ಮೂಡಬಿದಿರೆ(ನ,26):ಇಲ್ಲಿನ ಶ್ರೀ ಧವಲಾ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ನ,25 ರಂದು ವಿದ್ಯಾರ್ಥಿಗಳಿಗೆ ಕೋಮುಸೌಹಾರ್ದತೆ ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ನಿತೇಶ್ ಬಲ್ಲಾಳ್ ಸಹಶಿಕ್ಷಕರು ಜೈನ್ ಹೈ ಸ್ಕೂಲ್ ಮೂಡಬಿದ್ರಿ ಇವರು ಭಾಗವಹಿಸಿದ್ದರು . ಭಾರತದ ಧರ್ಮ ಸಂಸ್ಕೃತಿ ವಿಚಾರಗಳನ್ನು ತಿಳಿಸುವುದರ ಜೊತೆಗೆ ವಿದ್ಯಾರ್ಥಿಗಳು ಪರಸ್ಪರ ಹೇಗೆ ಸಹಕಾರಿಗಳಾಗಿ ಬದುಕಬೇಕು ಮತ್ತು ಸಮಾಜದಲ್ಲಿ ಇಂತಹ ಮನಸ್ಥಿತಿಯನ್ನು ಬೆಳೆಸುವ ಕೆಲಸ ಮಾಡಬೇಕು ಎನ್ನುವ ವಿಚಾರದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪಪ್ರಾಂಶುಪಾಲರಾದ ಇರುವ ಡಾ. ಪದ್ಮಜಾ ಶೆಟ್ಟಿ ವಹಿಸಿದ್ದರು. ಎನ್ಎಸ್ಎಸ್ ಘಟಕದ ಮುಖ್ಯಸ್ಥರಾಗಿದ್ದ ಸಂತೋಷ್ ಶೆಟ್ಟಿ ಸ್ವಾಗತಿಸಿದರು. ಎನ್ಎಸ್ಎಸ್ ಘಟಕದ ಇನ್ನೊಬ್ಬ ಅಧಿಕಾರಿ ಶ್ರೀಮತಿ ಯಶೋಧ ವಂದಿಸಿದರು. ಕುಮಾರಿ ತನ್ವಿ ಕಾರ್ಯಕ್ರಮವನ್ನು ನಿರ್ವಹಿಸಿದರು.