ಧರ್ಮವು ಮರೆಯಾಗಿ ಅಧರ್ಮವೇ ಗೆಲ್ಲುತಿರುವ ಈ ಕಾಲಘಟ್ಟದಲ್ಲಿ ಯಾರಿಗೂ ತಿಳಿಯದಂತೆ, ಯಾರಲ್ಲೂ ಹೇಳಿಕೊಳ್ಳದೆ ,ಯಾರಿಗೂ ಬರೆಯಲು ಅವಕಾಶ ಮಾಡಿಕೊಡದೆ ದಾನ-ಧರ್ಮ ಸಮಾಜಸೇವೆ ಮಾಡುತ್ತಿರುವ ಒರ್ವ ವ್ಯಕ್ತಿ ಮತ್ತು ಶಕ್ತಿಯ ಯಶೋಗಾತೆಯನ್ನು ಪ್ರೀತಿಯಿಂದ ನನ್ನನು ಗದರಿಸಿ ಬಿಡುತ್ತಾರೋ ಏನೋ ಎಂಬ ಹೆದರಿಯಿಂದಲೇ ಬರೆಯುವ ಅನಿವಾರ್ಯತೆ ನನಗೆ.
ಮಹಾಭಾರತದ ನೀತಿ ಸತ್ಯದಂತೆ ಸಜ್ಜನರು ಒಳ್ಳೆಯದನ್ನು ಮಾತ್ರ ಸ್ಮರಿಸಿಕೊಳ್ಳುತ್ತಾರೆ. ಕೆಟ್ಟದ್ದನ್ನು ಮಾಡದಿದ್ದರೂ ಎಂದೂ ತಪ್ಪುಗಳ ಬಗ್ಗೆ ಚರ್ಚೆಗೆ ಅವಕಾಶ ಕೂಡದೆ ಪರೋಪಕಾರಕ್ಕಾಗಿ ಕೆಲಸ ಮಾಡುವರೇ ಹೊರತು ಪ್ರತ್ಯುಪಕಾರ ವನ್ನು ಬಯಸುವುದಿಲ್ಲ.ವೇದವನ್ನು ಓದಿದರೆ ಮಾತ್ರ ದೊಡ್ಡವರೆನಿಸಿಕೊಳ್ಳುವಿದಿಲ್ಲ. ಜನರ ವೇದನೆಯನ್ನು ಅರಿತವನು ಕೂಡ ದೊಡ್ಡವರಾಗುತ್ತಾರೆ ಹಾಗೆಯೇ ಪುಣ್ಯಾತ್ಮರು ಅನಿಸಿಕೊಳ್ಳುತ್ತಾರೆ.
ಸಂತೃಪ್ತಿಯ ಮೂಲ ಇರುವುದೇ ಶ್ರಮದಿಂದ ಎಂದು ಎಲ್ಲ ಗುಣಗಳನ್ನು ತನುಮನದಲ್ಲಿ ಆವರಿಸಿಕೊಂಡು ಕೈಲಾಸ ದೊಡ್ಡದಲ್ಲ,ಕಾಯಕ ದೊಡ್ಡದು. ಧರ್ಮ ದೊಡ್ಡದಲ್ಲ. ಆಸ್ತಿ ದೊಡ್ಡದಲ್ಲ , ಆಚಾರ-ವಿಚಾರ ಹಾಗೂ ಹ್ರದಯ ಶ್ರೀಮಂತಿಕೆ ದೊಡ್ಡದು. ಸನ್ಮಾನ ದೊಡ್ಡದಲ್ಲ, ಸಂಸ್ಕಾರ ದೊಡ್ಡದು. ವಿದ್ಯೆ ದೊಡ್ಡದಲ್ಲ, ಅನುಭವ ದೊಡ್ಡದು ಹೀಗೆ ಅರ್ಥಪೂರ್ಣ ಹಾಗೂ ಮೌಲ್ಯಯುತ ನುಡಿಮುತ್ತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತನ್ನ ಇತಿ-ಮಿತಿ ಯಲ್ಲಿ ಉದ್ಯಮದಲ್ಲಿ ಆತ್ಮೀಯರಿಗೆ ಒಳ್ಳೆ ಹುದ್ದೆ ಹಾಗೂ ಕೆಲಸ ಕೊಡಿಸಿ, ಅವರನ್ನು ಬೆಳೆಸಿ ತಾನು ಬೆಳೆದು ಯಶಸ್ವಿ ಉದ್ಯಮಿ ಎಂದು ಗುರುತಿಸಿಕೊಂಡವರು ಮುಂಬೈಯ ಕಾರ್ಪೊರೇಟ್ ಕ್ಯಾಟರಿಂಗ್ ರಂಗದ ಗುಣವಂತ ಉದ್ಯಮಿಯಾದ *ದಯಾನಂದ್ ಶ್ರೀಯಾನ್.
ಇವರ ಸಮಾಜಮುಖಿ ಚಿಂತನೆಯ ಸಮಾಜ ಸೇವೆ ಕಾರ್ಯವನ್ನು ಪತ್ರಿಕೆ ಮೂಲಕ ಗೌರವದಿಂದ ಪರಿಚಯಿಸುತ್ತಿದ್ದೇವೆ. ಇವರು ಮೂಲತಃ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಮಂಕಿಯವರು .
ತಂದೆ ಕೃಷ್ಣ (ದಿವಂಗತ)ಮತ್ತು ತುಂಗಾ,ರ ಒಬ್ಬಳು ಅಕ್ಕಾ ಮತ್ತು ಮೂರು ಜನ ತಂಗಿಯರ ಮುದ್ದಿನ ಪ್ರೀತಿಯ ಅಣ್ಣ ದಯಾನಂದ್ ಶ್ರೀಯಾನ್. ಕಡು ಬಡತನ ನಡುವೆ ಎಳವೆಯಲ್ಲಿಯೇ ಊರು ಬಿಟ್ಟು ದುಡಿಮೆಗಾಗಿ ಬೆಂಗಳೂರು ಸೇರಿಕೊಳ್ಳುತ್ತಾರೆ.ಅಲ್ಲಿ 3ವರುಷ ದುಡಿದು ದಿಕ್ಕು ತೋಚದೆ 4 ಜನ ಅಕ್ಕಾ ಹಾಗೂ ತಂಗಿಯ ಜೀವನ ದಡ ಸೇರಿಸುವ ಹೊಣೆ ಇವರದ್ದಾಗಿತ್ತು.
ಹಾಗಾಗಿ ಏನಾದರೂ ಮಾಡಲೇ ಬೇಕೆಂದು ದೃಢ ನಿರ್ಧಾರ ಮಾಡಿ ಮುಂಬೈಗೆ ಬಸ್ ಏರುತ್ತಾರೆ. ಅಂದು ಮುಂಬೈಯಲ್ಲಿ ಕಷ್ಟ-ಸುಖ ,ವೇದನೆ ಎಲ್ಲವನ್ನೂ ಅನುಭವಿಸಿ, ಒರ್ವ ಅಕ್ಕ ,ಮೂವರು ತಂಗಿಯವರಿಗೆ ಮದುವೆ ಮಾಡಿಸಿ ತಾನು ಸಂಸಾರ ಜೀವನದಲ್ಲಿ ಸುಖವಾಗಿ ಇರುವುದರ ಹಿಂದೆ ಅವಿರತ ದುಡುಮೆಯ ಫಲ ಇದೆ, ಪರಿಶ್ರಮದ ಬೆವರ ಹನಿ ಕಾಣಸಿಗುತ್ತದೆ.ಶ್ರೀಯುತ ಶ್ರೀಯಾನ್ ರವರು ಬೆಂಕಿಯಲ್ಲಿ ಅರಳಿದ ಹೂವು. ಇದನ್ನು ಇಲ್ಲಿ ಉಲ್ಲೇಖಿಸದಿದ್ದರೆ ಅವರ ಪರಿಚಯ ಲೇಖನವೇ ಅಪೂರ್ಣವಾಗುವುದು.
*ದಯಣ್ಣ* ಎಂದು ಎಲ್ಲರಿಂದಲೂ ಪ್ರೀತಿಯಿಂದ ಇವರನ್ನು ಜನ ಕರೆಯುತ್ತಾರೆ. ಮುಂಬೈಯಲ್ಲಿ ಆರಂಭದ ದಿನದಲ್ಲಿ ಸಣ್ಣ-ಪುಟ್ಟ ಕ್ಯಾಂಟೀನ್ ನಲ್ಲಿ ದುಡಿಯುತ್ತ, ಹಣ ಸಂಪಾದನೆಯ ಜೊತೆಗೆ ಹೇರಳವಾಗಿ ಕ್ಯಾಟರಿಂಗ್ ರಂಗದ ಅನುಭವವನ್ನು ಪೆಡೆಯುತ್ತಾ ಹೋದರು. ಮುಂದೆ ಪಾಲುದಾರಿಕೆಯಲ್ಲಿ ಕಾರ್ಪೊರೇಟ್ ಲೆವೆಲ್ಲಿನಲ್ಲಿ ಸನ್ನಿದಿಕ್ಯಾಂಟ್ರಿಂಗ್ ಆರಂಭಿಸಿ ಹಲವಾರು, ದಕ್ಷಿಣ ಕನ್ನಡ, ಉಡುಪಿ ಜೆಲ್ಲೆ ಮತ್ತು ಹೊರ ರಾಜ್ಯದ ಜನತೆ ಉದ್ಯೋಗಕಲ್ಪಿಸಿಕೊಟ್ಟ ಹಿರಿಮೆ ಇವರದ್ದು.
ಕಾರಣಾಂತರಗಳಿಂದ ಇದರ ಪಾಲುದಾರಿಕೆಯಿಂದ ಹೊರನಡೆದ ಇವರು ಕ್ಯಾಟರಿಂಗ್ ರಂಗದಲ್ಲಿರುವ ಇವರ ಅನುಭವಕ್ಕೆ ಕೆಲವು ಅನ್ಯ ಕಾರ್ಪೊರೇಟ್ ಕ್ಯಾಟರಿಂಗ್ ರಂಗದವರು ಇವರ ಉಸ್ತುವಾರಿಯಲ್ಲಿ ಪೂರ್ಣಪ್ರಮಾಣದ ಸೆಂಟ್ರಲ್ ಕಿಚನ್ ಇವರಿಗೆ ಅರ್ಪಿಸಿ ಬಿಡುತ್ತಾರೆ .
ಇವರ ಅನುಭವ ಮತ್ತು ವ್ಯಾಪಾರ ಚತುರತೆ ಗಮನಿಸಿದ ನಾಲ್ಕು ಜನ ಕನಸುಗಾರರು ಸೇರಿ ಒಂದು ಅತ್ಯುತ್ತಮ, ನವೀನ ಎಲ್ಲಾ ಸೌಕರ್ಯಗಳು ಇರುವಂತಹ ಕಾರ್ಪೊರೇಟ್ ಕ್ಯಾಟರಿಂಗ್ “Dietico” Helath food &Allied services Limited ಎನ್ನುವ ಒಂದು ಸಂಸ್ಥೆ ನಾಲ್ಕು ಜನ ಪಾಲುದಾರಿಕೆಯಲ್ಲಿ ಶುಭಾರಂಭಗೊಂಡಿದ್ದು, ಇವರ ಕನಸಿನ ಕೂಸು ಈಗ ಮುಂಬೈ ಕ್ಯಾಂಟ್ರಿಂಗ್ ರಂಗದಲ್ಲಿ ಮುಂಚೂಣಿಯಲ್ಲರುವುದನ್ನು ಅಲ್ಲ ಗಳೆಯುವಂತಿಲ್ಲ.
ಹಲವಾರು ಯುವಕರು ಮತ್ತು ನೂರಾರು ಸಂಸಾರಗಳು ನನ್ನನು ಸೇರಿಸಿ ಬದುಕಿಗೆ ದಾರಿ ದೀಪ ಆದಂತಹ ವ್ಯಕ್ತಿ ಶ್ರೀಯುತ ದಯಾಣ್ಣ . ಅನಾರೋಗ್ಯ ಪೀಡಿತರಿಗೆ, ಕಡು ಬಡವರಿಗೆ ಸಂಘ -ಸಂಸ್ಥೆಗಳಿಗೆ ಮಾಡಿದ ಸಹಾಯ ಮತ್ತು ಸಹಕಾರ ಹೇಳಲು, ಬರೆಯಲು ಅವಕಾಶ ಕೊಟ್ಟವರಲ್ಲ. ಶ್ರೀಯುತರಲ್ಲಿ ಇದರ ಬಗ್ಗೆ ಕೇಳಿದಾಗ ನನ್ನಲ್ಲಿ ಹೇಳಿದ ಮಾತು ದಾನ, ಧರ್ಮ, ಸಹಾಯ ಮತ್ತು ಸಹಕಾರಗಳು ಮಾಡಿದವನ ಮನಸ್ಸಿನೊಳಗೆ ಇರಬೇಕು. ಪಡೆದವನ ಕೃತಜ್ಞತೆ ಆತನ ಹೃದಯದಲ್ಲಿ ಇರಬೇಕು. ಹೊರಗೆ ಇದರ ಬಗ್ಗೆ ಪ್ರಚಾರ ವಾಗಬಾರದು ಇದನ್ನು ಕೂಡ ಶ್ರೀಯುತರ ಅನುಮತಿಯಿಲ್ಲದೆ ತಮಗೆ ತಿಳಿಸುತ್ತಿದ್ದೇನೆ. ಒಬ್ಬ ಶ್ರಮದ ಅರಿವಿದ್ದವರಿಗೆ ಕಷ್ಟ ಗೊತ್ತಿದ್ದವರಿಗೆ ಎಲ್ಲಾ ತಿಳಿದಿರುತ್ತದೆ.
ಪತ್ನಿ ಸವಿತಾ ಮತ್ತು ಮಗ ವಿಹಾನ್, ಮಗಳು ವೈಷ್ಣವಿ ಜೊತೆಗೆ ಸುಖಮಯ ಜೀವನ. ಹಲವಾರು ಜನರ ಕಷ್ಟ-ನೋವು ನಲಿವುಗಳಿಗೆ ಸ್ಪಂದಿಸುವ ಇವರ ನಿಸ್ವಾರ್ಥ ಸೇವಾ ಮನೋಭಾವ ಹಾಗೂ ಹ್ರದಯ ಶ್ರೀಮಂತಿಕೆ ನಿಜಕ್ಕೂ ಪ್ರಶಂಸನಾರ್ಹ. ಭವಿಷ್ಯದ ದಿನಗಳಲ್ಲಿ ಇವರ ಉದ್ಯಮದಲ್ಲಿ ಉತ್ತರೋತ್ತರ ಅಭಿವೃದ್ಧಿಯಾಗಲಿ , ಜೀವನ ಸುಖಮಯವಾಗಿರಲೆಂದು ಪತ್ರಿಕೆ ವತಿಯಿಂದ ಶುಭ -ಹಾರೈಕೆಗಳು.
ಈಶ್ವರ್ ಸಿ ನಾವುಂದ
ಚಿಂತಕ- ಬರಹಗಾರರು
9833259692