ಬದುಕಿನ ಪಯಣದಲ್ಲಿ ತಾಯಿಯಷ್ಟೇ ತಂದೆ ಎನ್ನುವ ದೇವರ ಮಾರ್ಗದರ್ಶನ ಅತ್ಯವಶ್ಯಕ. ನನ್ನ ಜೀವನದ ಯಶಸ್ಸಿನ ಹಾದಿ ನನ್ನ ತಂದೆ. ಅಪ್ಪ ನಡೆದ ದಾರಿ,ಅಪ್ಪನ ಅನುಭವದ ಬದುಕು,ಸ್ವಾಭಿಮಾನ ಶಿಸ್ತಿನ ಜೀವನ ನಡೆಸಿ ಕಷ್ಟದ ಬದುಕ ಸರಿದೂಗಿಸಲು ಪಟ್ಟಿರುವ ಪಣ ನನ್ನ ಬದುಕಿನ ಬಹು ದೊಡ್ಡ ಪಾಠ.
ಅಪ್ಪನ ಕಷ್ಟದ ಜೀವನವೇ ನನಗೆ ಶಿಸ್ತಿನ ಪಾಠವನ್ನು ಕಲಿಸಿದೆ ಎಂದರೆ ಅತಶಯೋಕ್ತಿಯಾಗದು.ಅಪ್ಪನ ನೇರ ನುಡಿ,ಸರಳ ಸ್ವಭಾವದ ವ್ಯಕ್ತಿತ್ವ, ತಿದ್ದಿ ಹೇಳುವ ಪರಿಯು ನನ್ನ ಸಾಧನೆಗೆಸ್ಪೂರ್ತಿಯಾಗಿದೆ. ಅಪ್ಪನೆಂದರೆ ಎನೋ ಒಂಥರಾ ಪ್ರೀತಿಯ ಸೆಳೆತ.ಪ್ರತಿ ಮಗುವಿಗೂ ತಿದ್ದಿ ತೀಡುವ ತಂದೆ-ತಾಯಿ ದೇವರಿಗೆ ಸಮಾನವೆಂದು ಭಾವಿಸುವ ಸಂಸ್ಕ್ರತಿ ನಮ್ಮದು.ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲೋ ಒಂದೆಡೆಯಿಂದ ಪ್ರೀತಿಯ ಭಾವನೆ ಕಡಿಮೆ ಯಾಗುತ್ತಾ ಹೋಗುತ್ತಿದೆ.ಎಲ್ಲರೂ ತಮ್ಮ ಜೀವನದಲ್ಲಿ ಎತ್ತರಕ್ಕೆ ಬೆಳೆಯುವ ಹಂಬಲದಲ್ಲಿ ಮಕ್ಕಳು ತಂದೆ-ತಾಯಿಯಿಂದ ದೂರ ಸರಿಯುತ್ತಿದ್ದಾರೆ.ಆಧುನಿಕರಣದ ಬಲೆಗೆ ಬಿದ್ದು ಪ್ರೀತಿಯು ಮಾಯವಾಗುತ್ತಿದೆ.
ಪ್ರತಿ ಮಗುವೂ ಅಪ್ಪನೊಂದಿಗೆ ಹೊಂದಿರುವ ಬಾಂಧವ್ಯದ ಬೆಸುಗೆ ಅಮ್ಮನ ಪ್ರೀತಿ ಮಮತೆಯನ್ನು ಅನುಭವಿಸಿಯೇ ಬೆಳೆದಾಗ ಸಮಾಜದಲ್ಲಿ ಒಬ್ಬ ಯಶಸ್ವಿ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ… ತಂದೆ ತಾಯಿಯನ್ನು ಪ್ರೀತಿಸಿ, ಗೌರವಿಸಿ ಅವರು ನಿಮಗಾಗಿ ಪಟ್ಟ ಕಷ್ಟ ,ಪರಿಶ್ರಮವನ್ನು ಒಮ್ಮೆ ಅವಲೋಕಿಸಿ…..
✍…ಜಗ್ಗು ದೇವಾಡಿಗ
ಮೇಲ್ಮನೆ ಉಪ್ಪುಂದ.