ಕನ್ನಡ ಕರಾವಳಿ ಪ್ರಕ್ರತಿಯ ರಮಣೀಯ ತಾಣ. ಒಂದೆಡೆ ಪಶ್ಚಿಮ ಘಟ್ಟದ ಸಾಲಾದರೆ, ಇನ್ನೊಂದೆಡೆ ಕಡಲ ಕಿನಾರೆ ಕರಾವಳಿಗೆ ಸಾಕಷ್ಟು ಮೆರುಗು ನೀಡಿದೆ. ಸದಾ ಹಸಿರುಟ್ಟ ಭೂತಾಯಿ ಇಲ್ಲಿ ಸಂತಸದ ನಗೆ ಬೀರುತ್ತಿದ್ದಾಳೆ. ವಿದ್ಯಾ ದೇವತೆ ಕೂಡ ಇಲ್ಲಿ ಪ್ರಸನ್ನಳಾಗಿದ್ದಾಳೆ ಎನ್ನುವುದು ಹೆಮ್ಮೆ ವಿಷಯ .

ಇಂತಹ ಪುಣ್ಯ ಭೂಮಿಯಲ್ಲಿನ ಜನ ಅನಾದಿ ಕಾಲದಿಂದಲೂ ದೈವ ದೇವರಲ್ಲಿ ಅಪಾರ ನಂಬಿಕೆ ಇಟ್ಟವರು. ಉಡುಪಿ ಹಾಗೂ ದಕ್ಷಿಣ ಕನ್ನಡ ಹತ್ತು ಹಲವು ಪುರಾತನ ದೇವಾಲಯಗಳ ತವರೂರಾಗಿದ್ದು , ಪ್ರವಾಸಿಗರ ಸ್ವರ್ಗವೆಂದರೂ ತಪ್ಪಿಲ್ಲ.

ಉಡುಪಿಯಿಂದ ಕುಂದಾಪುರದ ಕಡೆ ಹೊರಟಾಗ ಕೋಟ ಮೂರುಕೈ ಬಳಿ ಬಲ ತಿರುವು ಪಡೆದು ಸುಮಾರು ಎಂಟು ಕಿಲೋಮೀಟರ್ ದೂರ ತಲುಪಿದರೆ ಎಡಕ್ಕೆ ತಮ್ಮನ್ನು ಸ್ವಾಗತಿಸಲು ಒಂದು ಕಾಮನು ಸಿದ್ದವಿದ್ದು ಅದರೊಳಗೆ ಹೊಕ್ಕಾಗ ಅಲ್ಲೊಂದು ಪುಟ್ಟ ಗ್ರಾಮ ದರ್ಶನವಾಗುತ್ತದೆ.

ಸ್ವಚ್ಛ, ಸುಂದರ, ವಿದ್ಯಾವಂತ ಜನರ ಅಚ್ಲಾಡಿ ಶಿಸ್ತಿಗೆ ಸಾಕಷ್ಟು ಹೆಸರುವಾಸಿ. ಸದಾ ನೆಮ್ಮದಿಯಿಂದ ಇರೋ ಜನ ತಮ್ಮ ನೆಮ್ಮದಿಗೆ ಕಾರಣ ಊರ ಜವಾಬ್ದಾರಿ ಹೊತ್ತ ದೈವ “ಬಬ್ಬರಿಯ” ಅನ್ನೋದು ಆಡು ಮಕ್ಕಳಿಂದ ಆಡುಗೊಲು ಅಜ್ಜಿಯವರೆಗೂ ಹೇಳೋ ಮಾತು.
ಜನರ ನಂಬಿಕೆಗೆ ತಕ್ಕಂತೆ ಊರ ದೇವರ ನೆನೆದು ಯಾವ ಕಾರ್ಯ ಮಾಡಿದರೂ ಫಲಪ್ರದ ಅನ್ನೋದು ಮೊದಲಿಂದಲೂ ಕೇಳಿ ಬಂದ ಸತ್ಯ .
ಊರ ಜನರ ಏಳಿಗೆಯಾದಂತೆ ಶ್ರೀ ದೇವರ ತಾಣ ಕೂಡ ಕಂಗೊಳಿಸಲು ಕಾರಣವಾಗಿದೆ. ಅದಕ್ಕೆ ತಕ್ಕಂತೆ ವರ್ಷಕ್ಕೊಮ್ಮೆ ಗೆಂಡದ ಹಬ್ಬದ ಸೇವೆ ಕೂಡ ಬಲು ವಿಜೃಂಭಣೆಯಿಂದ ನಡೆಯುದು.

ಅದೇ ರೀತಿ ವರ್ಷಕ್ಕೊಮ್ಮೆ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಕಾರ್ಯಕ್ರಮ ಸುಮಾರು ಹದಿನೈದು ವರ್ಷದಿಂದ ಅದ್ದೂರಿಯಾಗಿ ನಡೆಯುತ್ತಿದೆ. ದೂರದ ಊರಿಂದ ನಂಬಿದ ಭಕ್ತರು ಸುತ್ತ ಮುತ್ತಲಿನ ಹತ್ತೂರ ಜನರು ಬಂದು ದೀಪೋತ್ಸವದಲ್ಲಿ ಪಾಲ್ಗೊಂಡು ಮಧ್ಯಾಹ್ನ ನಡೆಯವ ಅನ್ನ ಪ್ರಸಾದ ಸ್ವೀಕರಿಸಿ ತಮ್ಮ ಭಕ್ತಿ ಮೆರೆಯುವರು.
ವರ್ಷಕ್ಕೊಬ್ಬರು ದೀಪೋತ್ಸವ ಜವಾಬ್ದಾರಿ ಹೊತ್ತು ತಮ್ಮ ಸೇವೆ ಕಾರ್ಯ ಕೈಗೊಂಡು ಪುನೀತಾರಾಗುದು ಪದ್ಧತಿ.

ಅದರಂತೆ ಡಿ,02ರಂದು ನಡೆದ ದೀಪೋತ್ಸವವನ್ನು ಮೋನಪ್ಪ ಶೆಟ್ಟಿ ಮತ್ತು ಗಿರಿಜಮ್ಮ ಶೆಡ್ತಿ ದಂಪತಿ,ಮಕ್ಕಳು ಹಾಗೂ ಅಳಿಯಂದಿರು ಸೇವೆ ಜವಾಬ್ದಾರಿ ವಹಿಸಿದ್ದು ಹತ್ತಿರ ಸಾವಿರ ಜನ ದೀಪೋತ್ಸವ ಕಣ್ತುಂಬಿ ಕ್ರತಾರ್ಥರಾದರು.
ಒಂದು ಯಶಸ್ವಿ ಕಾರ್ಯಕ್ರಮಕ್ಕೆ ಆಡಳಿತ ಮಂಡಳಿ ಅಧ್ಯಕ್ಷರಾದ ಜಯಕರ ಹೆಗ್ಡೆ ,ಉಪಾಧ್ಯಕ್ಷ ಭುಜಂಗ ಶೆಟ್ಟಿ, ಖಜಾಂಚಿ ಶೇಖರ ಶೆಟ್ಟಿ, ಕಾರ್ಯದರ್ಶಿ ಶ್ರೀಧರ ಶೆಟ್ಟಿ ಹಾಗೂ ಅಚ್ಲಾಡಿ ಅಡಾರ್ ಮನೆ ಮತ್ತು ಊರ ಸಮಸ್ತರೂ ಸಾಕಷ್ಟು ಪರಿಶ್ರಮವಹಿಸಿದ್ದರು.

ಪ್ರಧಾನ ಅರ್ಚಕರಾದ ಶ್ರೀಧರ್ ಭಟ್ಟರು ಚಿಕ್ಕು ದೈವದಮನೆ ಅರ್ಚಕರಾದ ಭಾಸ್ಕರ್ ಶೆಟ್ಟಿಯವರ ಅಪಾರ ಸೇವೆ ಕೂಡ ಇಲ್ಲಿ ಸ್ಮರಿಸಬಹುದು.
ಮಳೆರಾಯನ ಕ್ರಪೆ ಕೂಡ ಒಂದು ಉತ್ತಮ ಕಾರ್ಯಕ್ಕೆ ಸಾತ್ ನೀಡಿದ್ದು ,ದೇವರ ಪವಾಡ ಅನ್ನೋದು ಭಕ್ತರ ನಂಬಿಕೆ…

ಲೇಖನ :ಪ್ರಭಾಕರ ಶೆಟ್ಟಿ ಅಚ್ಲಾಡಿ.
( ವರದಿಗಾರ ಬೆಂಗಳೂರು )









