ಸಾಲಿಗ್ರಾಮ(ಅ,25): ಇಲ್ಲಿನ ಶ್ರೀ ಗುರು ನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆಯ 5 ವರ್ಷಗಳ ಅವಧಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಉದ್ಯಮಿ ಆನಂದ ಸಿ, ಕುಂದರ್ ಮೂರನೇ ಬಾರಿ ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸಂಜೀವ ಜಿ. ಅವಿರೋಧ ಆಯ್ಕೆಯಾದರು. ನಿರ್ದೇಶಕರು ಹಾಗೂ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಅ,24 ರಂದು ಚುನಾವಣೆ ನಡೆದಿದ್ದು,ಎಲ್ಲ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.