ಗೋಪಾಡಿ(ನ,25): ಗ್ರಾಮ ವಿಕಾಸ ಸಮಿತಿ ಪಡು ಗೋಪಾಡಿ ಆಯೋಜನೆಯಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕುಟುಂಬ ಪ್ರಬೋಧನ ಪ್ರಮುಖ್ ಗುರುರಾಜ್ ರಾವ್. ಕೋಟೇಶ್ವರ ರವರು ಇತ್ತೀಚೆಗೆ ಚಾಲನೆ ನೀಡಿದ್ದು, ಭಜನೆಯ ಮೂಲಕ ಜನರಲ್ಲಿ ಭಕ್ತಿ ಮತ್ತು ಧಾರ್ಮಿಕ ಶ್ರದ್ಧೆಯನ್ನು ಉದ್ದೀಪನಗೊಳಿಸುವ ನೆಲೆಯಲ್ಲಿ ಗೋಪಾಡಿ ಪಡು ಗ್ರಾಮ ವಿಕಾಸ ಸಮಿತಿಯ ಸಂಚಾಲಕ ಸುರೇಂದ್ರ ಸಂಗಮ್ ರವರ ನೇತೃತ್ವದಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ.
ಯಾವುದೇ ರೀತಿಯ ಹಣ ತೆಗೆದುಕೊಳ್ಳದೆ ಸಂಕ್ಷಿಪ್ತ ರೀತಿಯಲ್ಲಿ ತಮ್ಮ ಸೇವೆಯನ್ನು ಸಂಘದಂಗಳದಲ್ಲಿ ಸೇವೆ ಎಂಬ ಯಜ್ಞದಲ್ಲಿ ಎಂಬ ಆಶಯದೊಂದಿಗೆ ಮಂಡಲ ಪ್ರಮುಖರಾದ ಸುರೇಂದ್ರ ಸಂಗಮ್ ರವರು ಭಜನಾ ಗಾಯಕ ಉದಯ ಕಾಂಚನ್ ರವರ ಜೊತೆ ಸೇರಿ ಚಿಕ್ಕ ಮಕ್ಕಳ ಭಜನಾ ತಂಡ ರಚಿಸಿ ಈಗಾಗಲೇ ಸರಿಸುಮಾರು 35 ಮನೆಗಳಲ್ಲಿ ಯಶಸ್ವಿಯಾಗಿ ಭಜನೆ ಕಾರ್ಯಕ್ರಮ ನೇರವೇರಿಸಿದ್ದಾರೆ.
ಯುವ ಮನಸ್ಸು ಗಳಲ್ಲಿ ಧಾರ್ಮಿಕ ಶ್ರದ್ಧೆ, ಶಿಸ್ತು ,ಸ್ವಚ್ಚತೆ ,ಯೋಗಭ್ಯಾಸದ ಮಹತ್ವ ತಿಳಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಆಯೋಜಕರಾದ ಸುರೇಂದ್ರ ಸಂಗಮ್ ತಿಳಿಸಿದ್ದಾರೆ.