ಕೋಟೇಶ್ವರ-(ಅ,8): ಕೋಟೇಶ್ವರ ಸಮೀಪದ ಕಾಳಾವರದಲ್ಲಿ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್( ರಿ ) ಉಪ್ಪುಂದ ಇದರ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಗೋವಿಂದ ಬಾಬು ಪೂಜಾರಿ ಯವರು ಪೂರ್ಣ ಜವಾಬ್ದಾರಿಯನ್ನು ಹೊತ್ತು ನಿರ್ಮಿಸಿಕೊಟ್ಟ 5ನೇ ಮನೆ ಗೃಹಪ್ರವೇಶ ಇಂದು ಸಂತಸದಿಂದ ನಡೆಯಿತು.
ಕಾಳಾವರದ ನರಿಕೋಡ್ಲು ಮನೆ ಸತೀಶ್ ಪೂಜಾರಿ ಯವರ ಮನೆ ನಿರ್ಮಾಣದ ಕನಸನ್ನು ಆಶ್ರಯದಾತ ಡಾ.ಗೋವಿಂದ ಬಾಬು ಪೂಜಾರಿಯವರು ನನಸು ಮಾಡಿದ್ದಾರೆ.ರಿಕ್ಷಾ ಡ್ರೈವರ್ ಒಬ್ಬರ ಮನೆ ನಿರ್ಮಾಣಕ್ಕೆ ಎದುರಾದ ಕಷ್ಟವನ್ನು ಗಮನಿಸಿದ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಗೋವಿಂದ ಬಾಬು ಪೂಜಾರಿಯವರು ಮನೆಯನ್ನು ಪೂರ್ಣಗೊಳಿಸಿ ಕೊಡುವ ಭರವಸೆ ನೀಡಿದ್ದರು.ಇದೀಗ ಸುಸಜ್ಜಿತ ನಿರ್ಮಾಣಗೊಂಡಿದ್ದು ಈ ಮನೆ ವರಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿ ಕೊಡುತ್ತಿರುವ 5ನೇ ಮನೆ ಇದಾಗಿದೆ.
ಇಂದು ಶುಭಗಳಿಗೆಯಲ್ಲಿ “ಶ್ರೀ ವರಲಕ್ಷ್ಮಿ ನಿಲಯದ “ಗ್ರಹಪ್ರವೇಶವು ಕಾಳಾವರದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಗೋವಿಂದ ಬಾಬು ಪೂಜಾರಿ,ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ, ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆಶಾಲತಾ ಶೆಟ್ಟಿ , ಬಿಲ್ಲವ ಸಂಘದ ಹಿರಿಯ ಮುಖಂಡರು,
ಪಂಚಾಯತ್ ಸದಸ್ಯರು ಮತ್ತು ಶ್ರೀ ಗೋವಿಂದ ಬಾಬು ಪೂಜಾರಿ ಅಭಿಮಾನಿ ಬಳಗ ಶ್ರೀಯುತರ ಮಾತಾಪಿತರು ಮತ್ತು ಸಂಸಾರದ ಸರ್ವಸದಸ್ಯರು, ಊರ ಜನತೆಯ ಉಪಸ್ಥಿತಿಯೊಂದಿಗೆ ಬಹಳ ಮಹತ್ವಪೂರ್ಣವಾಗಿ ಕಾರ್ಯಕ್ರಮ ನಡೆಯಿತು.
ವರದಿ: ಈಶ್ವರ್ ಸಿ ನಾವುಂದ