ಮೂಡಬಿದಿರೆ(ಡಿ,5): ಶ್ರೀ ಧವಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಇದರ 2021 -22 ನೇ ಸಾಲಿನ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ಡಿ,03ರಂದು ಕಾಲೇಜಿನ ಕಾನ್ಫರೆನ್ಸ್ ಹಾಲಿನಲ್ಲಿ ನಡೆಯಿತು.
ನಿವೃತ್ತ ವೃತ್ತ ನಿರೀಕ್ಷಕ ಶ್ರ ರಾಜಾರಾಮ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಎನ್ಎಸ್ಎಸ್ ನ ಉಪಯುಕ್ತತೆ ಮತ್ತು ಅದನ್ನು ವಿದ್ಯಾರ್ಥಿಗಳು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ವಿವರಿಸಿದರು. ಎನ್ಎಸ್ಎಸ್ ಎನ್ನುವುದು ಸ್ವಯಂ ಸೇವಕರಿಂದ ಕೂಡಿದ ಸಂಸ್ಥೆ. ಸ್ವಯಂಸೇವಕರು ಸ್ವ ಹಿತಾಸಕ್ತಿಯಿಂದ ಸಾಮಾಜಿಕ ಶೈಕ್ಷಣಿಕ ಸೇವೆಗಳನ್ನು ಸ್ವಯಂ ಪ್ರೇರಿತವಾಗಿ ಮಾಡುತ್ತಾ ಬಂದಲ್ಲಿ ದೇಶಪ್ರೇಮ ರಾಷ್ಟ್ರೀಯ ಚಿಂತನೆ ಮೂಡುವುದಕ್ಕೆ ಸಾಧ್ಯ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸುದರ್ಶನ್ ಕುಮಾರ್ ವಹಿಸಿದ್ದರು. ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾಗಿದ್ದ ಶ್ರೀ ಸಂತೋಷ್ ಶೆಟ್ಟಿ ಮತ್ತು ಶ್ರೀಮತಿ ಯಶೋಧ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎನ್ಎಸ್ಎಸ್ ನ ಈ ವರ್ಷದ ನಾಯಕ ರೋಷನ್, ರೋಹಿತ ಆಚಾರ್ಯ, ನಂದಿತಾ, ಕುಮಾರಿ ಸಾಕ್ಷ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕುಮಾರಿ ಸುಪ್ರೀತಾ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಕುಮಾರಿ ತನ್ವಿ ವಂದಿಸಿದರು. ಕುಮಾರಿ ದಿಶಾ ಕಾರ್ಯಕ್ರಮವನ್ನು ನಿರೂಪಿಸಿದರು.