ಕುಂದಾಪುರ(ಡಿ,02): ಸುಣ್ಣಾರಿಯ ಎಕ್ಸಲೆಂಟ್ ಇಂಡಿಯನ್ ಸ್ಕೂಲ್ ಮತ್ತು ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೊಸ್ಕರ ಸುನಾದ ಸಂಗಮ ಎನ್ನುವ ವಿನೂತನ ಕಾರ್ಯಕ್ರಮದ ಉದ್ಘಾಟನೆಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಡ್ರಾಮಾ ಜೂನಿಯರ್ ಖ್ಯಾತಿಯ ಸಿಂಚನ ಕೋಟೇಶ್ವರ ಯವರು ಪ್ರತಿಯೊಂದು ಶಾಲೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸಿದಾಗ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಕ್ಕಂತಾಗುತ್ತದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ನುಡಿದರು.
ಸಂಸ್ಥೆಯ ಅಧ್ಯಕ್ಷರಾದ ಡಾ. ಎಚ್. ರಮೇಶ್ ಶೆಟ್ಟಿ ಯವರು ಪ್ರಾಸ್ತವಿಕ ಮಾತನಾಡಿ ಎಕ್ಸಲೆಂಟ್ ಕುಂದಾಪುರ ಸಂಸ್ಥೆಯು ವಿದ್ಯಾರ್ಥಿಗಳನ್ನು ಕೇವಲ ತರಗತಿ ಪಠ್ಯಕ್ರಮಕ್ಕೆ ಸೀಮಿತಗೊಳಿಸದೆ ಅವರ ಪ್ರತಿಯೊಂದು ಪ್ರತಿಭೆಗೂ ಕೂಡ ಪ್ರೋತ್ಸಾಹ ನೀಡಿ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹೆಚ್ಚಿನ ಒತ್ತನ್ನು ನೀಡುತ್ತವೆ ಎಂದರು. ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿಯವರು ಮಾತನಾಡಿ ನಾವು ವಿದ್ಯಾರ್ಥಿಗಳ ಪೋಷಕರಿಗೆ ಆಶ್ವಾಸನೆ ಕೊಟ್ಟ ಹಾಗೆ ನಡೆದು ಕೊಂಡಿದ್ದೇವೆ. ಬರಹದ ಜೊತೆಗೆ ಬದುಕನ್ನು ರೂಪಿಸುವ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತಿದೆ ಎಂದರು.
ಸುನಾದ ಸಂಗಮ – ಕಲಾಗುರುಗಳ ಸಂಗಮ
ಎಕ್ಸಲೆಂಟ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಗೈದಿರುವ ಕಲಾವಿದರಿಂದ ಪ್ರತಿ ಶನಿವಾರ ತರಬೇತಿ ನೀಡಲಾಗುತ್ತದೆ.
ಪತ್ಯೇತರ ಚಟುವಟಿಕೆಗಳಾದ ಯಕ್ಷಗಾನ ತರಬೇತಿ, ಕೀಬೋರ್ಡ ವಾದನ, ಸಂಗೀತ, ಭರತನಾಟ್ಯ ಕರಾಟೆ, ಚಿತ್ರಕಲೆ ಹೀಗೆ ಮುಂತಾದ ಸಾಂಸ್ಕೃತಿಕ ಚಟುವಟಿಕೆಯನ್ನು ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರ ತರಬೇತಿ ನೀಡಿ ಅವರನ್ನು ಸಿದ್ಧಗೊಳಿಸುವ ಯೋಜನೆಯಾಗಿದೆ.
ಯಕ್ಷಗಾನ ತರಬೇತಿಗೆ ಖ್ಯಾತ ಯಕ್ಷಗಾನ ಕಲಾವಿದರಾದ ಮಹೇಶ ಮಂದಾರ್ತಿ, ಕರಾಟೆ ಗುರುಗಳಾಗಿ ಸಂದೀಪ್ , ಕಿಬೋರ್ಡ ವಾದಕರಾಗಿ ಚಂದ್ರು ಬೈಂದೂರು, ಭರತನಾಟ್ಯ ತರಬೇತಿಗಾರರಾಗಿ ವಿದ್ವಾನ ಭವಾನಿ ಶಂಕರ ,ಹಾಗೆ ಚಿತ್ರಕಲೆಗೆ ಗಿರೀಶ್ ರವರು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಎಚ್ ರಮೇಶ್ ಶೆಟ್ಟಿಯವರು ಹೇಳುತ್ತಾ ಇದೊಂದು ಕಲಾ ಗುರುಗಳ ಮಹಾ ಸಂಗಮ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಉಷಾಕಿರಣ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮವನ್ನು ಸಹ ಶಿಕ್ಷಕಿ ಸಾಯಿಗೀತಾ ನಿರೂಪಿಸಿದರು. ಸಹ ಶಿಕ್ಷಕಿ ಸರೋಜಿನಿ ಯವರು ಧನ್ಯವಾದಗಳನ್ನು ಸಮರ್ಪಿಸಿದರು.