ಕುಂದಾಪುರ (ಸೆ, 24):ಕುಂದಾಪುರದ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಇತಿಹಾಸ ಪ್ರಸಿದ್ಧ ಬಸ್ರೂರಿನ ಮೂಡ್ಕೇರಿಯ ನಾಥ ಪರಂಪರೆಯ ಪ್ರಾಚೀನ ಶ್ರೀ ಕಾಲಭೈರವ ದೇವಸ್ಥಾನದ ಸ್ವಚ್ಚತಾ ಕಾರ್ಯ “ನಿರ್ಮಲ ದೇಗುಲ” ಕಾರ್ಯಕ್ರಮವನ್ನು ಇದೇ ಸೆಪ್ಟೆಂಬರ್ 26 ರ ಭಾನುವಾರದಂದು ಬೆಳಿಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜು ವತಿಯಿಂದ ತಿಳಿಸಿದ್ದಾರೆ.