ಸಂಗೀತ, ಕಲೆ ಮತ್ತು ಸಾಹಿತ್ಯ ದ ಬಗ್ಗೆ ಅಪಾರ ಆಸಕ್ತಿ ಹೊಂದಿರುವರು ಈ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ತವಕದಲ್ಲಿರುತ್ತಾರೆ.ಕಲಾವಿದ ಕಲೆಯಲ್ಲಿನ ಉತ್ಸಾಹ ಸೃಜನಶೀಲತೆಯನ್ನು ತನ್ನ ಅಂತರಾಳದಲ್ಲಿ ವೈವಿಧ್ಯತೆ ಮತ್ತು ವೈಭವದಿಂದ ತುಂಬಿಕೊಳ್ಳುತ್ತಾನೆ. ಹೀಗೆ ಸದಾ ಉಸಿರು ಉಸಿರಿನಲ್ಲೂ ಸಂಗೀತವನ್ನು ಉಸಿರಾಡುವ ಒರ್ವ ಕನಸುಗಾರ ಯುವಕ ಅಕ್ಷಯ್ ಬಡಾಮನೆಯವರನ್ನು ಇಂದು ಪರಿಚಯಿಸುತ್ತಿದ್ದೇವೆ.
ಬೈಂದೂರು ತಾಲೂಕಿನ ನಂದನವನದ ಕೆರ್ಗಾಲ್ ನ ಶ್ರೀ ಮಂಜುನಾಥ ಪೂಜಾರಿ ಹಾಗೂ ಶ್ರೀಮತಿ ಅಕ್ಕಯ್ಯ ರವರ ಮೂರು ಜನ ಮಕ್ಕಳಲ್ಲಿ ಹಿರಿಯ ಮಗ ಅಕ್ಷಯ್ ಬಡಾಮನೆ. ಸಹೋದರ ಅಭಿಷೇಕ್, ಸಹೋದರಿ ಅಶ್ಮಿತಾ, ಜೊತೆ ಇವರ ಪ್ರೀತಿಯ ಒಡನಾಟ.ವ್ರತ್ತಿಯಲ್ಲಿ ರಸಾಯನ ಶಾಸ್ತ್ರದ ಇಂಜಿನಿಯರಿಂಗ್ ನಲ್ಲಿ ಉದ್ಯೋಗಿಯಾಗಿದ್ದು,ಜೀವನೋಪಾಯಕ್ಕಾಗಿ ದುಡಿಯುತ್ತ, ಸಂಗೀತದ ಗೀಳನ್ನು ಹತ್ತಿಸಿಕೊಂಡು ಇಂದು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಸಾಧನೆಯನ್ನು ಮಾಡಬೇಕೆನ್ನುವ ಹೆಬ್ಬಯಕೆ ಇವರದ್ದು.
2014 ರಲ್ಲಿ ಸಂಗೀತ ಗುರುಗಳಾದ ಪ್ರವೀಣ್ ಹಾಸನ್ ರವರ ಬಳಿ ಸಂಗೀತಾಭ್ಯಾಸ ಪ್ರಾರಂಭಿಸಿ
ತದನಂತರ ಗಿಟಾರ್, ಕೊಳಲು ವಾದನವನ್ನು ಕರಗತಮಾಡಿಕೊಂಡರು. ಸಂಗೀತ ಕ್ಷೇತ್ರದಲ್ಲಿ ಇರುವಷ್ಟು ಗುರು ಶಿಷ್ಯ ಸಂಬಂಧ ಬೇರೆ ಯಾವ ಕ್ಷೇತ್ರದಲ್ಲಿ ಇರಲಿಕ್ಕಿಲ್ಲ ಎನ್ನುವುದು ಇವರ ಅಭಿಪ್ರಾಯ. ಗುರುಭಕ್ತಿ ದೇವರ ಭಕ್ತಿಗಿಂತಲೂ ದೊಡ್ಡದು. ಸಂಗೀತ ಗುರು ಸ್ವತಃ ತನ್ನ ಮಕ್ಕಳಿಗಿಂತಲೂ ಹೆಚ್ಚಾಗಿ ತನ್ನ ಶಿಷ್ಯರನ್ನು ಪ್ರೀತಿಸುತ್ತಾರೆ. ಗುರು ಸಂಗೀತವನ್ನಷ್ಟೇ ಹೇಳಿಕೊಡುವುದಿಲ್ಲ ,ಬದುಕಿನ ದಾರಿಯನ್ನು ತೊರಿಸಿ ಕೊಡುತ್ತಾರೆ.
ಇಲ್ಲಿ ಅಕ್ಷಯ್ ಮಾತನಾಡುವಾಗ ತನ್ನ ಗುರುಗಳ ಪರಿಚಯವನ್ನು ಬರೆಯಲು ಮರೆಯಬಾರದು ಎಂದು ನನ್ನಲ್ಲಿ ವಿನಂತಿಸಿಕೊಂಡರು.
2015 ರಲ್ಲಿ ಇವರ ಮೊದಲ ಅಲ್ಬಮ್ ಹಾಡು “Modi” The Changer ಪ್ರಧಾನ ಮಂತ್ರಿಯವರ ಬಗ್ಗೆ ಹಾಡಿದ ಹಾಡು ಹೆಚ್ಚಿನ ರಾಜಕಾರಣಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. 2016 ರಲ್ಲಿ “ಕಣ್ಣೀರಿನ ಕೊನೆ ಹನಿ” ಸಾಹಿತ್ಯ ಮರಳಿನ ದೋಣಿ ಚಿತ್ರಕ್ಕೆ ಆಯ್ಕೆ. 2016 ರಲ್ಲಿ Bangalore Got Talent ನಲ್ಲಿ ಭಾಗವಹಿಸಿದ್ದಾರೆ.
2018 “ಪ್ರೀತಿಸುವ ಮುನ್ನ” ಕಿರುಚಿತ್ರದ ಹಾಡಿಗೆ ಧ್ವನಿ ನೀಡಿದ್ದು “ಕಾದು ಸೋತಿಹೆನು” ಹಾಡು ಇವರಿಗೆ ಬಹಳಷ್ಟು ಹೆಸರು ತಂದುಕೊಟ್ಟಿತು.
2018 ಕನ್ನಡ ಕೋಗಿಲೆ ಮೆಗಾ ಆಡಿಷನ್ ವರೆಗೂ ಹೋಗಿದ್ದು ಸ್ವತಃ ಕನ್ನಡ ರ್ಯಾಪರ್
ಚಂದನ್ ಶೆಟ್ಟಿ ಯವರು ಇವರ ಪ್ರತಿಭೆಯನ್ನು ಪ್ರಶಂಸಿರುತ್ತಾರೆ. ಅದೇ ಸಾಲಿನಲ್ಲಿ ಮತ್ತೊಂದು ಕುಂದಾಪ್ರ ಕನ್ನಡ ಹಾಡು “ಶ್ವೇತಾ ಹೆಣೆ ಶ್ವೇತಾ” ಅಕ್ಷಯ್ ಯವರನ್ನು ಮತ್ತಷ್ಟು ಜನಪ್ರಿಯತೆಗೆ ಕಾರಣವಾಯಿತು.
ಈ ಹಾಡನ್ನು ಸ್ವತಃ ರವಿ ಬಸ್ರೂರ್ ರವರು ಮೆಚ್ಚಿ ಪ್ರಶಂಸಿದ್ದರು. ಇನ್ನಷ್ಟು ಕುಂದಾಪ್ರ ಕನ್ನಡದ ಹಾಡುಗಳ ಬಗ್ಗೆ ಒಲವು, ಅದೇ ಸಾಲಿನಲ್ಲಿ “ನಾಳಿಂದ ನಾ ಕುಡುದಿಲ್ಲ” ಎನ್ನುವ ಹಾಸ್ಯ ಸಾಹಿತ್ಯ ಮಿಶ್ರಿತ ಹಾಡು ಕುಂದಾಪುರದ ಮನೆಮಾತಾಯಿತು.
ಇದಲ್ಲದೆ ಸುಮಾರು 21 ಕಿರುಚಿತ್ರ ಹಾಗೂ ಅಲ್ಬಮ್ ಹಾಡುಗಳಿಗೆ ಇವರು ಧ್ವನಿಯಾಗಿದ್ದು, ಇನ್ನೂ ಹಲವು ಹಾಡುಗಳು ಬಿಡುಗಡೆಗೊಳ್ಳಬೇಕಷ್ಟೆ. ನನ್ನೂರು ಕುಂದಾಪ್ರದ ಅಂದ ಚಂದ, ಸಂಸ್ಕ್ರತಿ ವರ್ಣನೆಗಾಗಿ ಮಾಡಿದ ಹಾಡು “ಎಷ್ಟ್ ಚಂದ ನಮ್ಮೂರು” ಕೂಡ ಸೂಪರ್ ಹಿಟ್ ಹಾಡಾಗಿ ಹೊರಹೊಮ್ಮಿತು.
2020 ರಲ್ಲಿ ಸ್ವತಃ ಅಕ್ಷಯ್ ಬಡಾಮನೆ ಪರಿವರ್ತನೆ ಎನ್ನುವ ಹಾಡಿಗೆ ಸಂಗೀತ ನಿರ್ದೇಶಿಸಿ ಧ್ವನಿಯಾಗಿದ್ದರು. ಸುಹಾಸ್ ಮೊಯ್ಲಿ ನೇತೃತ್ವದಲ್ಲಿ ಆವರಿಸಿದೆ ಮ್ಯೂಸಿಕ್ ವಿಡಿಯೋ, ಅನಿಲ್ ಕಂಚಿಕಾನ್ ಹಾಗೂ ಶಕಿಲಾ ಶೆಟ್ಟಿಯವರಿಗೆ ಹೆಸರು ತಂದುಕೊಟ್ಟಿತು. ರಿಶಿತ್ ಶೆಟ್ಟಿ ನಿರ್ದೇಶನದ “ಹೇಳ್ವರಿಲ್ಲ ಕೇಂಬರಿಲ್ಲ” ಕುಂದಾಪ್ರ ಕನ್ನಡ ಹಾಡು ಕುಂದಗನ್ನಿಡಗರ ಮನೆಮಾತಾಯಿತು.
ಇದುವರೆಗೆ 3 ಚಲನಚಿತ್ರದಲ್ಲಿ ಮಳೆ ಹಾಡು, ನನ್ ಜೊತೆ ಪೂಜಾಲಕ್ಷ್ಮಿ ಚಿತ್ರಕ್ಕೆ, ಹಾಗೂ ಕನ್ನಡ ಖ್ಯಾತ ಹಾಸ್ಯನಟ ಚಿಕ್ಕಣ್ಣ ನವರ ಚಿತ್ರಕ್ಕೂ ಹಾಡಿದ್ದಾರೆ. ಅಘೋರ ಎನ್ನುವ ಹಿಂದಿ ಆಲ್ಬಮ್ ಗೂ ಧ್ವನಿಯಾಗಿದ್ದಾರೆ.
ಇಲ್ಲಿವರೆಗಿನ ಎಲ್ಲಾ ಸಣ್ಣ ಪುಟ್ಟ ಸಾಧನೆಗೆ ಮುಖ್ಯ ಕಾರಣ ನನ್ನ ಗುರುಗಳಾ ಪ್ರವೀಣ್ ಹಾಸನ್ ರವರದ್ದು ಎನ್ನುವುದು ಅಕ್ಷಯ್ ರವರ ಮನದಾಳದ ಮಾತು. ಸಂಗೀತಭ್ಯಾಸ, ಗಿಟಾರ್, ಕೊಳಲು, ಕೀಬೋರ್ಡ್ ಎಲ್ಲಾ ಕಲೆಗೂ ಮುಖ್ಯ ಕಾರಣ ನನ್ನ ಗುರುಗಳು ಎನ್ನುವುದು ಅಕ್ಷಯ್ ಯವರ ಮಾತು.
ಅಶ್ನಿಗ್ಧ ಕ್ರಿಯೇಷನ್ಸ್ ತಂಡ ನಿರ್ಮಾಣ ಮಾಡಿ ಹಲವಾರು ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದು ,ನಾವು ಮಾಡಿರೋ ಪ್ರತಿಯೊಂದು ಪ್ರಯತ್ನವೂ ಅಶ್ನಿಗ್ಧ ಕ್ರಿಯೇಷನ್ಸ್ ಯ್ಯಾಟ್ಯೂಬ್ ಚ್ಯಾನೆಲ್ನಲ್ಲಿ ಕಾಣಸಿಗುತ್ತದೆ ಎಂದು ಅಕ್ಷಯ್ ತಿಳಿಸಿದ್ದಾರೆ.
ಈಗಾಗಲೆ ಪ್ರತಿಭಾನ್ವೇಷಣೆ, ಅನ್ವೇಷಣ್ ಹೀಗೆ ಹಲವು ಟಿವಿ ಕಾರ್ಯಕ್ರಮಗಳಲ್ಲಿ ಸಂದರ್ಶನ ನೀಡಿರುತ್ತಾರೆ.
ಅಕ್ಷಯ್ ತಂಡದವರಾದ ಅನಿಲ್ ಕಂಚಿಕಾನ್, ಸುಹಾಸ್, ಶಕಿಲ ಶೆಟ್ಟಿ, ಲಿಖಿತ್, ಪೋಸ್ಟರ್ ವಿನ್ಯಾಸದಲ್ಲಿ ಸೌಹಾರ್ದ್ ಶೆಟ್ಟಿ ಸೇರಿದಂತೆ ಹಲವರು ಇವರ ಎಲ್ಲಾ ಪ್ರಯತ್ನಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಬಹುದೊಡ್ಡ ಸಂಗೀತಗಾರನಾಗುವ ಆಸೆ ಇವರದ್ದು.
ನಮ್ಮ ತಂಡದಿಂದ ಇನ್ನೇನು ಕೆಲವೇ ದಿನಗಳಲ್ಲಿ ಮತ್ತೊಂದು ವಿಭಿನ್ನ ಪ್ರಯತ್ನ ಬರುತ್ತಿದ್ದು ಅದರ ಶೂಟಿಂಗ್ ಈಗಾಗಲೆ ಶುರುವಾಗಿದೆ. ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅಕ್ಷಯ್ ತಿಳಿಸಿದ್ದಾರೆ.
ನನ್ನ ಈ ಪುಟ್ಟ ಸಾಧನೆಗೆ ಬೆಂಬಲ ನೀಡುತ್ತಿರುವ ಮಾವ ವೆಂಕಟೇಶ್, ರಾಜು, ಕ್ರಷ್ಣ, ಪ್ರಭಾಕರ್, ರಮೇಶ್ ಹಾಗೂ ತಮ್ಮ ಅಭಿಷೇಕ್ ತಂಗಿ ಅಶ್ಮಿತಾ ಹಾಗೂ ಸ್ನೇಹಿತರ ಸಹಕಾರ ಪ್ರೋತ್ಸಾಹ ಮನಸಾರೆ ಹೇಳಿಕೊಂಡರು.
ಇನ್ನೇನು ಕೆಲವೇ ದಿನಗಳಲ್ಲಿ ಜನನಿ ಮ್ಯೂಸಿಕ್ ವಿಡಿಯೋ ಹಾಗೂ ಮಾಯಾನದಿ ಕಿರುಚಿತ್ರ ಬಿಡುಗಡೆಗೊಳ್ಳಲಿದೆ.ನನ್ನ ಎಲ್ಲಾ ಪ್ರಯತ್ನಕ್ಕೂ ಪ್ರೋತ್ಸಾಹಿಸಿದ ಹಾಗೆ ನಿಮ್ಮ ಸುತ್ತಮುತ್ತ ನಿಮ್ಮ ಕಣ್ಣಿಗೆ ಕಾಣೋ ಪ್ರತಿಯೊಬ್ಬ ಪ್ರತಿಭೆಗೂ ಪ್ರೋತ್ಸಾಹಿಸಿ ಅವರಿಗೆ ಅವಕಾಶ ಕಲ್ಪಿಸಿ ಕೊಡಿ ಎನ್ನುವ ಬಯಕೆ ಹೇಳಿಕೊಳ್ಳುತ್ತಾ ತನ್ನ ಕನಸು ಮತ್ತು ಮನಸುಗಳನ್ನು ತೆರೆದಿಟ್ಟರು.
ಅಕ್ಷಯ್ ರವರ ಹೃದಯದ ಮಾತುಗಳನ್ನಹ ಅನಾವರಣಗೊಳಿಸಿ ನಿಮ್ಮ ಮುಂದೆ ತೆರೆದಿಟ್ಟಿದ್ದೇವೆ. ಹರಸಿ – ಹಾರೈಸಿ, ಇಂತಹ ಉದಯೋನ್ಮುಖ ಪ್ರತಿಭಾವಂತರಿಗೆ ಅವಕಾಶ ಸಿಗುವಂತಾಗಲಿ ಎನ್ನುವುದು ನಮ್ಮ ಹರಕೆ ಮತ್ತು ಹಾರೈಕೆ.
ಈಶ್ವರ್ ಸಿ ನಾವುಂದ
ಚಿಂತಕ-ಬರಹಗಾರರು.