ಮಲ್ಪೆ (ಡಿ,03): ಮಲ್ಪೆ ಮೀನಿಗಾರಿಕಾ ಬಂದರಿನಲ್ಲಿ ಡಿ,02 ರ ತಡರಾತ್ರಿ 2.30.ಗಂಟೆಗೆ ಆಂಧ್ರಪ್ರದೇಶ ಮೂಲದ ಮೀನುಗಾರ ಲಕ್ಷ್ಮಣ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದ್ದಾರೆ.

ವಿಷಯ ತಿಳಿದ ಆಪತ್ಭಾಂದವ ಈಶ್ವರ ಮಲ್ಪೆ ತಕ್ಷಣ ಬೋಟಿನ ಬಳಿ ತೆರಳಿ ರಕ್ಣಿಸುವುದರ ಜೊತೆಗೆ ಪ್ರಥಮ ಚಿಕಿತ್ಸೆ ನೀಡಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿದರು.ಅಲ್ಲಿನ ವೈದ್ಯರು ಹಾಗೂ ಅವರ ತಂಡ ಲಕ್ಷ್ಮಣ್ ರವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರುಮಾಡಿದ್ದಾರೆ.ಉಡುಪಿ ಜಿಲ್ಲಾಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳ ತುರ್ತು ಸೇವೆಗೆ ಈಶ್ವರ ಮಲ್ಪೆ ಕ್ರತಜ್ಞತೆ ತಿಳಿಸಿದ್ದಾರೆ.
ವರದಿ :ಈಶ್ವರ್ ಸಿ ನಾವುoದ












