ಗಂಗೊಳ್ಳಿ (ನ,26): ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ) ಅಂಬಲಪಾಡಿ ಮತ್ತು ಮಣಿಪಾಲ್ ಸಿಗ್ನಾ ಆರೋಗ್ಯ ವಿಮಾ ಕಂಪನಿಯ ಸಹಯೋಗದೊಂದಿಗೆ ಮಾಹೆ ಮಣಿಪಾಲ ಇವರ ಸಹಕಾರದೊಂದಿಗೆ ಯಾವುದೇ ಜಾತಿ, ಮತ,ಧರ್ಮ ಬೇಧಭಾವವಿಲ್ಲದೇ ಸಮಾಜದ ಎಲ್ಲಾ ವರ್ಗದವರಿಗೆ ಲಭ್ಯವಿರುವ ಜಿ. ಶಂಕರ್ ಆರೋಗ್ಯ ಸುರಕ್ಷಾ ಕಾರ್ಡುಗಳ ನೋಂದಾವಣಿ ನ,15 ರಿಂದ ಪ್ರಾರಂಭಗೊಂಡಿದ್ದು ಪ್ರಯುಕ್ತ ನ,27ರಂದು ಶನಿವಾರ ಮಧ್ಯಾಹ್ನ ಸಮಯ 2 ರಿಂದ 5 ಗಂಟೆಯ ತನಕ ಗಂಗೊಳ್ಳಿ ಗ್ರಾಮ ಪಂಚಾಯತ್ ಎದುರುಗಡೆ ಇರುವ ಮಂಜುನಾಥ ಸ್ಟೋರ್ ್ಸ ಬಳಿ ಜಿ. ಶಂಕರ್ ಆರೋಗ್ಯ ಕಾರ್ಡ್ ನೋಂದಣಿ ಅಭಿಯಾನ ನಡೆಯಲಿದೆ. ಅನಿರೀಕ್ಷಿತವಾಗಿ ಬರುವ ಆರೋಗ್ಯ ಸಮಸ್ಯೆಗಳಿಗೆ ಮುಂಜಾಗ್ರತೆಯಾಗಿ ಆರೋಗ್ಯ ವಿಮೆಯನ್ನು ಮಾಡಿಸಿಕೊಳ್ಳಲು ಕೊರಲಾಗಿದೆ.
ಹೊಸದಾಗಿ ಜಿ. ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ಮಾಡಿಸಲು ಬೇಕಾದ ದಾಖಲೆಗಳು : 1.ಕುಟುಂಬದ ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿ ಮತ್ತು ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ. 2. ಕಳೆದ ಬಾರಿ ಆರೋಗ್ಯ ಸುರಕ್ಷಾ ಕಾರ್ಡ್ ನೋಂದಾಯಿಸಿಕೊಂಡವರು ಅದರ ಜೆರಾಕ್ಸ್ ಪ್ರತಿಯೊಂದಿಗೆ ರೇಷನ್ಕಾರ್ಡ್ ಮತ್ತು ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ನೀಡಿ ಪುನರ್ ನೋಂದಾವಣೆ ಮಾಡಿಕೊಳ್ಳಲು ವಿನಂತಿ. 3. ಒಂದು ಆರೋಗ್ಯ ಸುರಕ್ಷಾ ಕಾರ್ಡಿನ ಬೆಲೆ 1500/- ನಿಗದಿಪಡಿಸಿದ್ದು, ಒಂದು ಕುಟುಂಬದ ಗರಿಷ್ಠ ಐದು ಜನರು ವಿಮಾ ಸೌಲಭ್ಯಕ್ಕೆ ಒಳಪಡಲು ಅವಕಾಶ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಪ್ರವೀಣ್ ಗಂಗೊಳ್ಳಿ-7411420325
ಸತೀಶ್ ಗಂಗೊಳ್ಳಿ-78490 91323
ಪ್ರಭಾಕರ್ ಸೇನಾಪುರ -9110871688
ಲೋಹಿತಾಶ್ವ ಆರ್ ಕುಂದರ್ -9611797131