ಕುಂದಾಪುರ ತಾಲೂಕು ಸಿದ್ಧಾಪುರ ಎಂಬ ಗ್ರಾಮದ ಖಾಸಗಿ ಬಸ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿರುವ ಚಂದ್ರಶೇಖರ ಭಟ್ ಹಾಗೂ ಸತ್ಯವತಿ ದಂಪತಿಯ ಮಗನಾದ ಚೇತನ್ ಚಂದ್ರಶೇಖರ ರಾವ್ ಯಾನೆ ಸಿ.ಸಿ ರಾವ್ ರವರು ಬಾಲ್ಯದಲ್ಲಿ ತಂದೆ-ತಾಯಿಯ ಪ್ರೀತಿ ಮತ್ತು ಸ್ನೇಹದೊಂದಿಗೆ ಬೆಳೆದರು. ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಡಾ.ಬಿ.ಬಿ.ಹೆಗ್ಡೆ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ತಾನು ಬದುಕಿನಲ್ಲಿ ಏನಾದರು ಸಾಧಿಸಬೇಕು ಎನ್ನುವ ಛಲದೊಂದಿಗೆ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಬೇಕೆಂದು ಹುಟ್ಟೂರ ಬಿಟ್ಟು ಬೆಂಗಳೂರಿಗೆ ಬರುತ್ತಾರೆ. ಮೊದಲಿಗೆ ಸಿರಿಯಲ್ ನಲ್ಲಿ ನಿರ್ದೇಶನ ವಿಭಾಗದಿಂದ ಸಿ. ಸಿ. ರಾವ್ ರವರ ಚಿತ್ರರಂಗದಲ್ಲಿನ ಪ್ರಯಾಣ ಶುರುವಾಗುತ್ತದೆ. ಸಿರಿಯಲ್ ಗಳಲ್ಲಿ ಕೆಲಸ ಮಾಡುತ್ತಿರುವಾಗ ಅನುರಂಜನ್ ಹೆಚ್.ಆರ್ ಎನ್ನುವ ಸಂಕಲನಕಾರರೊಂದಿಗೆ ಸ್ನೇಹ ಬೆಳೆದು, ಕಿರುತೆರೆ ಕಲರ್ಸ್ ಕನ್ನಡ ವಾಹಿನಿಯ ಖ್ಯಾತ ಸಂಕಲನಕಾರ ಗುರು ಮೂರ್ತಿ ಹೆಗ್ಡೆ ಯವರ ಆಶ್ರಯದಲ್ಲಿ ಬೆಳೆದ ಸಿ.ಸಿ.ರಾವ್ ರವರು ಗಾಂಧಾರಿ, ಸರ್ಪ ಸಂಬಂಧ ಹೀಗೆ ಹಲವಾರು ಸಿರಿಯಲ್ ಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಾರೆ.
ತದನಂತರದಲ್ಲಿ ಇವರು ಮಲೆನಾಡಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡುತ್ತಾರೆ.ಅಲ್ಬಮ್ ಹಾಡುಗಳಿಗೆ ಸಾಹಿತ್ಯ ಬರೆದು ತಾವೇ ನಿರ್ದೇಶನ ಮಾಡಿದ್ದಾರೆ. ಕರ್ನಾಟಕ ಸ್ನೈಪರ್ ಎಂಬ ಡೆಮೊ ಚಿತ್ರೀಕರಣ ಮಾಡಿ ಅದನ್ನು ಫಿಲ್ಮ್ ಫೆಸ್ಟಿವಲ್ ಗೆ ಕಳುಹಿಸಿ ಬೆಸ್ಟ್ ಆಕ್ಷನ್ ಅವಾರ್ಡ್ ಕೂಡಾ ತಮ್ಮದಾಗಿಸಿಕೊಂಡಿದ್ದಾರೆ. ಮಾಜಿ ಶಾಸಕ ,ಉದ್ಯಮಿ ಅಶೋಕ ಖೆಣಿ ಯವರ ಕುರಿತಾದ ಸಾಕ್ಷ್ಯ ಚಿತ್ರವನ್ನು ಕೂಡಾ ಸಿ.ಸಿ ರಾವ್ ಮಾಡಿದ್ದಾರೆ.
ಸಿ.ಸಿ ರಾವ್ ರವರು ಒಮ್ಮೆ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ರವರನ್ನು ಭೇಟಿಯಾಗುತ್ತಾರೆ. ರವಿ ಬಸ್ರೂರ್ ರವರು ಸಿ.ಸಿ. ರಾವ್ ರವರನ್ನು ಮಾತಾನಾಡಿಸುತ್ತಾ, ತಮ್ಮ ಹೆಸರು ಏನು ಎಂದು ಕೇಳಿದಾಗ ಇವರು ಚೇತನ್ ಚೆಂದ್ರಶೇಖರ್ ರಾವ್ ಎನ್ನುತ್ತಾರೆ. ಈ ಹೆಸರಿನ ಬದಲಿಗೆ ತಮ್ಮ ಹೆಸರನ್ನು ಸಿ.ಸಿ.ರಾವ್ ಆಗಿ ಬದಲಾಯಿಸಿಕೊಳ್ಳಲು ರವಿ ಬಸ್ರೂರ್ ಹೇಳುತ್ತಾರೆ. ಅಂದಿನಿಂದ ಚೇತನ್ ರವರ ಹೆಸರು ಸಿ.ಸಿ.ರಾವ್ ಆಗಿ ಬದಲಾಗುತ್ತದೆ.

ನಂತರ ಧಾರವಾಹಿ ಬಿಟ್ಟು ಸಿನೆಮಾ ಗೆ ಲಗ್ಗೆ ಇಟ್ಟ ಇವರು ಲೈಟ್ ಭಾಯ್ ಆಗಿ ಕೆಲಸ ಮಾಡುತ್ತಾ, ಸಿನಿ ಪ್ರಯಾಣ ಬೆಳೆಸುತ್ತಾರೆ. ನಂತರದಲ್ಲಿ ಈಶ್ವರ್ ಪೊಲಂಕಿಯವರ ನಿರ್ದೇಶನದ ರುದ್ರಾಕ್ಷಿಪುರ ಎಂಬ ಸಿನೆಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಯವ ಅವಕಾಶ ಇವರಿಗೆ ಒದಗಿ ಬರುತ್ತದೆ. ತದನಂತರದಲ್ಲಿ ನಿರ್ದೇಶಕ ಈಶ್ವರ್ ಪೊಲಂಕಿ ಯವರು ತಮ್ಮ ಕಥೆಗೆ ಸೂಕ್ತ ನಾಯಕನನ್ನು ಹುಡುಕುತ್ತಿದ್ದಾಗ ಸಿ.ಸಿ ರಾವ್ ರವರನ್ನೇ ಆಯ್ಕೆ ಮಾಡಿ ಅರ್ಜುನ ಸನ್ಯಾಸಿ ಎಂಬ ಚಿತ್ರಕ್ಕೆ ಪೂರ್ಣ ಪ್ರಮಾಣದ ನಾಯಕರನ್ನಾಗಿ ಮಾಡುತ್ತಾರೆ.
ಲೈಟ್ ಬಾಯ್ ಯಿಂದ ಸಹಾಯಕ ನಿರ್ದೇಶಕ, ಸಹ ನಿರ್ದೇಶಕ, ಇಗ ಅರ್ಜುನ ಸನ್ಯಾಸಿ ಎಂಬ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸುವ ಭಾಗ್ಯ ಸಿ.ಸಿ ರಾವ್ ರವರಿಗೆ ಒದಗಿಬಂದಿರುವುದು ಅವರು ಪಟ್ಟ ಪರಿಶ್ರಮದ ಫಲಶ್ರುತಿ ಎಂದರೆ ಅತಿಶಯೋಕ್ತಿಯಲ್ಲ. ಕನ್ನಡ ಹಾಗೂ ತೆಲುಗಿನಲ್ಲಿ ಶೀಘ್ರದಲ್ಲೇ ತೆರೆ ಕಾಣಲಿರುವ ಅರ್ಜುನ ಸನ್ಯಾಸಿ ಸಿನೆಮಾ, ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನೆಮಾ ಆಗಿದ್ದು ಬಿಡುಗಡೆಗೆ ಸಿದ್ಧವಾಗಿದೆ. ಒಬ್ಬ ಸಾಮಾನ್ಯ ಬಸ್ ಚಾಲಕನ ಮಗ ಯಾವುದೆ ಹಿನ್ನೆಲೆ ಇಲ್ಲದೆ ತನ್ನ ಸ್ವಂತ ಬುದ್ಧಿಶಕ್ತಿಯಿಂದ, ಸತತ ಪ್ರಯತ್ನದಿಂದ ,ತನ್ನ ಶ್ರಮದಿಂದ ಹಲವಾರು ಕಷ್ಟಗಳನ್ನು, ನೋವುಗಳನ್ನು ಎದುರಿಸಿ, ಇಟ್ಟ ಹೆಜ್ಜೆ ಹಿಂದೆ ಹಾಕದೆ, ತನ್ನ ಗುರಿಯತ್ತ ಸಾಗಿ ತನ್ನ ಸಾಧನೆಗೆ ತಾನೇ ಮಾರ್ಗಗಳನ್ನು ರೂಪಿಸಿಕೊಂಡು ಇಂದು ಅರ್ಜುನ ಸನ್ಯಾನಿ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿರುವುದು ಹೆಮ್ಮೆಯ ಸಂಗತಿ..

ಮುಂದಿನ ದಿನಗಳಲ್ಲಿಯೂ ಸಿ.ಸಿ. ರಾವ್ ರವರಿಗೆ ಸಿನಿಮಾ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ದೊರಕಲಿ, ಅದ್ಭುತ ಸಿನಿಮಾ ನಟರಾಗಿ ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎನ್ನುವ
ಶುಭಾಶಯದೊಂದಿಗೆ,
ಕುಂದವಾಹಿನಿ ಬಳಗ













