ಉಸಿರಾಗಲೇ ನಾನು ಉಸಿರಾಗಲೇ
ಉಸಿರಲ್ಲೇ ಬೆರೆತಿರುವ ಹೆಸರಾಗಲೇ…?
ನಿನ್ನ ಬೆರಳ ತುದಿಯಲ್ಲಿ ಲಿಪಿಯಾಗಲೇ
ನಿನ್ನ ಕೊರಳ ಒಂಪಲ್ಲಿ ಸ್ವರವಾಗಲೇ
ಮಳೆ ಬರುವ ದಾರಿಯಲಿ ಹಸಿರಾಗಲೇ
ಹೂಬಿರಿವ ನಗುವಲ್ಲಿ ಕಂಪಾಗಲೇ…?
ಇಂಪಾಗಿ ಸೊಂಪಾಗಿ ತಂಪಾಗಲೇ
ಇಂಚಿಂಚು ಮಿಂಚಾಗಿ ಹರಿದಾಡಲೇ
ಕಡಲಲ್ಲಿ ಅಲೆಯಾಗಿ ದಡ ತಬ್ಬಲೇ
ಲತೆಯಂತೆ ಮೈಚಾಚಿ ನಿನ್ನ ಹಬ್ಬಲೇ…?
ನೀ ಮುಂದೆ ನಡೆವಾಗ ನೆರಳಾಗಲೇ
ನಾಚಿಕೆಯ ಲಹರಿಯಲಿ ನದಿಯಾಗಲೇ
ಮಡಿಲಲ್ಲಿ ಮೈಮರೆತು ಮಗುವಾಗಲೇ
ನಿನ್ನೆದೆಯ ಚೈತ್ರಕ್ಕೆ ಉಸಿರಾಗಲೇ…?
ಉಸಿರಾಗಲೇ ನಾನು ಉಸಿರಾಗಲೇ
ಉಸಿರಲ್ಲೇ ಬೆರೆತಿರುವ ಹೆಸರಾಗಲೇ…?
– ಆಕಾಶ ಮಲ್ಲಿಗೆ