ಕುಂದಾಪುರ(ಅ,15): ಈಜುಗಾರ ,ಜೀವರಕ್ಷಕ, ಭಾಸ್ಕರ್ ಕಳಸ,ತಲಗೋಡು ರವರ ಸಮಾಜ ಸೇವೆ ಗುರುತಿಸಿ ಕೊಟ್ಟ ಸನ್ಮಾನದ ಪ್ರಶಸ್ತಿಪತ್ರ ಹಲವಾರು . ಆದರೆ ಇವರಿಗೆ ವಾಸವಾಗಿರಲು ಮನೆ ಇಲ್ಲದಿರುವುದುಹಾಗೂ ಸರ್ಕಾರದ ಇಲಾಖೆಗಳ ನಿರ್ಲಕ್ಷ್ಯದ ಕುರಿತಾದ ಪೂರ್ಣ ಕಥೆ ಮತ್ತು ವ್ಯಥೆಯ ಪುಟವನ್ನು ಸಾರ್ವಜನಿಕರ ಎದುರು ತೆರೆದಿಟ್ಟಿದ್ದೆವು.

ಇದನ್ನು ಗಮನಿಸಿದ ಉಡುಪಿ ಬೆಳ್ಮಣ್ ನ ‘ಹ್ಯೂಮನಿಟಿ “ಸೇವಾ ಸಂಸ್ಥೆ ಭಾಸ್ಕರ್ ತಲಗೋಡುರವರ ಮನೆ ಕಟ್ಟುವ ಆಸೆಗೆ ಸ್ಪಂದಿಸಿ 1ಲಕ್ಷ ಧನಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಹ್ಯೂಮನಿಟಿ ಸೇವಾ ಸಂಸ್ಥೆಯ ರೋಷನ್ ಬೆಳ್ಮಣ್ ಇವರು ಮತ್ತು ತಂಡದ ಕಾರ್ಯವನ್ನು ಭಾಸ್ಕರ್ ಪರವಾಗಿ ನಾವು ಕೃತಜ್ಞತೆ ಮತ್ತು ಉಪಕಾರ ಸ್ಮರಿಸುತ್ತಿದ್ದೇವೆ.

ಫಲಾನುಭವಿಗಳಾದ ಭಾಸ್ಕರ್ ಕಳಸ ರವರನ್ನು ಈ ಮೂಲಕ ಮಾತನಾಡಿಸಿದಾಗ ಸಂತಸದ ಜೊತೆಗೆ ದೊಡ್ಡಪ್ರಮಾಣದಲ್ಲಿ ನನಗೆ ಉಪಕಾರವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.ಆದರೆ ಯಾರು ಕಣ್ಣುತೆರೆಯಬೇಕಿತ್ತು ಅವರು ಮಾತ್ರ ಇನ್ನೂ ಮಲಗಿರುವುದು ಖೇದಕರ.

ಚಿಂತಕ, ಬರಹಗಾರ ಈಶ್ವರ್ ಸಿ ನಾವುಂದ ರವರ ” ಕುಂದ ವಾಹಿನಿ ” ಬಳಗವು ಸೂಕ್ತ ವ್ಯಕ್ತಿಯನ್ನು ಸೂಚಿಸಿದಕ್ಕಾಗಿ HUMANITY ಸಂಸ್ಥೆ ರೋಶನ್ ಬೆಳ್ಮಣ್ಣು ಮತ್ತು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳುಅಭಿನಂದಿಸುತ್ತೇವೆ ಎಂದು ಹೇಳಿದರು.











