ಮಧುವನ(ಅ,16): ಇಲ್ಲಿನ ಇ ಸಿ ಆರ್ ಕಾಲೇಜಿನಲ್ಲಿ ಅಕ್ಟೋಬರ್ 2 ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಸಂಸ್ಥೆಯ ಚೇರ್ಮನ್ ಶ್ರೀ ಮಧು ಟಿ ಭಾಸ್ಕರ್ ರವರು ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಭಾವಚಿತ್ರಗಳಿಗೆ ಪುಷ್ಪವನ್ನು ಅರ್ಪಿಸುವ ಮೂಲಕ ಮಹಾತ್ಮರ ಜನ್ಮ ದಿನಾಚರಣೆಯನ್ನು ನರವೇರಿಸಿ ಅವರನ್ನು ನೆನಪಿಸುತ್ತ ವಿದ್ಯಾರ್ಥಿಗಳ ಕುರಿತು ಮಾತನಾಡಿದರು.
ವಿದ್ಯಾರ್ಥಿಗಳು ಗಾಂಧೀಜಿಯವರ ಸತ್ಯ, ಶಾಂತಿ, ತ್ಯಾಗ ಹಾಗೂ ಅಹಿಂಸಾ ತತ್ವಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ದೇಶಕ್ಕಾಗಿ ದುಡಿದು ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು. ನಿವ್ರತ್ತ ಸೈನ್ಯಧಿಕಾರಿ ಶ್ರೀ ಆನಿಲ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಾಂಶುಪಾಲರಾದ ಶ್ರೀ ಆಕಾಶ ಸವಳಸಂಗ್ ಮಾತನಾಡಿ ದೇಶದ ಇಬ್ಬರು ಮಹಾನ್ ಚೇತನರ ಕೊಡುಗೆಯನ್ನು ನೆನಪಿಸಿಕೊಟ್ಟರು. ಸಂಸ್ಥೆಯ ಆಡಳಿತಾಧಿಕಾರಿ ಶ್ರೀ ಜೋಬಿನ್ ಜೋಸೆಫ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕುಮಾರಿ ಭೂಮಿಕಾ ಗಾಂಧೀಜಿ ಮತ್ತು ಶಾಸ್ತ್ರಿಯವರ ಕುರಿತು ಮಾತನಾಡಿದರು. ಕುಮಾರಿ ದಿವ್ಯ ಪಾಟೀಲ್ ವಂದಿಸಿದರು. ಕುಮಾರಿ ಬಂದು ಕಾರ್ಯಕ್ರಮವನ್ನು ನಿರೂಪಿಸಿದರು. ಎನ್.ಎಸ್.ಎಸ್ ಘಟಕದ ಸಂಯೋಜಕರಾದ ಶ್ರೀ ಅಶೋಕ್ ಜೋಗಿ, ಸಹ ಸಂಯೋಜಕರಾದ ಕುಮಾರಿ ನಿಧಿ, ಕಲಾ ಮತ್ತು ಸಾಂಸ್ಕೃತಿಕ ಘಟಕದ ಸಂಯೋಜಕರಾದ ಶ್ರೀಮತಿ ರೂಪ ಮತ್ತು ಕುಮಾರಿ ಅರ್ಪಿತಾ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಲಯನ್ಸ್ ಕ್ಲಬ್ ಬ್ರಹ್ಮಗಿರಿ ಮತ್ತು ಇ ಸಿ ಆರ್ ಕಾಲೇಜು ಜಂಟಿಯಾಗಿ “ಮಲ್ಪೆ ಕಡಲ ತಡಿ” ಯ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮಲ್ಪೆ ಕಡಲ ಜೀವ ರಕ್ಷಕ ದಳದವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.