ಕೋಟೇಶ್ವರ (ನ, 17) : ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಳದ ವಾರ್ಷಿಕ ರಥೋತ್ಸವ – ಕೊಡಿ ಹಬ್ಬದ ಅಂಗವಾಗಿ ನ,20 ರ ರಾತ್ರಿ 8 ಗಂಟೆಗೆ ಕೋಟಿಲಿಗೇಶ್ವರ ದೇವಸ್ಥಾನದ ಸದಾನಂದ ರಂಗಮಂಟಪದಲ್ಲಿ ಕೋಟಿಲಿಂಗೇಶ್ವರ ಕಲಾಬಳಗ (ರಿ.) ಇವರಿಂದ ಯಕ್ಷಗಾನ ದಿವಂಗತ ಎಮ್. ಜಿ ಬರವಣಿ ವಿರಚಿತ ಯಕ್ಷಗಾನ ಗುರುಗಳಾದ ಕಡ್ಲೆ ಗಣಪತಿ ಹೆಗ್ಡೆ ನಿರ್ದೇಶನದಲ್ಲಿ –“ಕೌಸಲ್ಯಾ ವಿವಾಹ” ಪ್ರಸಂಗ ಪ್ರದರ್ಶನ ಗೊಳ್ಳಲಿದೆ.
ಹಿಮ್ಮೇಳದ ಭಾಗವತಿಕೆಯಲ್ಲಿ ಹೆಸರಾಂತ ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ, ಮದ್ದಲೆಯಲ್ಲಿ ರಾಘವೇಂದ್ರ ಭಟ್ ಯಲ್ಲಾಪುರ,ಚೆಂಡೆವಾದನದಲ್ಲಿ ಶ್ರೀನಿವಾಸ ಪ್ರಭು (ಗುಂಡ) ಹಾಗೂ ಮುಮ್ಮೇಳದಲ್ಲಿ ಬಾಲಗೋಪಾಲನಾಗಿ , ಧನ್ವಿ ಪ್ರಸಾದ್, ಸಾದ್ವಿ ಪ್ರಸಾದ್, ಅಮಿತ್ ಮಿತ್ಯಂತ ,ತೇಜಸ್ ಭಟ್ ಪ್ರಸಾದ್, ಪೀಠಿಕೆ ಸ್ತ್ರೀ ವೇಷ’ ಸಖಿಯರು ವೈಷ್ಣವಿ, ಅನ್ವಿತಾ ,ರಾವಣ – ಶಶಾಂಕ್ ಮಿತ್ಯಂತ, ದಶರಥ 1 – ನಿಖಿತ್, ದಶರಥ 2 ನಂದಿನಿ, ಭಾನುಮಂತ ಯಶಸ್, ಸುಮಂತ – ಬ್ರಾಹ್ಮೀ, ಕೌಸಲ್ಯೆ – ಅಭಿಕ್ಷಾ, ಬ್ರಹ್ಮ – ಸುಶಾಂತ್, ಪ್ರಹಸ್ತ – ಪ್ರೀತಮ್ ಮಯ್ಯ, ಮಂತ್ರಿ – ಓಂ ಪ್ರಸಾದ್, ಸೇನಾಧಿಪತಿ – ಅಭಿಷ್ಮಾ, ಪ್ರವೀಣ್ HP, ಮಧು – ಪ್ರಜ್ವಲ್ ಶೆಟ್ಟಿ, ವಿಭೀಷಣ – ಸಾಕ್ಷಿನ್, ರಾವಣನ ಬಲ – ಶಶಾಂಕ್ ಉಪಸ್ಥಿತರಿರಲಿದ್ದಾರೆ.