ಕುಂದಾಪುರ(ಅ,20): ಯುವ ಬ್ರೀಗೇಡ್ ಶಂಕರನಾರಾಯಣ ಇವರ ಆಯೋಜನೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳನ್ನು ಜೊತೆಗೂಡಿಸಿಕೊಂಡು “ನನ್ನ ಶಾಲೆಗೆ ನನ್ನ ಸೇವೆ” ಎನ್ನುವ ಶೀರ್ಷಿಕೆಯಡಿಯಲ್ಲಿ ಶಂಕರನಾರಾಯಣದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಅಕ್ಟೋಬರ್,19 ಹಮ್ಮಿಕೊಳ್ಳಲಾಯಿತು.
ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ, ತನ್ನ ಶಾಲೆಯ ಆವರಣವನ್ನು ಚಂದಗಾಣಿಸುವಲ್ಲಿ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ನ ಕಾರ್ಯಕರ್ತರಾದ ಸತೀಶ್ ಶಂಕರನಾರಾಯಣ, ಪ್ರಮೋದ್ ಶಂಕರನಾರಾಯಣ, ಕಿರಣ್ ಉಳ್ಳೂರು,ಚೇತನ್ ಶಂಕರನಾರಾಯಣ ಹಾಗೂ ಮುಖ್ಯ ಅತಿಥಿಗಳಾಗಿ ಸಚ್ಚಿದಾನಂದ ವೈದ್ಯರು ಈ ಕಾರ್ಯಕ್ರಮದಲ್ಲಿ ಜೊತೆಯಾದರು.
ಕಾಲೇಜಿನ ಪ್ರಾದ್ಯಾಯಪಕರಾದ ಈಶ್ವರ್ ಕೆ.ಟಿ ಉಪಸ್ಥಿತಿರಿದ್ದರು. ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳನ್ನೊಳಗೊಂಡು ಒಟ್ಟು 48 ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು . ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಯುವಾ ಬ್ರಿಗೇಡ್ ನ ಸೇವೆ ಹಾಗೂ ಕಾರ್ಯವೈಖರಿ ಬಗ್ಗೆ ವಿವರಿಸಲಾಯಿತು.