ಉಡುಪಿ (ನ, 02) : ಉಡುಪಿಯ ಅಗ್ನಿಶಾಮಕ ದಳದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನಗೈದವರಿಗೆ ಸನ್ಮಾನ ಕಾರ್ಯಕ್ರಮವನ್ನು ನ.01ರಂದು ಹಮ್ಮಿಕೊಳ್ಳಲಾಯಿತು. ಜೀವರಕ್ಷಕ, ಮುಳುಗು ತಜ್ಞ ಈಶ್ವರ್ ಮಲ್ಪೆ, ಅಗ್ನಿಶಾಮಕ ದಳದ ಸಿಬ್ಬಂದಿ, ರಾಜ್ಯಮಟ್ಟದ ದೇಹದಾಡ್ಯಪಟು, ವೇಟ್ ಲಿಫ್ಟರ್ ಅಶ್ವಿನ್ ಸನಿಲ್ ರವರ ಸೇವೆಯನ್ನು ಗುರುತಿಸಿ ಉಡುಪಿ ಅಗ್ನಿಶಾಮಕದಳದ ವತಿಯಿಂದ ಗೌರವಧನ ದೊಂದಿಗೆ ಸನ್ಮಾನಿಸಲಾಯಿತು.
ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ವಸಂತ್ ಕುಮಾರ್, ಜಿಲ್ಲಾ ನಿವೃತ್ತ ಅಧಿಕಾರಿ ಓಬಯ್ಯ ಮೂಲ್ಯ ಹಾಗೂ ನಿವೃತ್ತ ಪ್ರಮುಖ ಅಧಿಕಾರಿ ಸೂರ್ಯಪ್ರಕಾಶ್ ಪ್ರಸ್ತುತ ಉಡುಪಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಸತೀಶ್ ಎಚ್ಎಂ ಹಾಗೂ ಠಾಣೆ ಸಿಬ್ಬಂದಿಯವರು ಉಪಸ್ಥಿತರಿದ್ದರು.












