ಕುಂದಾಪುರ (ನ,5): ಡಾ.ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರ ,ಸ್ವರಾಜ್ಯ ೭೫ ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿ ಇವರ ವತಿಯಿಂದ ಡಾ.ಬಿ.ಬಿ.ಹೆಗ್ಡೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಗಳಿಗೆ ಒಂದು ದಿನದ ಶಾಸನದ ಬಗ್ಗೆ ಮಾಹಿತಿ,ಪಡಿಯಚ್ಚು ತೆಗೆಯುವ ಹಾಗೂ ತರಬೇತಿಯೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮ ನ,03 ರಂದು ಕಂದಾವರ ಶ್ರೀ ಮಹಾಗಣಪತಿ ,ಈಶ್ವರ ,ಪಾವ೯ತಿ ದೇವಸ್ಥಾನ ಕೊಳನಕೋಡು ನಲ್ಲಿ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಸುಭಾಸ್ ನಾಯಕ್ ಬಂಟಕಲ್ಲು ಪುರಾತತ್ವ ಹಾಗೂ ಶಾಸನ ಸಂಶೋಧಕರು ಉಡುಪಿ ಜಿಲ್ಲೆ ಇವರು ವಿದ್ಯಾಥಿ೯ ಗಳಿಗೆ ತರಬೇತಿ ನೀಡಿದರು.ಈ ಸಂದರ್ಭದಲ್ಲಿ ಕಾಲೇಜಿನ ಎನ್.ಎಸ್.ಎಸ್ ಯೋಜನಾಧಿಕಾರಿ ಶ್ರೀ ಪ್ರವೀಣ್ ಮೊಗವೀರ ಗಂಗೊಳ್ಳಿ, ದೇವಸ್ಥಾನ ಆಡಳಿತ ಮಂಡಳಿಯ ಶ್ರೀ ಉದಯ ಹೇರಿಕೇರಿ,ಶ್ರೀ ಪ್ರದೀಪ ಕುಮಾರ್ ಬಸ್ರೂರು, ಶ್ರೀ ರಾಘವೇಂದ್ರ ಬಳ್ಕೂರು, ಶ್ರೀ ಸಂತೊಷ್ ಬಳ್ಕೂರು,ಶ್ರೀ ರಮೇಶ್ ವಕ್ವಾಡಿ ಈ ಸಂದಭ೯ದಲ್ಲಿ ಉಪಸ್ಥಿತರಿದ್ದರು.
ಪಡಿಯಚ್ಚಿನ ಕಾಪಿ ಪ್ರತಿಯನ್ನು ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಇತಿಹಾಸ ದಾಖಲೆಗಳ ವಿಭಾಗ ಅಧ್ಯಯನದ ದೃಷ್ಟಿಯಿಂದ ಹಸ್ತಾಂತರಿಸಲಾಯಿತು.