ಮಾನವೀಯತೆ ಎಂದರೆ ಮಾನವ ಸ್ಥಿತಿಯಿಂದ ಉದ್ಭವಿಸಿದ ಪರ ಹಿತ ಚಿಂತನೆಯ ಮೂಲಭೂತ ನೀತಿತತ್ವ. ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು”ಎಂದು ಸರ್ವಜ್ಞನ ಮಾತಿನಂತೆ, ತನ್ನಂತೆಯೇ ಇನ್ನೊಂದು ಜೀವಕ್ಕೂ ನೋವಾಗುತ್ತದೆ ಆದು ಗೊತ್ತಿದ್ದು ಇನ್ನೊಂದು ಜೀವವನ್ನು ತಾನು ನೋಯಿಸಬಾರದು ಎಂಬ ವಿವೇಕ ನಮ್ಮಲ್ಲಿ ಜಾಗೃತ ವಾದರೆ ಮಾನವೀಯತೆ ಮತ್ತು ಮನುಷ್ಯತ್ವಕ್ಕೆ ಒಂದು ಅರ್ಥ ಬರುತ್ತದೆ.
ಮಾನವೀಯತೆ ಪ್ರತಿ ಮನುಷ್ಯನ ಹೃದಯದಲ್ಲಿ ಮನೆ ಮಾಡಬೇಕು.ಮಾನವೀಯತೆ ಏಕೆ ಮಾನವನಿಗೆ ಮಹತ್ವದಾಗಿದೆ ಎಂಬ ಕಲ್ಪನೆ ಮತ್ತು ಭಾವನೆಗಳು ಪ್ರತಿಯೊಬ್ಬ ಮನುಷ್ಯನಲ್ಲಿ ಇರುವುದು ಅತ್ಯವಶ್ಯಕ. ನಿನ್ನಲ್ಲಿ ಮಾನವೀಯತೆಯ ಧರ್ಮವಿದ್ದರೆ ಮಾತ್ರ ನಿನ್ನ ಉದ್ಧಾರವಾಗುವುದು ಆದರೆ ಇಂದು ಕೆಲವರು ಇರುವ ಅಲ್ಪ ಸ್ವಲ್ಪ ಮನುಷ್ಯತ್ವ ಮತ್ತು ಮಾನವೀಯತೆಯನ್ನು ಮಾರಿಕೊಂಡು ಮತಿಹೀನರಂತೆ ವರ್ತಿಸುತ್ತಿದ್ದಾರೆ.
ಮಾನವೀಯತೆ ಮರೆಯಾಗಿ ಪಾಪವೇ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಒಬ್ಬ ಕಡಲ ತಡಿಯ ಆಪದ್ಬಾಂಧವ, ಜನಸೇವಕನನ್ನು ಕುಂದವಾಹಿನಿಯ ಮೂಲಕ ತಮಗೆ ಪರಿಚಯಿಸುತ್ತಿದ್ದೇವೆ .ಅವರ ಸೇವಾ ಕಾರ್ಯ ನಿಮಗೆ ಚಿಕ್ಕದೆಂದೆನಿಸಿದರೂ, ಆವರ ಸೇವಾ ಫಲ ಪಡೆದಿರುವವರಿಗೆ ಮಾತ್ರ ಗೊತ್ತಿರುತ್ತದೆ ಅದೆಷ್ಟು ದೊಡ್ಡ ಸಹಕಾರ ಮತ್ತು ಸಹಾಯವೆಂದು…..ಒಬ್ಬ ಸಾಮಾನ್ಯ ವ್ಯಕ್ತಿಯ ಜನಹಿತ ಕಾರ್ಯ ಒಬ್ಬ ಚಿಂತಕರಿಗೆ ಅಸಾಮಾನ್ಯನಾಗಿ ಕಂಡುಬಂದು ಅವರ ಪರಿಚಯದ ಪುಟ ತಮ್ಮ ಮುಂದೆ ತೆರೆದಿಡುತ್ತಿದ್ದೇನೆ.
ಉಪ್ಪುಂದದ ಕರ್ಕಿಕಳಿ ತಾರಾಪತಿಯ ಕಡಲತಡಿಯ ಪರಿಸರದಲ್ಲಿ ಏನಾದರೂ ಅವಘಡ ಸಂಭವಿಸಿದರೆ ,ಅದು ಎಷ್ಟೇ ದೊಡ್ಡ ಸವಾಲಿನ ಪರಿಸ್ಥಿತಿಯಾದರೂ ಸರಿ ಅಲ್ಲಿ ಇವರ ಜನಸೇವೆ ಮುಂಚೂಣಿಯಲ್ಲಿರುತ್ತದೆ. ಆವರೇ ಶ್ರೀ ಜಗನ್ನಾಥ ಉಪ್ಪುಂದ .ತಾರಾಪತಿಯ ಕಡಲತಡಿಯ ಪರಿಸರದಲ್ಲಿ ಏನಾದರೂ ಅಪಘಾತ ಸಂಭವಿಸಿದರೆ ಮೊದಲ ಕರೆ ಹೋಗುವುದೇ ಇವರಿಗೆ .ಹಲವು ಸಲ ಪರಿಸ್ಥಿತಿ ಕೈಮೀರಿದ ಅವಘಡದಲ್ಲಿ ಅಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಮುಟ್ಟಿಸಿ,ರೋಗಿಗಳನ್ನು ರಕ್ಷಿಸಿ ಬಿಲ್ ತುಂಬುವವರೆಗೂ ಈ ವ್ಯಕ್ತಿಯ ಸೇವೆ ಅಲ್ಲಿ ಇರುತ್ತದೆ ಎನ್ನುವುದನ್ನು ನೀವು ನಂಬಲೇಬೇಕು.
ಉಪ್ಪುಂದ ಸುಬ್ಬ ಮೊಗವೀರ ಮತ್ತು ದುರ್ಗಿ ಮೊಗವೀರ (ದಿವಂಗತ) ಇವರ ಹಿರಿಯ ಮಗನಾದ ಇವರಿಗೆ ಇಬ್ಬರೂ ತಂಗಿ ಮತ್ತು ಒಬ್ಬ ತಮ್ಮ ನ ಒಡನಾಡಿ. ಎಲ್ಲರ ಪ್ರೀತಿಯ ಅಣ್ಣಾ, ಊರ ಜನತೆ ಪ್ರೀತಿಯಿಂದ ಕರೆಯುವ ಹೆಸರು “ಜಗ “. ಉತ್ತಮ ಜನ ಸೇವಕ, ನಿಷ್ಠಾವಂತ ಕಾರ್ಯಕರ್ತ ಎಂದು ಗುರುತಿಸಿಕೊಳ್ಳುವುದರ ಜೊತೆಗೆ ಊರಿಗೆ ಮತ್ತು ಉರ ಜನತೆಗೆ ಸರ್ಕಾರದಿಂದ ನ್ಯಾಯಯುತವಾಗಿ ಸಿಗಬೇಕಾದ ಸವಲತ್ತು ಗಳನ್ನು ಜನತೆಗೆ ತಿಳಿ ಹೇಳುತ್ತ, ಸಾರ್ವಜನಿಕರ ಅಹವಾಲುಗಳನ್ನು ಶಾಸಕ, ಸಚಿವರು ತನಕ ತಲುಪಿಸುವ ಸೇತುವೆಯಾಗಿ, ಜನ ಸೇವಕರಾಗಿ ಊರ ಜನತೆಗೆ ತುಂಬಾ ಹತ್ತಿರವಾದವರು.
ಸತತ ನಾಲ್ಕು ಬಾರಿ ಪಂಚಾಯತ್ ಚುನಾವಣೆಯಲ್ಲಿ ಆಯ್ಕೆಯಾಗಿ ,ಉಪ್ಪುಂದ ಪಂಚಾಯತ್ ನ ಕ್ರಿಯಾಶೀಲ ಸದಸ್ಯರಾಗಿದ್ದು, ಒಂದು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧ್ಯಕ್ಷ ಸ್ಥಾನಕ್ಕೆ ನ್ಯಾಯ ದೊರಕಿಸಿ ಕೊಟ್ಟದ್ದಾರೆ. ಹಾಲಿ ಉಪ್ಪುಂದ ಪಂಚಾಯತ್ ಜನ ಮೆಚ್ಚಿದ ಸದಸ್ಯ ನಾಗಿ ಪ್ರತಿಯೊಬ್ಬ ಪ್ರಜೆಯ ಕೋರಿಕೆ ಮತ್ತು ಮನವಿಯನ್ನು ಆಲಿಸಿ ಜನ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಬೈಂದೂರು ಬಿ ಜೆ ಪಿ ಮಂಡಲ ಶಿರೂರು ಮಹಾ ಶಕ್ತಿ ಕೇಂದ್ರದ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಹಲವು ಸಂಕಷ್ಟಗಳನ್ನು ಮತ್ತು ವಿರೋಧಿಗಳನ್ನು ಎದುರಿಸಿರುವ ಇವರು ಈಗ ತಕ್ಕಮಟ್ಟಿಗೆ ಜೀವನದಲ್ಲಿ ಏರುಗತಿ ಕಾಣುತ್ತಾ ಜನಸೇವೆಯಲ್ಲಿ ಮಗ್ನರಾಗಿದ್ದಾರೆ. ಉಪ್ಪುಂದ ಪರಿಸರದ ಕಡಲತಡಿಯಲ್ಲಿ ದೋಣಿ ಮಗುಚಿಸಿದರು, ಮುಳುಗಿದರು ಅವರ ಕುಟುಂಬಕ್ಕೆ ಸರಕಾರದಿಂದ ಸಿಗುವ ಪರಿಹಾರದಿಂದ ಹಿಡಿದು ನ್ಯಾಯ ಸಿಗುವವರೆಗೆ ಹೋರಾಡುವ ಹೋರಾಟಗಾರ ಶ್ರೀ ಜಗನ್ನಾಥ.
ಇತರರಿಗಾಗಿ ನಿಮ್ಮ ಸ್ವಂತಿಕೆಯನ್ನು ಎಂದಿಗೂ ಬಿಟ್ಟು ಕೊಡಬೇಡಿ ಏಕೆಂದರೆ ಈ ಪ್ರಪಂಚದಲ್ಲಿ ನಿಮ್ಮ ಪಾತ್ರವನ್ನು ನಿಮಗಿಂತ ಚೆನ್ನಾಗಿ ಯಾರು ನಿರ್ವಹಿಸಲು ಸಾಧ್ಯವಿಲ್ಲ. ಗೆದ್ದಾಗ ಅಹಂ ಪಟ್ಟವನು ಉಳಿಯಲಾರ ಸೋತಾಗ ಕುಸಿದು ಹೋದವನು ಬೆಳೆಯಲಾರ ಗೆಲುವಿನ ಸಂಭ್ರಮ ಏರದಿರಲಿ ಸೋಲಿನ ನೋವು ಮನಸ್ಸಿಗೆ ತಾಗದಿರಲಿ ಎಂದು ರಾಷ್ಟ್ರಪಿತ ಅಬ್ದುಲ್ ಕಲಾಂ ಅವರು ನಿಮ್ಮಂತವರ ನೋಡಿ ಹೇಳಿರಬೇಕು.
ವಿರೋಧಿಗಳನ್ನು ಮತ್ತು ಕಾಲೆಳೆಯುವವರನ್ನು ನಿರ್ಲಕ್ಷಿಸಿ ನಿಮ್ಮ ಜನಸೇವೆಯಲ್ಲಿ ಮುಂದುವರಿಯಿರಿ ಎಂದು ಧೈರ್ಯ ತುಂಬುತ್ತ ಮುಂದಿನ ನಿಮ್ಮ ಜನಸೇವೆಗೆ ಹೆಚ್ಚು ಶಕ್ತಿ ತುಂಬಲಿ ಎಂದು ಎಂದು ಹಾರೈಸುತ್ತಾ ಶ್ರೀಮೂಕಾಂಬಿಕೆ ಮತ್ತು ಶ್ರೀ ದುರ್ಗಾಪರಮೇಶ್ವರಿ ದಯಾ ನಿಮ್ಮ ಮೇಲಿರಲಿ ಎನ್ನುವುದೇ ನಮ್ಮ ಹರಕೆ ಮತ್ತು ಹಾರೈಕೆಗಳು.
ಈಶ್ವರ್ ಸಿ ನಾವುಂದ
ಚಿಂತಕ -ಬರಹಗಾರ
9833259692