ಕುಂದಾಪುರ (ಅ, 06) : ಸಮಾಜ ಸೇವಕ, ಉದ್ಯಮಿ ನಾಡೋಜ ಡಾ. ಜಿ. ಶಂಕರ್ ರವರ 66ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಮೊಗವೀರ ಯುವ ಸಂಘಟನೆ(ರಿ) ಉಡುಪಿಯ ವಿವಿಧ ಫಟಕದ ಸದಸ್ಯರು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ರಾಬರ್ಟ್, ಮೊಗವೀರ ಯುವ ಸಂಘಟನೆ ಉಡುಪಿ, ಜಿಲ್ಲಾ ಸಂಘಟನೆಯ ಮಾಜಿ ಅಧ್ಯಕ್ಷರಾದ ಸತೀಶ್ ಎಂ ನಾಯ್ಕ, ಸದಾನಂದ ಬಳ್ಕೂರು,ಗುತ್ತಿಗೆದಾರ ಜಗದೀಶ್ ಮೊಗವೀರ, ಕುಂದಾಪುರ ಘಟಕದ ಅಧ್ಯಕ್ಷ ಗಣೇಶ್ ಮೆಂಡನ್, ರಕ್ತದಾನಿ ಸುಧಾಕರ ಕಾಂಚನ್ , ಕುಂದಾಪುರ ಘಟಕದ ಮಾಜಿ ಅಧ್ಯಕ್ಷ ಸುರೇಶ್ ವಿಠಲವಾಡಿ, ಜಿಲ್ಲಾ ಉಪಾಧ್ಯಕ್ಷ ದಿವಾಕರ್ ಮೆಂಡನ್, ಮಾಜಿ ಉಪಾಧ್ಯಕ್ಷ ರಾಜು ಶ್ರೀಯಾನ್ ಗುಜ್ಜಾಡಿ, ಹೆಮ್ಮಾಡಿ ಘಟಕದ ಮಾಜಿ ಅಧ್ಯಕ್ಷ ರಾಘವೇಂದ್ರ ನೆಂಪು,ರಾಜು ಮೆಂಡನ್ ತ್ರಾಸಿ, ಕುಂದಾಪುರ ಘಟಕದ ಮಾಜಿ ಅಧ್ಯಕ್ಷರಾದ ರಮೇಶ್ ಟಿ ಟಿ, ಕೋಟೇಶ್ವರ ಘಟಕದ ನಿಕಟ ಪೂರ್ವ ಅಧ್ಯಕ್ಷ ರವೀಶ್ ಕೊರವಾಡಿ, ಕೋಟೇಶ್ವರ ಘಟಕದ ಅಧ್ಯಕ್ಷರಾದ ಸುನಿಲ್ ಎಂ. ನಾಯ್ಕ್, ಶ್ರೀಧರ್ ಬಿ.ಎನ್. ಹಾಗೂ ಕುಂದಾಪುರ ಘಟಕದ ಕಾರ್ಯದರ್ಶಿ ಚಂದ್ರಹಾಸ್ ಕೋಣಿ, ಕೋಶಾಧಿಕಾರಿ ಮಾಧವ ಕುಂದಾಪುರ ಜೊತೆ ಕಾರ್ಯದರ್ಶಿಗಳಾದ ಸಂತೋಷ್ ಮದ್ದುಗುಡ್ಡೆ ಉಪಸ್ಥಿತರಿದ್ದರು.