ಕುಂದಾಪುರ,(ನ,18): ಇಲ್ಲಿನ ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಎನ್.ಎಸ್.ಎಸ್ ಹಾಗೂ ಸೆಂಟರ್ ಫಾರ್ ಕಮ್ಯುನಿಟಿ ಸರ್ವಿಸ್ ಘಟಕಗಳ ಆಶ್ರಯದಲ್ಲಿ ತಲ್ಲೂರು – ಕನ್ಯಾನ ದ ನಮ್ಮ ಭೂಮಿ (The Concerned for Working Children) ಸ್ವಯಂ ಸೇವಾ ಸಂಸ್ಥೆಯ ಕುರಿತಾದ ಪರಿಚಯ ಕಾರ್ಯಕ್ರಮವನ್ನು ನ,17 ರಂದು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ನಮ್ಮ ಭೂಮಿ ಸಂಸ್ಥೆಯ ಸಂಯೋಜಕರಾದ ಶ್ರೀಮತಿ ಕ್ರಪಾ ಎಮ್.ಎಮ್ ಸಂಸ್ಥೆಯ ಹಿನ್ನೆಲೆ, ಧ್ಯೇಯೊದ್ದೇಶಗಳು ಹಾಗೂ ಕಾರ್ಯಕ್ರಮಗಳ ಕುರಿತಾದ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಎಸ್.ಎಸ್ ಹಾಗೂ ಸೆಂಟರ್ ಫಾರ್ ಕಮ್ಯುನಿಟಿ ಸರ್ವಿಸ್ ಘಟಕಗಳ ಸಹಯೋಗದೊಂದಿಗೆ ಗ್ರಾಮೀಣ ಭಾಗದಲ್ಲಿ ಅವಕಾಶ ವಂಚಿತ ಮಕ್ಕಳ ಕುರಿತಾದ ಸಮೀಕ್ಷೆ ನಡೆಸುವ ಯೋಜನೆಯನ್ನು ರೂಪಿಸಲಾಯಿತು.

ಪಂಚಾಯತ್ ಮಟ್ಟದ ಕಾರ್ಯಕರ್ತರಾದ ಶ್ರೇಯಸ್, ಕಾಲೇಜಿನ ಎನ್.ಎಸ್.ಎಸ್ ಸಹಯೋಜನಾಧಿಕಾರಿ ಶ್ರೀಮತಿ ರೇಷ್ಮಾ ಶೆಟ್ಟಿ ,ಸೆಂಟರ್ ಫಾರ್ ಕಮ್ಯುನಿಟಿ ಸರ್ವಿಸ್ ಸಂಯೋಜಕರಾದ ಸತೀಶ್ ಕಾಂಚನ್,ಆಶಾ ಶೆಟ್ಟಿ , ಕಂಪ್ಯೂಟರ್ ಸೈನ್ಸ್ ಪ್ರಯೋಗಾಲದ ಸಹಾಯಕ ಸಿಬ್ಬಂದಿ ಕ್ರಷ್ಣಮೂರ್ತಿ ಉಡುಪ ಹಾಗೂ ಎನ್.ಎಸ್.ಎಸ್. ಹಾಗೂ ದಿ ಸೆಂಟರ್ ಫಾರ್ ಕಮ್ಯುನಿಟಿ ಸರ್ವಿಸ್ ಘಟಕಗಳ ಸ್ವಯಂಸೇವಕರು ಉಪಸ್ಥಿತರಿದ್ದರು.
ಕಾಲೇಜಿನ ಎನ್.ಎಸ್.ಎಸ್ ಯೋಜನಾಧಿಕಾರಿ ಪ್ರವೀಣ್ ಮೊಗವೀರ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು.













