ಕೋಟೇಶ್ವರ(ಸೆ,21): ರಾಜ್ಯ ಪ್ರಶಸ್ತಿ ಪುರಸ್ಕೃತ ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ ಕೋಟೇಶ್ವರ ಘಟಕ ಮತ್ತು ಮಹಿಳಾ ಸಂಘಟನೆ ಇದರ ಹದಿನಾರನೇ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದ ಇತ್ತೀಚೆಗೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಕೋಟೇಶ್ವರ ಘಟಕದ ನಿಕಟಪೂರ್ವ ಅಧ್ಯಕ್ಷರಾದ ರವೀಶ್ ಎಸ್. ಕೊರವಡಿಯವರು ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮೊಗವೀರ ಸಂಘಟನೆ (ರಿ) ಉಡುಪಿ ಇದರ ಜಿಲ್ಲಾಧ್ಯಕ್ಷರಾದ ಶಿವರಾಮ ಕೆ.ಎಂ ರವರು ಮುಂದಿನ ಎರಡು ವರ್ಷಗಳ ಸಾಲಿಗೆ ಆಯ್ಕೆಯಾದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಪ್ರತಿಜ್ಣಾವಿಧಿಯನ್ನು ಬೋಧಿಸಿದರು.

ಕಾರ್ಯದರ್ಶಿ ರಾಘವೇಂದ್ರ ಹರಪನಕೆರೆ ವಾರ್ಷಿಕ ವರದಿ ಮಂಡಿಸಿದರು.ಕೋಶಾಧಿಕಾರಿ ಮಹೇಶ್ ಕಾಂಚನ್ ಬೇಳೂರು ಲೆಕ್ಕಪತ್ರ ಮಂಡಿಸಿದರು.ಅಶಕ್ತರಿಗೆ ಧನ ಸಹಾಯ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರತಿಸಿ ಗೌರವಿಸಲಾಯಿತು. ಘಟಕ ವ್ಯಾಪ್ತಿಯ ಎಲ್ಲಾ ಗುರಿಕಾರರನ್ನು ಕಾರ್ಯಕ್ರಮದಲ್ಲಿ ಗುರುತಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮೊಗವೀರ ಮಹಾಜನ ಸಂಘ ರಿ. ಮುಂಬಯಿ ಬಗ್ವಾಡಿ ಹೋಬಳಿ, ಕುಂದಾಪುರ ಇದರ ಶಾಖಾಧ್ಯಕ್ಷ ಕೆ.ಕೆ. ಕಾಂಚನ್, ಮಾಜಿ ಅಧ್ಯಕ್ಷರಾದ ಬಿ. ಹಿರಿಯಣ್ಣ ಚಾತ್ರಬೆಟ್ಟು, ಬೀಜಾಡಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷರಾ ಶ್ರೀಮತಿ ರತ್ನ ಮರಕಾಲ್ತಿ, ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಗುಣ, ಶ್ರೀ ರಾಮ ಭಜನಾ ಮಂಡಳಿ, ಗೋಪಾಡಿ ಇದರ ಅಧ್ಯಕ್ಷರಾದ ಶೇಖರ್ ಚಾತ್ರಬೆಟ್ಟು, ಖ್ಯಾತ ಲೆಕ್ಕಪರಿಶೋಧಕರಾದ ಶಂಕರ್ ನಾಯ್ಕ್, ಕೋಟೇಶ್ವರ ಘಟಕದ ಸ್ಥಾಪಕಾಧ್ಯಕ್ಷ ಸತೀಶ್ ಎಂ. ನಾಯ್ಕ್, ನೂತನ ಅಧ್ಯಕ್ಷರಾದ ಸುನೀಲ್ ಜಿ. ನಾಯ್ಕ್, ನೂತನ ಮಹಿಳಾ ಸಂಘಟನೆ ಅಧ್ಯಕ್ಷೆ ಅನಸೂಯಾ ಕೆದೂರು, ಗೌರವಾಧ್ಯಕ್ಷರಾದ ‘ಸೌರಭ’ ರಾಜೀವ್ ಮರಕಾಲ ಬೀಜಾಡಿ, ಜಿಲ್ಲಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಹಿರಿಯಡ್ಕ, ಕೋಟೇಶ್ವರ ಘಟಕದ ನೂತನ ಮಹಿಳಾ ಕಾರ್ಯದರ್ಶಿ ಕುಮಾರಿ ನಿಶಾ ಕಾಳಾವರ, ನಿಕಟಪೂರ್ವ ಮಹಿಳಾ ಅಧ್ಯಕ್ಷೆ ಶಾರದಾ ಮೂಡು-ಗೋಪಾಡಿ, ಕಾರ್ಯದರ್ಶಿ ಶಾರದಾ ದೊಡ್ಡೋಣಿ ರಸ್ತೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪಾಧ್ಯಕ್ಷ ನಾಗರಾಜ್ ಬೀಜಾಡಿ, ಕೋಶಾಧಿಕಾರಿ ಪ್ರದೀಪ್ ಮೊಗವೀರ ಹೊದ್ರಾಳಿ, ಶ್ರೀಧರ್ ಬಿ. ಎನ್, ರಾಮ ನಾಯ್ಕ್ ಬೀಜಾಡಿ, ಸುರೇಶ್ ಶಾನಾಡಿ, ರಂಜಿತ್ ಚಾತ್ರಬೆಟ್ಟು, ಉದಯ್ ಹೊದ್ರಾಳಿ, ಭಾಸ್ಕರ್ ಹಳೆಅಳಿವೆ ಸಹಕರಿಸಿದರು. ಸಂಘಟನೆಯ ಗೌರವ ಸಲಹೆಗಾರರಾಗಿದ್ದು ತೆಕ್ಕಟ್ಟೆ ರೋಟರಿ ಕ್ಲಬ್ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ್ ಕಾಂಚನ್ ತೆಕ್ಕಟ್ಟೆ ಯವರನ್ನು ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಕೋಟೇಶ್ವರ ಘಟಕದ ಗೌರವ ಸಲಹೆಗಾರರಾದ ಜಗದೀಶ್ ಮೊಗವೀರ ಮಾರ್ಕೋಡು ಸ್ವಾಗತಿಸಿದರು.ನೂತನ ಕಾರ್ಯದರ್ಶಿ ಪುಂಡಲೀಕ್ ಮೊಗವೀರ ಧನ್ಯವಾದ ಸಮರ್ಪಿಸಿದರು.ಮಾಜಿ ಅಧ್ಯಕ್ಷರಾದ ಅಶೋಕ್ ತೆಕ್ಕಟ್ಟೆ ಮತ್ತು ನೂತನ ಸಾಂಸ್ಕೃತಿಕ ಕಾರ್ಯದರ್ಶಿ ಮಿಥುನ್ ಮೊಗವೀರ ಮೊಗೆಬೆಟ್ಟು ನಿರೂಪಿಸಿದರು.











