ಉಡುಪಿ (ನ,9): ಕನ್ನಡ ಜಾನಪದ ಪರಿಷತ್ ಬೆಂಗಳೂರು ಹಾಗೂ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಜಾನಪದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನ,08 ರಂದು ನಡೆಯಿತು.ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ.ಎಸ್ ಬಾಲಾಜಿ ರವರು ಮಾತನಾಡಿ ಜಾನಪದ ಮೂಕಾದರೆ ಮಾನವ ಜಾನಂಗ ಮೂಕ ಆದಂತೆ,ಆದ್ದರಿಂದ ಜಾನಪದ ಕಲೆ ಸಂಸ್ಕತಿಯನ್ನು ಇಂದಿನ ಯುವ ಜನಾಂಗ ಉಳಿಸಿ ಬೆಳೆಸ ಬೇಕೆಂದು ಕರೆನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರುದ್ರೆಗೌಡಕಾರ್ಯಕ್ರಮದ ಅಧ್ಯ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಜಾನಪದ ಪರಿಷತ್ ಕರಾವಳಿ ಜಿಲ್ಲೆಗಳ ವಿಭಾಗೀಯ ಸಂಚಾಲಕರಾದ ಡಾ.ಭಾರತಿ ಮರವಂತೆ, ವಿದ್ವಾಂಸರಾದ ಡಾ.ಕನರಾಡಿ ವಾದಿರಾಜ್ ಭಟ್, ರಾಮನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ಕಾಂತಪ್ಪ ,ಕುಂದಾಪುರ ತಾಲೂಕು ಅಧ್ಯಕ್ಷರಾದ ಶ್ರೀ ಉದಯ ಬಿ,ಹಿರಿಯ ಉಪನ್ಯಾಸಕರಾದ ಡಾ. ಯಾದವ ಕರ್ಕೇರಾ ಉಪಸ್ಥಿತರಿದ್ದರು.
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಗಂಗೊಳ್ಳಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾಪು ತಾಲೂಕು ಅಧ್ಯಕ್ಷರಾದ ಪ್ರಕಾಶ್ ಸುವರ್ಣ ಧನ್ಯವಾದ ಸಮರ್ಪಿಸಿದರು. ಉಪನ್ಯಾಸಕರಾದ ದಯಾನಂದ ಡಿ ಕಾರ್ಯಕ್ರಮ ನಿರ್ವಹಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಕೋಗಿಲೆ ರಾಜ್ಯ ಪ್ರಶಸ್ತಿ ಪುಸ್ಕೃತರಾದ ಡಾ.ಗಣೇಶ್ ಗಂಗೊಳ್ಳಿ ಯವರನ್ನು ಡಾ.ಎಸ್ ಬಾಲಾಜಿ ಯವರು ಸನ್ಮಾನಿಸಿದರು.