ಭುತ ಕಲ್ಪನೆಗಳೇ ಹಾಗೇ! ಅವರು 7ನೇ ತರಗತಿಯಲ್ಲಿರುವಾಗಲೇ ಲೇಖನಗಳನ್ನು ಬರೆಯಲು ಆರಂಭಿಸಿದರು. ಅವರ ಮೊದಲ ಲೇಖನವೇ ಅದ್ಭುತ ಚಿಂತನೆಯ ಲೇಖನವಾಗಿತ್ತು. ಅದು ಏನೆಂದರೆ ಮುಂಬೈಯಲ್ಲಿ ಕನ್ನಡ ಮಾಧ್ಯಮ ಆದರೆ ಬೆಂಗಳೂರಿನಲ್ಲಿ ಇರಲಿಲ್ಲ. ಆ ಸಮಯದಲ್ಲಿ ಮುಖ್ಯಮಂತ್ರಿ ಬಂಗಾರಪ್ಪನವರಿಗೆ ಬೆಂಗಳೂರಿನಲ್ಲಿ ರಾತ್ರಿಶಾಲೆ ಬೇಕು ಎಂದು ಬಹಿರಂಗ ಪತ್ರ ಬರೆದ ಗಂಡೆದೆ ಗಂಡು ಇವರು.
ಬಹುಮುಖ ಪ್ರತಿಭೆಯ ಈಶ್ವರ್ ರವರು ರಂಗ ನಟರೂ ಹೌದು. ಇವರ ಚಿಂತನೆ ಮತ್ತು ಬರಹಕ್ಕೆ ಪ್ರೇರಣೆಯಾಗಿರುವುದು ಮುಂಬಯಿ ರಾತ್ರಿಶಾಲೆ. ವಿದ್ಯಾರ್ಥಿ ದೆಸೆಯಲ್ಲಿ ಇವರು ಬರವಣಿಗೆ ಆರಂಭವನ್ನು ಮಾಡಿದ್ದು, ರಾತ್ರಿ ಶಾಲೆಯ ಪ್ರಭಾವ ಹಾಗೂ ಕಡುಬಡತನ ಚಿಂತನೆ ಮತ್ತು ಮಾನವೀಯತೆ. ಇವರು ಮಾಡಿದ ಸಮಾಜ ಸೇವಾ ಕೆಲಸಗಳಿಗೆ ಲೆಕ್ಕವೇ ಇಲ್ಲ. ಈಗಲೂ ದಾನಿಗಳನ್ನು ಸಂಪರ್ಕಿಸಿ ನೊಂದವರಿಗೆ, ಅಸಹಾಯಕರಿಗೆ ದಾರಿತೋರುವ ಸದ್ಗುಣಗಳು ಹಲವರಿಗೆ ಇವರು ಮಾದರಿಯಾಗಬಹುದು.
ಇವರು ನಾನು “ಮುಂಬೈ ಕನ್ನಡಿಗ “ಎಂದು ಯಾವಾಗಲೂ ಗೌರವದಿಂದ ಹೇಳುವುದನ್ನು ನಾನು ಕೇಳಿದವಳು. ಈಶ್ವರ ನಾವುಂದ ಮತ್ತು ಸುಗುಣ ದಂಪತಿಗಳಿಗೆ ಆಕಾಶ್ ಮತ್ತು ಪ್ರಕೃತಿ ಎಂಬ ಇಬ್ಬರು ಮುದ್ದಾದ ಮಕ್ಕಳು. ಇವರಿಗೆ ಕಷ್ಟ ನಷ್ಟಗಳ ಕೆಲವು ಸಮಸ್ಯೆಗಳಿದ್ದರೂ ಇವರ ಅನ್ಯೋನ್ಯತೆ ಸಂಸಾರ ಜೀವನ ಕಂಡಾಗ ಬಾಳ ಹೆಮ್ಮೆ ಮತ್ತು ಸಂತೋಷ ಅನಿಸುತ್ತದೆ.ಶ್ರೀಯುತ ಈಶ್ವರ್ ನಾವುಂದರ ಅಕ್ಷರ ಕಾಳಜಿಗೆ ಬಹುಮುಖ ಪ್ರತಿಭೆಯ ಕಲಾವಿದರು ಮತ್ತು ಉದ್ಯಮಿಗಳು, ಸಮಾಜಸೇವಕರು ತುಂಬು ಹ್ರದಯದಿಂದ ಶ್ಲಾಘಿಸಿದ್ದಾರೆ.
ಕೆಲವು ಎಲೆಮರೆಯ ಪ್ರತಿಭೆ ಇವರನ್ನು ಹುಡುಕಿ ಬಂದರೆ ಮತ್ತೆ ಕೆಲವೊಮ್ಮೆ ಎಲೆಮರೆಯ ಕಾಯಿಯಂತಿರುವ ಸೇವಕರನ್ನು ಪೆನ್ನು ಹಿಡಿದು ಹುಡುಕುತ್ತ ಇವರೇ ಹೋದ ಉದಾಹರಣೆಗಳು ಹಲವಾರು. ಕೆಲವರನ್ನು ಮುಖ್ಯವಾಹಿನಿಗೆ ತರಲು ಇವರ ಚಿಂತಕ ಬರಹಗಳು ಸಾಕ್ಷಿಯಾಗಿದೆ. ಇದರ ಬಗ್ಗೆ ನಿಮಗೆ ಆತ್ಮತೃಪ್ತಿ ಇದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಹೌದು, ನನ್ನ ಶ್ರಮಕ್ಕೆ ಬೆಲೆ ಬಂದು ಅವರ ಮುಂದಿನ ಬದುಕಿಗೆ ದಾರಿಯಾದರೆ ಅದೇ ನನಗೆ ಸಂತೋಷ, ಆ ಖುಷಿಯ ಕ್ಷಣಗಳೇ ಬೇರೆ ಎಂದು ಹೇಳಿಕೊಂಡರು.
ಸ್ವತಃ ನಾನೇ ಅವರ ಪ್ರೋತ್ಸಾಹ ಮತ್ತು ಉತ್ಸಾಹಕ್ಕೆ ದಂಗಾಗಿ ಹೋಗಿದ್ದೇನೆ, ಇದನ್ನು ನಾನು ಅವರಿಗೆ ಹೇಳಿಕೊಂಡಿದ್ದುಂಟು. ಇವರ ಯೋಚನೆ ಮತ್ತು ಯೋಜನೆ ಒಂದು ಅದ್ಭುತ ಶಕ್ತಿಯನ್ನು ನಾನು ಕಂಡವಳಿದ್ದೇನೆ. ಇವರು ಮನಸ್ಸು ಮಾಡಿದರೆ ಅಂಧಕಾರದಲ್ಲಿ ಇರುವ ಕೆಲವರನ್ನಾದರೂ ಬೆಳಕಿನತ್ತ ಕೊಂಡೊಯ್ಯುವ ಶಕ್ತಿ ಮತ್ತು ಸಾಮರ್ಥ್ಯ ಮತ್ತು ಮಿಡಿಯುವ ಮನಸು ಇವರಲ್ಲಿದೆ.ಇಂತಹ ಗುಣವಂತ, ಸಲಹೆಗಾರ, ಮಾರ್ಗದರ್ಶಕ ನನ್ನ ಒಡನಾಡಿ ಅನ್ನುವುದೇ ಒಂದು ನನಗೆ ಹೆಮ್ಮೆ. ಅವರ ಚಿಂತನೆ ಮತ್ತು ಯೋಚನೆ, ಯೋಜನೆಯಲ್ಲಿ ಯಾರು ಕೂಡ ಅರಳಬಹುದು!
ಇಲ್ಲಿ ನಾನು ಉಲ್ಲೇಖಸಲೇ ಬೇಕು. ನಾನು ಆಯಿತು ನನ್ನ ಶಿಕ್ಷಕ ವೃತ್ತಿ ಆಯಿತು ಮತ್ತು ಸಮಾಜ ಸೇವೆ ಜೊತೆಜೊತೆಗೆ ಲೈವ್ ಕಾರ್ಯಕ್ರಮ ನಿರೂಪಕಿಯಾಗಿ ಗುರುತಿಸಿಕೊಂಡಿದ್ದವಳು. ಎಲೆಮರೆಯ ಕಾಯಿ ತರ ನಾನು ಆಗಿದ್ದೆ. ನನ್ನನ್ನು ಗುರುತಿಸಿ ಪರಿಚಯ ಲೇಖನ ಬರೆಯುವುದರ ಜೊತೆಗೆ ನನ್ನ ಮುಂದಿನ ಕನಸು ಮತ್ತು ಸಮಾಜ ಸೇವೆಗೆ ಪ್ರೇರಣೆ ಯಾದ ವ್ಯಕ್ತಿಗಳು ಜೀವರಕ್ಷಕ ಆಪದ್ಬಾಂಧವ ಈಶ್ವರ್ ಮಲ್ಪೆ ಮತ್ತು ಈಶ್ವರ ಸಿ ನಾವುಂದ ಅನ್ನುವುದನ್ನು ಇಲ್ಲಿ ನಾನು ಪ್ರೀತಿಯಿಂದ ನೆನಪು ಮಾಡಿಕೊಳ್ಳುವುದು ನನ್ನ ಆದ್ಯ ಕರ್ತವ್ಯ.
ಎರಡು ಶಕ್ತಿಗಳು ಮುಂದೆ ಕೂಡ ನನ್ನ ಸಾಧನೆಗೆ ಮೆಟ್ಟಿಲಾಗಿ ನಿಲ್ಲಲಿ ನನ್ನ ಸಮಾಜ ಸೇವೆಗೆ ಸ್ಫೂರ್ತಿಯಾಗಲಿ. ಹಾಗೆ ಇವರಿಬ್ಬರ ಕೀರ್ತಿ ಉತ್ತುಂಗಕ್ಕೆ ಏರಲಿ ಎಂದು ಹೃದಯ ತುಂಬಿ ಹಾರೈಸುತ್ತೇನೆ. ಈ ಕುಂದಾವಾಹಿನಿಯ ಮೂಲಕ ಇಬ್ಬರಿಗೂ ಧನ್ಯವಾದಸಲ್ಲಿಸುತ್ತಾ ಇದೊಂದು ಅವರಿಬ್ಬರೂ ನನ್ನ ಮಮತೆಯ “ಅಕ್ಷರ ಕಾಣಿಕೆ” ಹಾಗೂ ಪತ್ರಿಕಾ ಬಳಗಕ್ಕೂನನ್ನ ಪ್ರತಿಭೆ ಗುರುತಿಸಿ ವರದಿ ಮತ್ತು ಬರಹದ ಮೂಲಕ ಬೆನ್ನು ತಟ್ಟಿದ ಪ್ರೋತ್ಸಾಹಕ್ಕೂ ಧನ್ಯವಾದ ಅರ್ಪಿಸುತ್ತೇನೆ.
ಶೈನಾ ಕಲ್ಯಾಣಪುರ,
ಕಂಠದಾನ ಕಲಾವಿದೆ, ನಿರೂಪಕಿ, ಸಮಾಜ ಸೇವಕಿ. 9591642788