ಉಚ್ಚಿಲ(ಅ,17): ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಪ್ರಯುಕ್ತ
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ(ರಿ) ಉಚ್ಚಿಲ,ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸ್ವರ್ಣ ಕಲಶ ನಿರ್ಮಾಣ ಸಮಿತಿಯ ಆಯೋಜನೆಯಲ್ಲಿ ತಾಯಿ ಶ್ರೀ ಮಹಾಲಕ್ಷ್ಮೀ ದೇಗುಲದ ಸ್ವರ್ಣ ಕಲಶ ಸಮರ್ಪಣೆಯ ಕುರಿತಾದ ಸ್ವರ್ಣಕಲಶ ಸಮಿತಿಯ ರಶೀದಿ ಪುಸ್ತಕ ಹಾಗೂ ನಿವೇದನಾ ಪತ್ರ ಬಿಡುಗಡೆ ಸಮಾರಂಭ ಅಕ್ಟೋಬರ್,17 ರಂದು ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸಭಾಂಗಣದಲ್ಲಿ ನಡೆಯಿತು.
ಸಮಿತಿಯ ಮಾರ್ಗದರ್ಶಕರಾದ ನಾಡೋಜ ಡಾ.ಜಿ ಶಂಕರ್ ರವರು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಪ್ರಧಾನ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯರು ಜ್ಯೋತಿ ಬೆಳಗಿಸಿ ಸ್ವಸ್ಥಿ ವಾಚನ ನೀಡಿದರು. ಕೇಂದ್ರೀಯ ಮಂಡಳಿಯ ಅಧ್ಯಕ್ಷ ರಾದ ಶ್ರೀ ಮನೋಜ್ ಸಾಲ್ಯಾನ್ ಉಳ್ಳಾಲ ರವರು ಸ್ವರ್ಣ ಕಳಶ ನಿರ್ಮಾಣದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ರಾದ ಶ್ರೀ ಜಯ ಸಿ ಕೋಟ್ಯಾನ್ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾದ ಶ್ರೀ ಗುಂಡು ಬಿ ಅಮೀನ್ ಕ್ಷೇತ್ರಡಾಳಿತ ಅಧ್ಯಕ್ಷ ರಾದ ಶ್ರೀ ವಾಸುದೇವ ಸಾಲ್ಯಾನ್ ಕಟಪಾಡಿ, ಸ್ವರ್ಣ ಕಳಶ ನಿರ್ಮಾಣ ಸಮಿತಿಯ ಐದು ವಲಯದ ಅಧ್ಯಕ್ಷರಾದ ಶ್ರೀ ಉದಯ ಕುಮಾರ್ ಹಟ್ಟಂಗಡಿ ಕುಂದಾಪುರ, ಶ್ರೀ ಸತೀಶ್ ಕುಂದರ್ ಮಲ್ಪೆ ಉಡುಪಿ, ಶ್ರೀ ದಯಾನಂದ ಬಂಗೇರ ಉಳ್ಳಾಲ ಮಂಗಳೂರು, ಶ್ರೀ ಶರಣ್ ಕುಮಾರ್ ಮಟ್ಟು ಮಧ್ಯ ವಲಯ, ಶ್ರೀ ಗೌತಮ್ ಸಾಲ್ಯಾನ್ ಕೋಡಿಕಲ್ ಮಂಗಳೂರು ಉತ್ತರ ಉಪಸ್ಥಿತರಿದ್ದರು.
ವಿಶೇಷ ಅತಿಥಿಗಳಾಗಿ ಕರ್ನಾಟಕ ಪರ್ಸಿನ್ ಬೋಟ್ ಮೀನುಗಾರರ ಸಂಘ ರಿ ಇದರ ಅಧ್ಯಕ್ಷ ರಾದ ಶ್ರೀ ಶಶಿ ಮೆಂಡನ್(ಬಾಲು) ಬೆಂಗ್ರೆ, ಶ್ರೀ ದಯಾನಂದ ಕುಂದರ್ ಮಲ್ಪೆ, ಶ್ರೀ ಗಂಗಾಧರ ವೈ ಸುವರ್ಣ ಹೆಜಮಾಡಿ, ಮಹಾಜನ ಸಂಘದ ಉಪಾಧ್ಯಕ್ಷ ರಾದ ಹಾಗೂ ಸ್ವರ್ಣ ಕಳಶ ನಿರ್ಮಾಣ ಸಮಿತಿಯ ಏಳು ಪಟ್ಣದ ಉಸ್ತುವಾರಿ ಶ್ರೀ ಸುಭಾಸ್ ಕಾಂಚನ್ ಬೋಳಾರ, ಶ್ರೀ ಭರತ್ ಸಾಲ್ಯಾನ್ ಎರ್ಮಾಳು, ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸುಧಾಕರ ಎಂ, ಮೊಗವೀರ ಸಮಾಜದ ವರಿಷ್ಠ ರಾದ ಶ್ರೀ ಸದಾನಂದ ಬಂಗೇರ ಉಳ್ಳಾಲ ಉಪಸ್ಥಿತರಿದ್ದರು.
ಸ್ವರ್ಣ ಕಳಶ ನಿರ್ಮಾಣ ಸಮಿತಿಯ ಕೇಂದ್ರಿಯ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶ್ರೀ ಶಿವರಾಮ್ ಕೆ* ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಿಸಿದರು. ಉಡುಪಿ ವಲಯದ ಕಾರ್ಯದರ್ಶಿ ಶ್ರೀ ರಾಜೇಂದ್ರ ಹಿರಿಯಡ್ಕ ಧನ್ಯವಾದಗೈದರು ಸ್ವರ್ಣ ಕಲಶ ಸಮಿತಿಯ ವಿವಿಧ ವಲಯಗಳ ಉಪ ಸಮಿತಿಯ ಅಧ್ಯಕ್ಷರು ,ಪದಾಧಿಕಾರಿಗಳು ,ದೇವಿಯ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.