ನಾ ಹೇಗೆ ವರ್ಣಿಸಲಿ ನಿನ್ನ ಪುಸ್ತಕ ಪೆನ್ನುಗಳಿಗೆ ಸೀಮಿತವೇ … ನಿನ್ನೆಲ್ಲಾ ಅನುರಣನ ನೆನಪುಗಳು..? ನಾಲ್ಕು ಸಾಲು ಗೀಚಿದರೆ ಮುಗಿಯಿತೇ ನಮ್ಮೆಲ್ಲ ಸ್ನೇಹ ಸಂಬಂಧಗಳು….??
ತಡಕಾಡುವುದೀ ಮನ ಹೊಸ ಪದ ಹುಡುಕಲು…. ಮಿಡಿಯುವುದೀ ಕ್ಷಣ ನಿನ್ನತನವ ಗುರುತಿಸಲು…. ನಾ ಹೇಗೆ ಬರೆಯಲಿ ಹೇಳು….. ಪದಕಡಲ ಸಾಮ್ರಾಜ್ಞಿ ನೀನು…. ಪದ ಪೋಣಿಸುವ ತಿರುಕ ನಾನು….
ಒಮ್ಮೊಮ್ಮೆ ಯೋಚಿಸುವೆ ನಿನ್ನ ನೆರಳ … ಚಿತ್ರಿಸುವ ಕಲಾಕಾರ ನಾನು…. ಚಿತ್ರಭಂಡಾರವೇ ನೀನಾಗಿರುವಾಗ ನಾನೆಷ್ಟು ಗೀಚಲಿ ಹೇಳುನಿನ್ನ ಅದೇ ರೂಪವನು…
ಪೆನ್ನು ಖಂಡಿಸಿದರೂ ಪುಸ್ತಕ ನಗುತಲಿದೆ ಈ ಹುಚ್ಚು ಕಲ್ಪನೆಯ ನೆನೆದು ಪುಸ್ತಕ ಖಾಲಿಯಾಗಿ….. ಪೆನ್ನು ಮುಗಿದರೂಮುಗಿಯದ ನೆನಪು ನಿನ್ನದು….. ನಾನೆಷ್ಟು ಬರೆಯಲಿ ಹೇಳು….. ನೊಂದ ಹ್ರದಯಕ್ಕೆ ನೆರವಿನ ಶ್ರೀರಕ್ಷೆ ನೀನು…..
ಕವನ :ಗಣೇಶ ಭಟ್