ಕುಂದಾಪುರ(ಜ. 18): ಇಲ್ಲಿನ ನಾಡದ ಶ್ರೀ ಹಾಡಿಗರಡಿ ದೈವಸ್ಥಾನದಲ್ಲಿ ವಾರ್ಷಿಕ ಹಾಲು ಹಬ್ಬ- ಗೆಂಡಸೇವೆ, ಮಹಾ ಅನ್ನಸಂತರ್ಪಣೆ ಜನವರಿ 14 ಮತ್ತು 15ರಂದು ಬಹಳ ವಿಜೃಂಭಣೆಯಿಂದ ಜರುಗಿತು. ಜ.14 ರ ಬೆಳಿಗ್ಗೆ ಮಂಗಳಾರತಿ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ಕೊಡಗುಂಜಿ ಕಳುವಿನ ಬಾಗಿಲುವಿನಲ್ಲಿ ಮೂಲಸ್ಥಾನ ಸ್ವಾಮಿ ಪೂಜೆ. ನಾಗ ಸನ್ನಿಧಿಯಲ್ಲಿ ಪೂಜೆ, ನಾಗದರ್ಶನ, ಮಹಾಮಂಗಳಾರತಿ, ದೈವದರ್ಶನ, ಗೆಂಡಸೇವೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ಸಾಂಸ್ಕೃತಿಕ […]
Category: ನಮ್ಮ ಕುಂದಾಪುರ
ನಮ್ಮ ಕುಂದಾಪುರ
ಡಿಸೆಂಬರ್ 5 ರಂದು ಇಡೂರು ಕುಂಜ್ಞಾಡಿಯ ಸಾಂಪ್ರದಾಯಿಕ ಕಂಬಳೋತ್ಸವ
ಹೆಮ್ಮಾಡಿ ( ನ.22): ಕುಂದಾಪುರ ತಾಲ್ಲೂಕಿನ ಇಡೂರು ಕುಂಜ್ಞಾಡಿ ಹಾಯ್ಗೂಳಿ ಕಂಬಳೋತ್ಸವವು ಡಿಸೆಂಬರ್ 05 ರಂದು ಕುಂಜ್ಞಾಡಿ ಹಾಯ್ಗೂಳಿ ಕಂಬಳಗದ್ದೆಯಲ್ಲಿ ಮಧ್ಯಾಹ್ನ.12 ಗಂಟೆಗೆ ನೆಡೆಯಲಿದೆ. ಕರ್ನಾಟಕದ ಕರಾವಳಿಯಲ್ಲಿ ಕಂಬಳವು ದೈವಿಕ ಮತ್ತು ಐತಿಹಾಸಿಕ ಕ್ರೀಡೆ.ರೈತಾಪಿ ಜನರು ತಮ್ಮ ತಮ್ಮ ಗೆದ್ದೆಯ ಬತ್ತದ ಕಟಾವು ನಂತರ ತಮ್ಮ ಕೊಣಗಳೊಂದಿಗೆ ಮನರಂಜನೆ ಕ್ರೀಡೆಯಾಗಿ ಕಂಬಳವನ್ನು ಆಚರಿಸುವ ಪದ್ದತಿಯನ್ನು ನಮ್ಮ ಪೂರ್ವಜರು ಶತಮಾನಗಳಿಂದ ಊರಿನ ದೇವರ ಹೆಸರಿನೊಂದಿಗೆ ಆಚರಿಸುತ್ತಾ ಬಂದಿದ್ದಾರೆ. ಇಂತಹ ಒಂದು ಸಾಂಪ್ರದಾಯಿಕ […]
ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಜ್ಞಾನ ಸುಧಾ ವಿದ್ಯಾರ್ಥಿಯ ಸಾಧನೆ
ಉಡುಪಿ ( ಆ,18): ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ ಬೆಂಗಳೂರಿನ ಬಸವನ ಗುಡಿಯಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ಈಜು ಸ್ಪರ್ಧೆಯಲ್ಲಿ 400 ಮೀ ಇಂಡ್ ಮಿಡ್ಲೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿಧ್ಯಾರ್ಥಿನಿಯಾದ ಕುಮಾರಿ ಭೂಮಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಕಾರ್ಕಳದ ಶ್ರೀ ಕೆ. ವಿ ಪ್ರವೀಣ್ ಹಾಗೂ ಶ್ರೀಮತಿ ದೀಪ್ತಿ ಪ್ರಭು […]
ಅ. 19 ರಂದು ಕಲಾಕ್ಷೇತ್ರದಲ್ಲಿ ಕಲ್ಯಾಣೋತ್ಸವ- ಯಕ್ಷಗಾನ ವೈಭವ
ಬೆಂಗಳೂರು (ಆ,18): ಕಲಾಕ್ಷೇತ್ರ ಯಕ್ಷಮಿತ್ರ ಬಳಗ ಬೆಂಗಳೂರು ಇವರ ಪ್ರಸ್ತುತಿಯಲ್ಲಿ ಸಾವಿತ್ರಿ ವೈಜಯಂತಿ ಗಿರಿಜಾ ಈ ಅಪರೂಪದ ಪೌರಾಣಿಕ ಯಕ್ಷಗಾನ ಪ್ರದರ್ಶನ ಬೆಂಗಳೂರಿನ ಯಕ್ಷ ಕೈಲಾಸವೆಂದು ಪ್ರಖ್ಯಾತಿ ಪಡೆದ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷ ನಕ್ಷತ್ರ ಟ್ರಸ್ಟ್ ಕಿರಾಡಿ (ರಿ) ಇವರ ಸಂಯೋಜನೆಯಲ್ಲಿ ಸುಪ್ರಸಿದ್ಧ ಕಲಾವಿದರು ಮತ್ತು ಅತಿಥಿ ಕಲಾವಿದರ ಸಂಗಮದಲ್ಲಿ ಅಕ್ಟೋಬರ್ 19 ರ ರಾತ್ರಿ 9:30ಕ್ಕೆ ನಡೆಯಲಿದೆ. ಯಕ್ಷಗಾನ ಕಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಈ […]
ಸೋಮಶೇಖರ್ ಖಾರ್ವಿಯವರಿಗೆ ಬೆಸ್ಟ್ ಪೋಸರ್ ಪ್ರಶಸ್ತಿ
ಕುಂದಾಪುರ (ಅ. 15): ಉಚ್ಚಿಲ ದಸರಾ ಉತ್ಸವದ ಪ್ರಯುಕ್ತ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಬಾಡಿಬಿಲ್ಡಿಂಗ್ ಸ್ಪರ್ಧೆಯ 60 ಕೆಜಿ ವಿಭಾಗದಲ್ಲಿ ಭಾಗವಹಿಸಿದ ಸೋಮಶೇಖರ್ ಖಾರ್ವಿ ಕಂಚುಗೋಡುರವರು ಬೆಸ್ಟ್ ಪೊಸರ್ ಪ್ರಶಸ್ತಿ ಪಡೆದಿದ್ದಾರೆ. ಈಗಾಗಲೇ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಸೋಮಶೇಖರ ಖಾರ್ವಿ ಯವರು ಮಿಸ್ಟರ್ ಇಂಡಿಯಾ ಆಗುವ ಕನಸನ್ನು ಹೊಂದಿದ್ದಾರೆ.
ಕನ್ನಡ ಕರಾವಳಿ ಭಾಗದಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಕೇಳಿ ಬಂದಾಗ ಮೊದಲು ನೆನಪಾಗುವ ಹೆಸರು ಸತೀಶ್ ಸಾಲ್ಯಾನ್ ಮಣಿಪಾಲ್
ದಾನದಲ್ಲೇ ಅತ್ಯಂತ ಶ್ರೇಷ್ಠ ದಾನ ಅದು ರಕ್ತದಾನ ಎಂದು ನಂಬಿದ ವ್ಯಕ್ತಿ ರಕ್ತದ ಆಪತ್ಪಾಂಧವ ಶ್ರೀ ಸತೀಶ್ ಸಾಲ್ಯಾನ್ ಮಣಿಪಾಲ್ . ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಯಲ್ಲಿ ದೇವರನ್ನು ಕಾಣುವ ವ್ಯಕ್ತಿತ್ವ ಸತೀಶರದ್ದು. ಸತೀಶ್ ಸಾಲ್ಯಾನ್ ಓರ್ವ ರಕ್ತದಾನಿ, ರಕ್ತದ ಜೊತೆಗಾರ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಅವರೊಬ್ಬ ಅಪ್ಪಟ ಹೃದಯವಂತ, ಸಂವೇದನಶೀಲ ಮತ್ತು ಮಾನವೀಯತೆ ತುಂಬಿಕೊಂಡಿರುವ ಕರುಣಾಮಯಿ ಮತ್ತು ಮಗುವಿನಂತ ಮನಸ್ಸಿನವರು ಎಂದರೆ ಅತೀಶಯೋಕ್ತಿ ಆಗದು. ಸತೀಶ್ […]
ರೋಟರಿ ಕ್ಲಬ್ ಕೋಟೇಶ್ವರ: ಪದಪ್ರದಾನ ಸಮಾರಂಭ-ಅಧ್ಯಕ್ಷರಾಗಿ ಸತೀಶ ಎಂ. ನಾಯ್ಕ ಅಧಿಕಾರ ಸ್ವೀಕಾರ
ಕೋಟೇಶ್ವರ, (ಜು.15) :ರೋಟರಿ ಕ್ಲಬ್ ಕೋಟೇಶ್ವರ ಇದರ2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಜುಲೈ 13 ರಂದು ತೆಕ್ಕಟ್ಟೆ ಯ ಗ್ರೇಸ್ ಕನ್ವೆನ್ಸನ್ ಹಾಲ್ ನಲ್ಲಿನಡೆಯಿತು. ನೂತನ ಅಧ್ಯಕ್ಷ ಸತೀಶ ಎಂ. ನಾಯ್ಕ ಮತ್ತು ಕಾರ್ಯದರ್ಶಿ ಸುಭಾಸ್ ಚಂದ್ರ ಶೆಟ್ಟಿ ಅವರಿಗೆ ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಸಲಹೆಗಾರರದ ಎಂಪಿಎಚ್ಎಫ್ ಬಿ ಶೇಖರಶೆಟ್ಟಿ ಪದಪ್ರದಾನ ನೆರವೇರಿಸಿದರು. 2023-24ನೇ ಸಾಲಿನ ಅಧ್ಯಕ್ಷ ಜಗದೀಶ ಮೊಗವೀರ ಸಮಾರಂಭದ ಅಧ್ಯಕ್ಷತೆ […]
ಪದ್ಮಶ್ರೀ ಪ್ರಶಸ್ತಿಗೆ ಉಡುಪಿ ಯುವ ಸಾಧಕ ಸಂಜಯ್ ದಯಾನಂದ ಕಾಡೂರು ನಾಮನಿರ್ದೇಶನ
ಉಡುಪಿ(ಜು,14): ಉಡುಪಿ ಜಿಲ್ಲೆಯ ಕಾಡೂರು ಶ್ರೀಮತಿ ಸುನೀತಾ ಮತ್ತು ದಯಾನಂದ ಪೂಜಾರಿಯವರ ಪುತ್ರ ಸಂಜಯ್ ದಯಾನಂದ ಪೂಜಾರಿ ಯವರು 2025ರ ಭಾರತದ 4ನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ. ಇವರು ಯುವ ಕಲಾವಿದ, ಉದ್ಯಮಿ, ಸಮಾಜ ಸೇವಕ ಹಾಗೂ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಎಲ್ಲರ ಮನದಲ್ಲೂ ಮೈಕ್ರೊ ಸಂಜು, ನ್ಯಾನೋ ಗಣೇಶ ಎಂದೇ ಗುರುತಿಸಿಕೊಂಡಿದ್ದಾರೆ. ಮೈಕ್ರೋ ಕಲಾವಿದರಾಗಿ 2010 ರಲ್ಲಿ ತನ್ನ ಮೈಕ್ರೋ ಗಣೇಶನ ವಿಗ್ರಹಕ್ಕಾಗಿ […]
ಏಷ್ಯಾನ್ ಪೆಷಿಫಿಕ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್:ವಿಜಯ ಕಾಂಚನ್ ಬೈಕಂಪಾಡಿಯವರಿಗೆ ಚಿನ್ನದ ಪದಕ
ಉಡುಪಿ (ಜು,10): ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ಜರಗಿದ ಏಷ್ಯಾನ್ ಪೆಷಿಫಿಕ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ -2024ನಲ್ಲಿ 105ಕೆಜಿ ವಿಭಾಗದ M2 ನಲ್ಲಿ 2 ಚಿನ್ನದ ಪದಕ ಪಡೆದು ಬೆಸ್ಟ್ ಲಿಫ್ಟಿರ್ ಪ್ರಶಸ್ತಿಯನ್ನು ವಿಜಯ ಕಾಂಚನ್ ಬೈಕಂಪಾಡಿ ಪಡೆದು ಸಾಧನೆಗೈದಿದ್ದಾರೆ. ಇವರು ಏಕಲವ್ಯ ಪಶಸ್ತಿ ವಿಜೇತ ಸತೀಶಕುಮಾರ್ ಕುದ್ರೋಳಿಯವರ ಶಿಷ್ಯ, ಸೆನ್ ಕ್ರೈಂ ಮಂಗಳೂರು ಸಿಟಿ ಯಲ್ಲಿ ಉದ್ಯೋಗ ಹಾಗೂ ಮಂಗಳೂರು ಬಾಲಾoಜನೇಯ,ರಾಮಾಂಜನೇಯ,ಪವರ್ ಜೋನ್,ಬ್ಲಾಕ್ ರಾಕ್, ಮೈ ಫಿಟ್ನೆಸ್ ಜಿಮ್ […]
ಕಲರ್ಸ್ನಲ್ಲಿ ಹೊಸ ಧಾರಾವಾಹಿ ‘ನನ್ನ ದೇವ್ರು’ಜುಲೈ 8ರಿಂದ ನಿತ್ಯ ಸಂಜೆ 6:30ಕ್ಕೆ ಪ್ರಸಾರ ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ಮರಳಿ ಕಿರುತೆರೆಗೆ
ಕೌಟುಂಬಿಕ ಮೌಲ್ಯಗಳನ್ನು ಬಿಂಬಿಸುವ ಸದಭಿರುಚಿಯ ಧಾರಾವಾಹಿಗಳಿಗೆ ಹೆಸರಾದ ಕಲರ್ಸ್ ಕನ್ನಡ ಇದೀಗ ‘ನನ್ನ ದೇವ್ರು’ ಎಂಬ ಹೊಸ ಕತೆಯನ್ನು ಹೊತ್ತು ತಂದಿದೆ. ಜುಲೈ 82024 ರಿಂದ ಪ್ರಸಾರ ಆರಂಭಿಸಲಿರುವ ಈ ಹೊಸ ಧಾರಾವಾಹಿಯನ್ನು ನೀವು ಸೋಮವಾರದಿಂದ ಶುಕ್ರವಾರದ ತನಕ ಪ್ರತಿ ಸಂಜೆ 6.30 ಕ್ಕೆ ವೀಕ್ಷಿಸಬಹುದು. ‘ನನ್ನ ದೇವ್ರು’ ಧಾರಾವಾಹಿಯ ವಿಶೇಷವೆಂದರೆ “ಅಶ್ವಿನಿ ನಕ್ಷತ್ರ’ದಿಂದ ಮನೆಮಾತಾಗಿದ್ದ ಮಯೂರಿ ಮತ್ತೆ ಕಿರುತೆರೆಗೆ ಮರಳಿರುವುದು. ಈ ಧಾರಾವಾಹಿಯಲ್ಲಿ ಮಯೂರಿಯದು ಸಣ್ಣ ಊರಿನ ಬಡ […]