ಕೋಟೇಶ್ವರ (ನ, 03) : ಕುಂದಾಪುರ ತಾಲೂಕಿನ ಅತೀ ದೊಡ್ಡ ಜಾತ್ರೆ ಪುರಾಣ ಪ್ರಸಿದ್ದ ಧ್ವಜಪುರ – ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇಗುಲದ ರಥೋತ್ಸವ (ಕೊಡಿ ಹಬ್ಬ) ಇದೇ ನ.19 ರಂದು ನಡೆಯಲಿದೆ.
ನ. 19ರಂದು ನಡೆಯಲಿರುವ ಕೊಡಿಹಬ್ಬ ಉತ್ಸವ ಸರಳ ಸಂಭ್ರಮದಿಂದ ಆಚರಿಸಲು ತಾಲೂಕಿನ ಪ್ರತಿಯೋರ್ವ ಭಕ್ತರು ಸಹಕರಿಸಬೇಕೆಂದು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎಂ. ಪ್ರಭಾಕರ ಶೆಟ್ಟಿ ಭಕ್ತರಲ್ಲಿ ಕೋರಿಕೊಂಡಿದ್ದಾರೆ.