ಅಂಪಾರು (ಡಿ,22) :ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ) ಅಂಬಲಪಾಡಿ ,ಮೊಗವೀರ ಯುವ ಸಂಘಟನೆ (ರಿ.)ಉಡುಪಿ ಜಿಲ್ಲೆ ಹಾಗೂ ಬೈಂದೂರು – ಶಿರೂರು ಘಟಕದ ಸಹಕಾರದೊಂದಿಗೆ ,ಘಟಕದ ಅಧ್ಯಕ್ಷರಾದ ರವಿರಾಜ್ ಚಂದನ್ ಕಳವಾಡಿ ಯವರು ತಮ್ಮ ಹುಟ್ಟುಹಬ್ಬವನ್ನು ಡಿ,20 ರಂದು ವಾಗ್ಜ್ಯೋತಿ ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆ ಮೂಡುಬಗೆ ಅಂಪಾರು ಇಲ್ಲಿನ ವಿಶಿಷ್ಟ ಚೇತನ ಮಕ್ಕಳೊಂದಿಗೆ ಬೆರೆತು ಅವರ ಜೊತೆ ಸಹಭೋಜನ ಹಾಗೂ ಸಿಹಿತಿಂಡಿ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಮೊಗವೀರ ಯುವಸಂಘಟನೆ ಉಡುಪಿ ಇದರ ಜಿಲ್ಲಾ ಅಧ್ಯಕ್ಷರಾದ ಶಿವರಾಮ .ಕೆ . ಎಂ ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಘಟಕದ ಅಧ್ಯಕ್ಷ ರವಿರಾಜ್ ಚಂದನ್ ಕಳವಾಡಿ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಮಾಜಿ ಅಧ್ಯಕ್ಷರಾದ ಸದಾನಂದ ಬಳ್ಕೂರ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ಶ್ಯಾಮಲಾ ಕುಂದರ್ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಹಿರಿಯಡ್ಕ ,ಜಿಲ್ಲಾ ಕೋಶಾಧಿಕಾರಿ ಪಾಂಡುರಂಗ ಬೈಂದೂರು ,ಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ , ಕುಂದಾಪುರ ವಲಯ ಸ್ವರ್ಣ ಕಳಸ ಸಮಿತಿಯ ಕಾರ್ಯದರ್ಶಿ ಜಗದೀಶ್ ಕೋಟೇಶ್ವರ, ಕುಂದಾಪುರ ವಲಯದ ಸ್ವರ್ಣ ಕಳಸದ ಕೋಶಾಧಿಕಾರಿ ಸುಧಾಕರ್ ಕಾಂಚನ, ಜಿಲ್ಲಾ ಉಪಾಧ್ಯಕ್ಷರು ರಘುರಾಮ್ ಹುಣಸಮಕ್ಕಿ, ಜಿಲ್ಲಾ ಪದಾಧಿಕಾರಿ ಶ್ರೀಧರ್ ಕೋಟೇಶ್ವರ ,ಹಾಲಾಡಿ ಘಟಕ ಅಧ್ಯಕ್ಷರು ಶೇಖರ್ ತೋಳಾರ್ ,ಬೈಂದೂರ ಗೌತಮ್ ತಗ್ಗರ್ಸೆ, ಉಪಾಧ್ಯಕ್ಷ ನಾಗರಾಜ್ ಎನ್, ಪದಾಧಿಕಾರಿಗಳಾದ ನಾಗರಾಜ್ ,ಸುಶೀಲ್ ವಿದ್ಯಾನಗರ ,ವಿಜಯ್ ಮಯ್ಯಾಡಿ ,ಈಶ್ವರ್ ಮಯ್ಯಾಡಿ ,ಶಶಿರಾಜ್ ಚಂದನ್ ,ಆನಂದ್ ಕಾಂಚನ್ ಇನ್ನಿತರರು ಹಾಜರಿದ್ದರು.
ವಿಶೇಷ ಅತಿಥಿಗಳಾಗಿ “ಆ ತೊಂಬತ್ತು ದಿನಗಳು ” ಚಲನ ಚಿತ್ರದ ಸಹ ನಾಯಕಿ ಡಾ. ಜಿ ಶಂಕರ್ ರವರ ಸೊಸೆ ಕೃತಿಕ್ ಕುಮಾರಿ, ನಿರ್ದೇಶಕ ರಾಷ್ಟ್ರ ಪ್ರಶಸ್ತಿ ಪಡೆದ ಯಾಕುಬ್ ಗುಲ್ವಾಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.