ಕುಂದಾಪುರ (ಅ,20): ಹಂಗಳೂರು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ರಾಷ್ಟ್ರೀಯ ಆರೋಗ್ಯ ಯೋಜನೆಗಳು ಅಭಿಯಾನ ಮತ್ತು ಕಾರ್ಯಕ್ರಮಗಳ ಎಲ್.ಇ.ಡಿ. ಸಂಚಾರಿ ವಾಹನಗಳ ಮೂಲಕ ಹಂಗಳೂರು ಗ್ರಾಮದ ಪ್ರತಿಯೊಂದು ವಾರ್ಡಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಪಿ.ಡಿ.ಒ ರಾಜೇಶ್ ಕೆ.ಸಿ, ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಪೂಜಾರಿ, ಉಪಾಧ್ಯಕ್ಷೆ ಶ್ರೀಮತಿ ಶಾಲಿನಿ, ಸದಸ್ಯರಾದ ಸತೀಶ್ ಶೇರಿಗಾರ್ ಹಂಗಳೂರು, ಶ್ರೀಮತಿ ಜಲಜಾ ಚಂದನ್, ಶ್ರೀಮತಿ ವನಜ, ರೋಷನ್,ಕೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಉಮೇಶ್ ನಾಯಕ್,ಉಪ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಚಂದ್ರಕಲಾ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.